
ಎರಡನೇ ಟಿ20 ಪಂದ್ಯದ ಪ್ರಿವ್ಯೂ
ಉಭಯ ತಂಡಗಳು ಟಿ20 ಫಾರ್ಮೆಟ್‌ನಲ್ಲಿ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 14 ಪಂದ್ಯ ಜಯಿಸಿದ್ರೆ, ವಿಂಡೀಸ್ 6 ಪಂದ್ಯಗಳಲ್ಲಷ್ಟೇ ಗೆಲುವಿನ ಗೆರೆ ದಾಟಿದೆ. ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 190ರನ್ ಕಲೆಹಾಕಿದ್ದಲ್ಲದೆ, ವಿಂಡೀಸ್ ಅನ್ನು 122ರನ್‌ಗಳಿಗೆ ಕಟ್ಟಿಹಾಕಿದೆ.
ಮೊದಲ ಟಿ20ಯಲ್ಲಿ ಮೂವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಿದ್ದ ರೋಹಿತ್ ಶರ್ಮಾ ಯಶಸ್ವಿ ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಕೂಡ ಯಶಸ್ವಿಯಾದ್ರು. ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ ಮತ್ತು ಅರ್ಷ್‌ದೀಪ್ ಸಿಂಗ್ ಕೆಲವು ವಿಕೆಟ್ ಸಂಪಾದಿಸಿದರು.

ಪಿಚ್ ರಿಪೋರ್ಟ್ ಮತ್ತು ಹವಾಮಾನ
ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್ ಪಿಚ್ ಗಮನಿಸುವುದಾದ್ರೆ, ಇದು ಬ್ಯಾಟ್ಸ್‌ಮನ್ ಮತ್ತು ಬೌಲರ್ ಇಬ್ಬರಿಗೂ ಅನುಕೂಲವಾಗಿದೆ. ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಮೊದಲ ಇನ್ನಿಂಗ್ಸ್‌ಗೆ ಹೋಲಿಸಿದ್ರೆ ಚೇಸಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಶೇಕಡಾ 60ರ ಗೆಲುವಿನ ಸರಾಸರಿ ಹೊಂದಿದೆ. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 143ರನ್ ಆಗಿದೆ.
ಕಾಮನ್‍ವೆಲ್ತ್ 2022: 3ನೇ ದಿನ ಚಿನ್ನದ ಬೇಟೆಯಾಡಿದ ಭಾರತೀಯರು; 4ನೇ ದಿನದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಇಲ್ಲಿನ ಹವಾಮಾನ ಪಂದ್ಯದ ವೇಳೆಗೆ 27 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 79ರಷ್ಟು ಹ್ಯುಮಿಡಿಟಿ ಮತ್ತು 6 km/hr ವೇಗದಲ್ಲಿ ಗಾಳಿ ಬೀಸಲಿದೆ. ಮಳೆ ಬರುವ ಸಾಧ್ಯತೆ ಇಲ್ಲದಿರುವುದು ಉಭಯ ತಂಡದ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ತಂದಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
ಭಾರತ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಶಮರಾ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟೈಮರ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಒಬೆಡ್ ಮೆಕಾಯ್, ಕೀಮೊ ಪೌಲ್ ಅಲ್ಜಾರಿ ಜೋಸೆಫ್, ಅಕೇಲ್ ಹೊಸೈನ್, ಒಬೆದ್ ಮೆಕಾಯ್
IND vs WI: ಈತ ವಿಶೇಷ ಆಟಗಾರ ಎಂದು ಶ್ಲಾಘಿಸಿದ ಆಕಾಶ್ ಚೋಪ್ರಾ

ಡ್ರೀಂ ಫ್ಯಾಂಟೆಸಿ ಟೀಂ 1
ನಾಯಕ- ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್
ಉಪನಾಯಕ - ಜೇನಸ್ ಹೋಲ್ಡರ್, ಕೈಲ್ ಮೇಯರ್ಸ್
ಕೀಪರ್ - ನಿಕೋಲಸ್ ಪೂರನ್, ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ (ನಾಯಕ), ಕೈಲ್ ಮೇಯರ್ಸ್
ಆಲ್ ರೌಂಡರ್ಸ್ - ಜೇಸನ್ ಹೋಲ್ಡರ್(ಉಪನಾಯಕ), ಹಾರ್ದಿಕ್ ಪಾಂಡ್ಯ
ಬೌಲರ್‌ಗಳು - ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಒಬೆದ್ ಮೆಕಾಯ್,ಅಲ್ಜಾರಿ ಜೋಸೆಫ್
ಏಷ್ಯಾ ಕಪ್ ಆಡಲು ರೆಡಿಯಿದ್ದೇನೆ: ಆಯ್ಕೆಗಾರರಿಗೆ ಕೊಹ್ಲಿ ಸಂದೇಶ!

ಡ್ರೀಂ ಫ್ಯಾಂಟೆಸಿ ಟೀಂ 2
ಕೀಪರ್ - ನಿಕೋಲಸ್ ಪೂರನ್, ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಕೈಲ್ ಮೇಯರ್ಸ್
ಆಲ್ ರೌಂಡರ್ಸ್ - ಜೇಸನ್ ಹೋಲ್ಡರ್ (ಉಪ ನಾಯಕ), ಹಾರ್ದಿಕ್ ಪಾಂಡ್ಯ
ಬೌಲರ್‌ಗಳು- ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್
ರೋಹಿತ್ ಶರ್ಮಾ ಡ್ರೀಂ ಫ್ಯಾಂಟೆಸಿ ಟೀಂನಲ್ಲಿ ನಾಯಕರ ಆಯ್ಕೆಯಲ್ಲಿ ಪ್ರಮುಖರಾಗಿದ್ದು, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಶಿಮ್ರಾನ್ ಹೆಟ್ಮೇಯರ್ ಪ್ರಮುಖ ಆಯ್ಕೆಯಾಗಿದ್ದಾರೆ. ಡ್ರೀಂ 11 ಫ್ಯಾಂಟೆಸಿ ತಂಡದ ಬೆಸ್ಟ್ ಸಂಯೋಜನೆ 2-3-2-4 ಆಗಿದೆ. ತಂಡದ ಬಲವನ್ನ ಗಮನಿಸಿದ್ರೆ, ಟೀಂ ಇಂಡಿಯಾ ಈ ಪಂದ್ಯ ಗೆಲ್ಲಬಹುದು.


Click it and Unblock the Notifications
