Ind vs WI 3rd T20: ಭಾರತಕ್ಕೆ 17 ರನ್‌ಗಳ ಜಯ, ವೆಸ್ಟ್ ಇಂಡೀಸ್ ವೈಟ್‌ವಾಶ್

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 185ರನ್‌ಗಳನ್ನ ಬೆನ್ನತ್ತುವಲ್ಲಿ ವೆಸ್ಟ್ ಇಂಡೀಸ್ ಎಡವಿದೆ. ಪರಿಣಾಮ ಭಾರತ 3ನೇ T20 ಪಂದ್ಯವನ್ನ 17 ರನ್‌ಗಳ ಜೊತೆಗೆ ಸರಣಿಯನ್ನ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಭಾರತ ನೀಡಿದ 185ರನ್ ಮೊತ್ತ ಬೆನ್ನತ್ತಿದ ವಿಂಡೀಸ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಓಪನರ್‌ಗಳಿಬ್ಬರನ್ನ ಪೆವಿಲಿಯನ್‌ಗೆ ಅಟ್ಟುವಲ್ಲಿ ಸ್ವಿಂಗ್ ಬೌಲರ್ ದೀಪಕ್ ಚಹಾರ್ ಯಶಸ್ವಿಯಾದ್ರು. ಕೈಲ್ ಮೇಯರ್ಸ್ 6, ಶೈ ಹೋಪ್ 8 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಎರಡು ವಿಕೆಟ್ ಪಡೆದು ಖುಷಿಯಲ್ಲಿದ್ದ ದೀಪಕ್ ಚಹಾರ್ ತನ್ನ 1.5ನೇ ಓವರ್‌ನ ಎಸೆತದಲ್ಲಿ ರನ್ ಅಪ್ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಗಾಯಗೊಂಡು ಪೆವಿಲಿಯನ್ ಸೇರಿಕೊಂಡಿದ್ದು, ತಂಡಕ್ಕೆ ಹಿನ್ನಡೆಯಾಯಿತು. ದೀಪಕ್ ಚಹಾರ್‌ನ ಒಂದು ಎಸೆತದ ಬಾಕಿಯನ್ನ ವೆಂಕಟೇಶ್ ಅಯ್ಯರ್ ಪೂರೈಸಿದ್ರು, ಸಿಕ್ಸರ್ ಬಿಟ್ಟುಕೊಟ್ಟು ದುಬಾರಿಯಾದರು.

ಸರಣಿಯಲ್ಲಿ ಮತ್ತೊಮ್ಮೆ ಅಬ್ಬರಿಸಿದ ನಿಕೋಲಸ್ ಪೂರನ್
ಟಿ20 ಸರಣಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ವಿಂಡೀಸ್ ಉಪನಾಯಕ ನಿಕೋಲಸ್ ಪೂರನ್ ಈ ಸರಣಿಯಲ್ಲಿ ತಮ್ಮ ಮೂರನೇ ಅರ್ಧಶತಕ ದಾಖಲಿಸಿದ್ರು. 31 ಎಸೆತಗಳಲ್ಲಿ 65 ರನ್ ಸಿಡಿಸಿದ ಪೂರನ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಒಳಗೊಂಡಿತ್ತು.
ಪೂರನ್‌ಗೆ ಸಾಥ್ ಕೊಟ್ಟ ರೊಮನ್ ಪೊವೆಲ್ ಟೀಂ ಇಂಡಿಯಾ ಪಾಳಯದಲ್ಲಿ ಭಯ ಹುಟ್ಟಿಸಿದ್ದು ಸುಳ್ಳಲ್ಲ. 14 ಎಸೆತಗಳಲ್ಲಿ 25 ರನ್ ಸಿಡಿಸಿದ ರೊಮನ್ ಪೊವೆಲ್ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದ್ರು. ಆದ್ರೆ ಈ ಜೋಡಿ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.

ಪೊಲಾರ್ಡ್-ಹೋಲ್ಡರ್ ವಿಕೆಟ್ ಕಬಳಿಸಿದ ವೆಂಕಟೇಶ್ ಅಯ್ಯರ್
ಪೂರನ್ ಮತ್ತು ಪೊವೆಲ್ ಔಟಾದ ಬಳಿಕ ನಾಯಕ ಕಿರಾನ್ ಪೊಲಾರ್ಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆಲ್‌ರೌಂಡರ್ ಜೇಸನ್ ಹೋಲ್ಡರ್ ಕೂಡ ಕೇವಲ 2ರನ್‌ಗೆ ವೆಂಕಟೇಶ್ ಅಯ್ಯರ್‌ಗೆ ವಿಕೆಟ್ ಒಪ್ಪಿಸಿದ್ರು. ಇದಕ್ಕೂ ಮೊದಲು ಪೊಲಾರ್ಡ್ ಕೂಡ 12ರನ್‌ಗಳಿಸಿದ್ದಾಗ ಅಯ್ಯರ್ ಬೌಲಿಂಗ್‌ನಲ್ಲೇ ಔಟಾಗಿದ್ದರು.
ಕೆಳಕ್ರಮಾಂಕದಲ್ಲಿ ರೊಮಾರಿಯೊ ಶೆಫರ್ಡ್ ಕೊಂಚ ತಂಡಕ್ಕೆ ಗೆಲುವಿನ ನಂಬಿಕೆ ತಂದುಕೊಟ್ಟರು. ಆದ್ರೆ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ 29 ರನ್‌ಗಳಿಸಿದ್ದ ಶೆಫರ್ಡ್ ರೋಹಿತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ಅಂತಿಮವಾಗಿ ವಿಂಡೀಸ್ 17 ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿದ್ದಷ್ಟೇ ಅಲ್ಲದೆ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್‌ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಭಾರತ ಸರಣಿಯನ್ನ 3-0 ಅಂತರದಲ್ಲಿ ಗೆದ್ದಿತು. ವಿಂಡೀಸ್ ವೈಟ್ ವಾಶ್ ಮುಖಭಂಗ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರೋಹಿತ್ ಪಡೆ
ವಿಂಡೀಸ್ ಇನ್ನಿಂಗ್ಸ್‌ಗೂ ಮೊದಲು ತಂಡದಲ್ಲಿ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಕಳೆದ ಐಪಿಎಲ್ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ತನ್ನ ಸ್ವಾಭಾವಿಕ ಆಟವನ್ನ ಆಡದೇ ಕೆಟ್ಟ ಹೊಡೆತಕ್ಕೆ ಕೈ ಹಾಕಿದ ಪರಿಣಾಮ ಆಲ್‌ರೌಂಡರ್ ಜೇಸನ್ ಹೋಲ್ಡರ್‌ಗೆ 4ರನ್‌ಗೆ ವಿಕೆಟ್ ಒಪ್ಪಿಸಿದ್ರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶ್ರೇಯಸ್ ಅಯ್ಯರ್ ಆರಂಭದಿಂದಲೇ ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ರು. 16 ಎಸೆತಗಳಲ್ಲಿ ನಾಲ್ಕು ಬೌಂಡರಿ ಸಹಿತ 25 ರನ್ ಕಲೆಹಾಕಿದ ಅಯ್ಯರ್, ಹೈಡನ್ ವಾಲ್ಷ್ ಸ್ಪಿನ್ ದಾಳಿಯನ್ನ ಅರಿಯದೇ ಜೇಸನ್ ಹೋಲ್ಡರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ರು.

ಎಡವಿದ ರುತುರಾಜ್, ವಿಫಲಗೊಂಡ ಇಶಾನ್ ಕಿಶನ್
ಮೊದಲೆರಡು ಪಂದ್ಯದಲ್ಲಿ ರನ್‌ಗಳಿಸಲು ಪರದಾಡುತ್ತಿದ ಇಶಾನ್ ಕಿಶನ್ ಈ ಬಾರಿಯು ಅರ್ಧಶತಕ ಗಡಿ ಮುಟ್ಟುವಲ್ಲಿ ವಿಫಲಗೊಂಡರು. 31 ಎಸೆತಗಳಲ್ಲಿ 34 ರನ್ ಕಲೆಹಾಕಿದ್ದ ಇಶಾನ್ ಸ್ಪಿನ್ನರ್ ರೋಸ್ಟನ್ ಚೇಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದ್ರು.
ಇನ್ನು ಯುವ ಆಟಗಾರ ರುತುರಾಜ್‌ಗೆ ಓಪನಿಂಗ್ ಬ್ಯಾಟಿಂಗ್ ಬಿಟ್ಟುಕೊಟ್ಟು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರೋಹಿತ್ ಶರ್ಮಾ ಲಯ ಕಂಡುಕೊಳ್ಳುವುದರಷ್ಟರಲ್ಲಿ ವಿಕೆಟ್ ಒಪ್ಪಿಸಿದ್ರು. ಅತ್ಯಂತ ತಾಳ್ಮೆಯಿಂದ ಬ್ಯಾಟ್ ಮಾಡುತ್ತಿದ್ದ ರೋಹಿತ್ 15 ಎಸೆತಗಳಲ್ಲಿ ಕೇವಲ 7ರನ್‌ಗಳಿಸಿ ನಿರಾಸೆ ಮೂಡಿಸಿದ್ರು. ಡೊಮಿನಿಕ್ ಡ್ರೇಕ್ಸ್ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಸಿಕ್ಸರ್ ಸಿಡಿಸಲು ಹೋಗಿ ಕ್ಲೀನ್ ಬೌಲ್ಡ್ ಆದರು.

ಸೂರ್ಯಕುಮಾರ್ ಅಬ್ಬರ, ವೆಂಕಟೇಶ್ ಅಯ್ಯರ್ ಸೊಗಸಾದ ಬ್ಯಾಟಿಂಗ್
93 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಮತ್ತು ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸಾಥ್ ನೀಡಿದರು. ಐದನೇ ವಿಕೆಟ್‌ಗೆ ಬೊಂಬಾಟ್ ಪ್ರದರ್ಶನ ನೀಡಿದ ಈ ಜೋಡಿ ಭಾರತದ ಮೊತ್ತ 180ರ ಗಡಿ ದಾಟುವಲ್ಲಿ ನೆರವಾದ್ರು.
ಅಬ್ಬರದ ಬ್ಯಾಟಿಂಗ್ ಮೂಲಕ 7 ಅಮೋಘ ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 31 ಎಸೆತದಲ್ಲಿ 65 ರನ್ ಕಲೆಹಾಕಿದ್ರು. 209.68 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ಬೀಸಿದ ಸೂರ್ಯಕುಮಾರ್ ಕಲಾತ್ಮಕ ಹಾಗೂ ವಿಭಿನ್ನ ಶೈಲಿಯ ಬ್ಯಾಟಿಂಗ್ ಮೂಲಕ ಕೋಲ್ಕತ್ತಾದ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳನ್ನ ರಂಜಿಸಿದರು. ಟಿ20 ಕ್ರಿಕೆಟ್‌ನಲ್ಲಿ ನಾಲ್ಕನೇ ಅರ್ಧಶತಕ ದಾಖಲಿಸಿ ಮಿಂಚು ಹರಿಸಿದರು.
ಸೂರ್ಯಕುಮಾರ್‌ಗೆ ಉತ್ತಮ ಸಾಥ್ ಕೊಟ್ಟ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 35 ರನ್ ಸಿಡಿಸಿ ಮಿಂಚಿದ್ರು. 184.21ರ ಸ್ಟ್ರೈಕ್‌ರೇಟ್‌ನಲ್ಲಿ ಆಡಿದ ಸೂರ್ಯಕುಮಾರ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್‌ಗಳಿದ್ದವು.
16 ರಿಂದ 20 ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ವಿಂಡೀಸ್ ಬೌಲರ್‌ಗಳನ್ನ ಧೂಳೀಪಟ ಮಾಡಿದ್ದಲ್ಲದೆ ಡೆತ್ ಓವರ್‌ಗಳಲ್ಲಿ ಭಾರತದ ಪರ ದಾಖಲೆಯ ರನ್ ಕಲೆಹಾಕಿದ್ರು. ಭಾರತ ಕೊನೆಯ ಐದು ಓವರ್‌ಗಳಲ್ಲಿ 86 ರನ್ ಕಲೆಹಾಕಿದ್ದು, ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಠ ಡೆತ್ ಓವರ್ ರನ್ ಇದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications