Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ-ವೆಸ್ಟ್‌ ಇಂಡೀಸ್ 2ನೇ ಟಿ20 ಪಂದ್ಯ: ಟಾಸ್ ಗೆದ್ದ ವೆಸ್ಟ್‌ ಇಂಡೀಸ್ ಬೌಲಿಂಗ್ ಆಯ್ಕೆ LIVE

Ind vs Wi

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್‌ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಕೋಲ್ಕತ್ತಾದ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಚುಟುಕು ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ.

ಟಾಸ್‌ ಗೆದ್ದಿರುವ ವೆಸ್ಟ್ ಇಂಡೀಸ್‌ನಲ್ಲಿ ಕೇವಲ ಒಂದು ಬದಲಾವಣೆ ಆಗಿದೆ. ಮೊದಲ ಪಂದ್ಯದಲ್ಲಿ ಮಿಸ್‌ ಆಗಿದ್ದ ಆಲ್‌ರೌಂಡರ್ ಜೇಸನ್ ಹೋಲ್ಡರ್ ಕಂಬ್ಯಾಕ್ ಮಾಡಿದ್ದು, ಫ್ಯಾಬಿಯನ್ ಅಲೆನ್ ಮಿಸ್ ಆಗಿದ್ದಾರೆ. ಮೊದಲ ಪಂದ್ಯಕ್ಕೂ ಮೊದಲು ಜೇಸನ್‌ ಹೋಲ್ಡ್‌ನ್ ಅಭ್ಯಾಸದ ವೇಳೆ ಗಾಯಗೊಂಡಿದ್ದರು.

ಇನ್ನು ಟಾಸ್ ಸೋತ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಆಡಿದ ಹನ್ನೊಂದು ಆಟಗಾರರನ್ನೇ ರೋಹಿತ್ ಶರ್ಮಾ ಕಣಕ್ಕಿಳಿಸುತ್ತಿದ್ದಾರೆ.

ಐವರು ಬ್ಯಾಟ್ಸ್‌ಮನ್‌, ಓರ್ವ ಆಲ್‌ರೌಂಡರ್, ಇಬ್ಬರು ಲೆಗ್‌ ಸ್ಪಿನ್ನರ್‌ಗಳು, ಮೂವರು ಬೌಲರ್‌ಗಳಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದೆ. ಭಾರತದ ಪರ ಹಿರಿಯ ಸ್ಪಿನ್ನರ್ ಯುಜವೇಂದ್ರ ಚಹಾಲ್ ಜೊತೆಗೆ ಯುವ ಲೆಗ್ಗಿ ರವಿ ಬಿಷ್ಣೋಯಿ ಮಿಂಚಲು ರೆಡಿಯಾಗಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜವೇಂದ್ರ ಚಹಾಲ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋಸ್ಟನ್ ಚೇಸ್, ರೋವ್‌ಮನ್ ಪೊವೆಲ್, ಕೀರಾನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಶೆಲ್ಡನ್ ಕಾಟ್ರೆಲ್

ಭಾರತ-ವೆಸ್ಟ್ ಇಂಡೀಸ್ 2ನೇ ಟಿ20 ಪಂದ್ಯದ ಲೈವ್‌ ಸ್ಕೋರ್ ಈ ಕೆಳಗೆ ತಿಳಿಯಿರಿ

ಪಾಕಿಸ್ತಾನ್ ಸ್ಟೇಡಿಯಂನಲ್ಲೂ ರಾರಾಜಿಸಿದ ವಿರಾಟ್ ಕೊಹ್ಲಿ ಪೋಸ್ಟರ್ | Oneindia Kannada
1
51925

Story first published: Friday, February 18, 2022, 18:43 [IST]
Other articles published on Feb 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+