For Quick Alerts
ALLOW NOTIFICATIONS  
For Daily Alerts
 

IND vs WI 3rd ODI: ಭಾರತ ಆಡುವ 11ರ ಬಳಗ ಹೀಗಿದೆ; ಪದಾರ್ಪಣೆ ಮಾಡುತ್ತಾರಾ ಅರ್ಷದೀಪ್?

IND vs WI 3rd ODI: Indias Predicted Playing XI And Will Arshdeep Singh Make His Debut?

ಈಗಾಗಲೇ ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಪ್ರವಾಸಿ ಭಾರತ ತಂಡ ಮೊದಲ ಎರಡು ಪಂದ್ಯಗಳನ್ನು ಕಡಿಮೆ ಅಂತರದಿಂದ ಗೆದ್ದಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ತಂಡ ಪಂದ್ಯದ ಕೊನೆಯ ಎಸೆತದಲ್ಲಿ ಮೂರು ರನ್‌ಗಳ ಅಂತರದ ಗೆಲುವನ್ನು ಕಂಡರೆ, ಎರಡನೇ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಜಯವನ್ನು ಕಂಡಿತು. ಎರಡನೇ ಏಕದಿನ ಪಂದ್ಯದಲ್ಲಿ ಭಾರತವು ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟಿತ್ತು, ಅವರ ಬದಲಿಯಾಗಿ ಏಕದಿನ ಚೊಚ್ಚಲ ಪಂದ್ಯ ಪ್ರವೇಶ ಮಾಡಿದ ಅವೇಶ್ ಖಾನ್ ಕೂಡ ವಿಕೆಟ್ ರಹಿತರಾದರು ಮತ್ತು ಹೆಚ್ಚಿನ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು.

ಭಾರತ ತಂಡ ಇನ್ನೂ ಒಂದು ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದ್ದು, ಬಹುದಿನಗಳಿಂದ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿರುವ ಅರ್ಷದೀಪ್ ಸಿಂಗ್‌ಗೆ ತಂಡದ ಮ್ಯಾನೇಜ್‌ಮೆಂಟ್ ಅವಕಾಶ ನೀಡುತ್ತದೆಯೇ? ನೋಡಬೇಕಿದೆ.

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಪಂದ್ಯಕ್ಕೆ ಭಾರತದ ಆಡುವ 11ರ ಬಳಗ

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಪಂದ್ಯಕ್ಕೆ ಭಾರತದ ಆಡುವ 11ರ ಬಳಗ

ಶಿಖರ್ ಧವನ್ (ನಾಯಕ): ಮೊದಲ ಏಕದಿನ ಪಂದ್ಯದಲ್ಲಿ 97 ರನ್‌ಗಳ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ನಾಯಕ ಶಿಖರ್ ಧವನ್, ಎರಡನೇ ಪಂದ್ಯದಲ್ಲಿ 31 ಎಸೆತಗಳಲ್ಲಿ 13 ರನ್ ಗಳಿಸಿ ಪ್ರಭಾವ ಬೀರಲು ವಿಫಲರಾದರು. ಆದಾಗ್ಯೂ ಎಡಗೈ ಆಟಗಾರ ನಾಯಕತ್ವದ ಮುಂಭಾಗದಲ್ಲಿ ನಿಂತು ಉತ್ತಮ ಪ್ರದರ್ಶನ ನೀಡಿದ್ದಾರೆ.

ಶುಭಮನ್ ಗಿಲ್: ಬಲಗೈ ಬ್ಯಾಟರ್ ಶುಭಮನ್ ಗಿಲ್ ಉತ್ತಮ ಆರಂಭದ ನಂತರ ತನ್ನ ವಿಕೆಟ್ ಒಪ್ಪಿಸುವುದನ್ನು ಮುಂದುವರಿಸುತ್ತಾನೆ. ಮೊದಲ ಪಂದ್ಯದಲ್ಲಿ ಕಳಪೆ ಓಟದ ಕಾರಣ ಗಿಲ್ 64 ರನ್ ಗಳಿಸಿ ರನ್ ಔಟ್ ಆದರು. ಆದರೆ ಎರಡನೇ ಪಂದ್ಯದಲ್ಲಿ ಸ್ಕೂಪ್ ಶಾಟ್ ಆಡುವ ಪ್ರಯತ್ನದಲ್ಲಿ ಔಟಾದ ಕಾರಣ 7 ರನ್‌ಗಳಿಂದ ಅರ್ಧಶತಕವನ್ನು ತಪ್ಪಿಸಿಕೊಂಡರು.

ಎರಡೂ ಪಂದ್ಯಗಳಲ್ಲಿ ಮಿಂಚಿರುವ ಶ್ರೇಯಸ್ ಅಯ್ಯರ್

ಎರಡೂ ಪಂದ್ಯಗಳಲ್ಲಿ ಮಿಂಚಿರುವ ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್: ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಫಾರ್ಮ್‌ನಲ್ಲಿ ಆಟವಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಅವರು 57 ಎಸೆತಗಳಲ್ಲಿ 54 ರನ್ ಗಳಿಸಿದರು. ನಂತರ ಎರಡನೇ ಪಂದ್ಯದಲ್ಲಿ ಅವರು 71 ಎಸೆತಗಳಲ್ಲಿ 63 ರನ್ ಗಳಿಸಿದರು. ಅವರು ಸರಣಿಯಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಸೂರ್ಯಕುಮಾರ್ ಯಾದವ್: ಇಂಗ್ಲೆಂಡ್ ವಿರುದ್ಧ ಮಿಂಚಿದ್ದ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 22 ರನ್ ಗಳಿಸಿದ್ದಾರೆ. ಆದರೂ ಈ ಬ್ಯಾಟರ್ ಯಾವಾಗ ಬೇಕಾದರೂ ಅಬ್ಬರಿಸಬಹುದು.

ದೀಪಕ್ ಹೂಡಾ: ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ದೊಡ್ಡ ಇನ್ನಿಂಗ್ಸ್ ಆಡದಿದ್ದರೂ, ಉತ್ತಮ ಜೊತೆಯಾಟ ನೀಡುವಲ್ಲಿ ಸಫಲರಾಗಿದ್ದಾರೆ. ದೀಪಕ್ ಹೂಡಾ ಮೊದಲ ಏಕದಿನ ಪಂದ್ಯದಲ್ಲಿ 32 ಎಸೆತಗಳಲ್ಲಿ 27 ರನ್ ಗಳಿಸಿದ್ದರು ಮತ್ತು ಎರಡನೇ ಪಂದ್ಯದಲ್ಲಿ 36 ಎಸೆತಗಳಲ್ಲಿ 33 ರನ್ ಗಳಿಸಿದರು.

ಅಜೇಯ 64 ರನ್ ಗಳಿಸಿ ಪಂದ್ಯ ಗೆಲ್ಲಿಸಿದ ಅಕ್ಷರ್ ಪಟೇಲ್

ಅಜೇಯ 64 ರನ್ ಗಳಿಸಿ ಪಂದ್ಯ ಗೆಲ್ಲಿಸಿದ ಅಕ್ಷರ್ ಪಟೇಲ್

ಸಂಜು ಸ್ಯಾಮ್ಸನ್: ಎರಡನೇ ಏಕದಿನ ಪಂದ್ಯದಲ್ಲಿ ವಿಕೆಟ್-ಬ್ಯಾಟರ್ ಸಂಜು ಸ್ಯಾಮ್ಸನ್ ಉತ್ತಮ ಲಯದಲ್ಲಿದ್ದರು. ಇಲ್ಲಿ ಸ್ಯಾಮ್ಸನ್ 51 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಮೂಲ್ಯ 54 ರನ್ ಗಳಿಸಿದರು.

ಅಕ್ಷರ್ ಪಟೇಲ್: ಎರಡನೇ ಏಕದಿನ ಪಂದ್ಯವನ್ನು ಭಾರತಕ್ಕಾಗಿ ಗೆಲ್ಲಿಸುವವರೆಗೂ ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್ ಪ್ರಭಾವ ಬೀರಲು ವಿಫಲರಾಗಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಉತ್ತಮ ಎಕಾನಮಿ ದರದಲ್ಲಿ ರನ್ ನೀಡಿ ಒಂದು ವಿಕೆಟ್ ಪಡೆದರು ನಂತರ ಬ್ಯಾಟಿಂಗ್‌ನಲ್ಲಿ ಅಕ್ಷರ್ 35 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಭಾರತದ ಸರಣಿ ಗೆಲುವಿಗೆ ಕಾರಣರಾದರು.

ಶಾರ್ದೂಲ್ ಠಾಕೂರ್: ಮೊದಲ ಪಂದ್ಯದಲ್ಲಿ ಎಂಟು ಓವರ್‌ಗಳಲ್ಲಿ 54 ರನ್‌ಗಳಿಗೆ 2 ವಿಕೆಟ್‌ ಪಡೆದಿದ್ದ ಶಾರ್ದೂಲ್ ಠಾಕೂರ್, ಎರಡನೇ ಪಂದ್ಯದಲ್ಲಿ ಅವರು ಮತ್ತಷ್ಟು ಉತ್ತಮ ಪ್ರದರ್ಶನವನ್ನು ಕಂಡರು. 7 ಓವರ್‌ಗಳಲ್ಲಿ 54 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಠಾಕೂರ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

David Or Dravid?? ತಮ್ಮ ಹೆಸರಿನ ಬಗ್ಗೆ ಇದ್ದ ಗೊಂದಲದ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು? | OneIndia
ಮತ್ತೆ ಬೆಂಚ್ ಕಾಯಿಸಲಿದ್ದಾರೆ ಅರ್ಷದೀಪ್ ಸಿಂಗ್

ಮತ್ತೆ ಬೆಂಚ್ ಕಾಯಿಸಲಿದ್ದಾರೆ ಅರ್ಷದೀಪ್ ಸಿಂಗ್

ಮೊಹಮ್ಮದ್ ಸಿರಾಜ್: ಬಲಗೈ ವೇಗಿ ಮೊದಲ ಏಕದಿನ ಪಂದ್ಯದಲ್ಲಿ ತನ್ನ 10 ಓವರ್‌ಗಳಲ್ಲಿ 57 ರನ್‌ಗಳಿಗೆ 2 ವಿಕೆಟ್‌ ಪಡೆದು ಕೊನೆಯ ಓವರ್‌ನಲ್ಲಿ ತಂಡವನ್ನು ಗೆಲ್ಲಿಸಿದ ಮೊಹಮ್ಮದ್ ಸಿರಾಜ್, ಎರಡನೇ ಪಂದ್ಯದಲ್ಲಿ 10 ಓವರ್‌ಗಳ ಕೋಟಾದಲ್ಲಿ ವಿಕೆಟ್ ಇಲ್ಲದೆ 47 ರನ್‌ಗಳನ್ನು ಬಿಟ್ಟುಕೊಟ್ಟರು.

ಯುಜ್ವೇಂದ್ರ ಚಾಹಲ್: ಮೊದಲ ಏಕದಿನ ಪಂದ್ಯದಲ್ಲಿ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 58 ರನ್‌ಗಳಿಗೆ 2 ವಿಕೆಟ್ ಪಡೆದರು. ಆದರೆ ಎರಡನೇ ಪಂದ್ಯದಲ್ಲಿ ಅವರು ತಮ್ಮ 10 ಓವರ್‌ಗಳಲ್ಲಿ 69 ರನ್‌ಗಳನ್ನು ನೀಡಿ 1 ವಿಕೆಟ್ ಪಡೆದು ತೃಪ್ತಿಪಟ್ಟರು. ಕೊನೆಯ ಪಂದ್ಯದಲ್ಲಿ ಮಿಂಚುವ ಸಾಧ್ಯತೆ ಇದೆ.

ಅವೇಶ್ ಖಾನ್: ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಪ್ರಭಾವ ಬೀರಲು ಅವೇಶ್ ಖಾನ್ ವಿಫಲರಾದರು, ಅವರು ತಮ್ಮ 6 ಓವರ್‌ಗಳಲ್ಲಿ 9ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟರು. ಇದೇ ವೇಳೆ ಅವರು ವಿಕೆಟ್ ರಹಿತರಾಗಿ ಉಳಿದರು. ಇನ್ನೊಬ್ಬ ಯುವ ವೇಗಿ ಅರ್ಷದೀಪ್ ಸಿಂಗ್ ಕೂಡ ಬೆಂಚ್ ಕಾಯಿಸುತ್ತಿದ್ದರೂ, ಭಾರತ ತಂಡದ ಮ್ಯಾನೇಜ್‌ಮೆಂಟ್ ಅವೇಶ್ ಖಾನ್ ಮೇಲೆ ವಿಶ್ವಾಸವಿಟ್ಟು ಇನ್ನೊಂದು ಅವಕಾಶ ನೀಡಬಹುದು.

Story first published: Wednesday, July 27, 2022, 14:10 [IST]
Other articles published on Jul 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+