IND vs WI 3rd T20: ಟೀಂ ಇಂಡಿಯಾ ಗೆಲುವಿಗೆ 165ರನ್ ಟಾರ್ಗೆಟ್

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಟೀಂ ಇಂಡಿಯಾಗೆ 165ರನ್ ಟಾರ್ಗೆಟ್ ನೀಡಿದೆ.
ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರೋಹಿತ್ ಪಡೆ ಹಾಗೂ ವಿಂಡೀಸ್ ತಂಡವು ತಲಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ವಿಂಡೀಸ್ ಪರ ಉತ್ತಮ ಆರಂಭ ನೀಡಿದ ಓಪನರ್ಸ್ ಅರ್ಧಶತಕದ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.
ಬ್ರಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಮೊದಲ ವಿಕೆಟ್‌ಗೆ 57ರನ್‌ಗಳ ಜೊತೆಯಾಟದ ಮೂಲಕ ಟೀಂ ಇಂಡಿಯಾಗೆ ಆಧಾರವಾದ್ರು. ಹೀಗೆ ಡೇಂಜರಸ್ ಆಗಿದ್ದ ಜೊತೆಯಾಟಕ್ಕೆ ಬ್ರೇಕ್ ನೀಡಿದ್ದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ.

ಕೈಲ್ ಮೇಯರ್ಸ್ ಬೊಂಬಾಟ್ ಬ್ಯಾಟಿಂಗ್
ವೆಸ್ಟ್ ಇಂಡೀಸ್ ಪರ ಓಪನರ್ ಆಗಿ ಕಣಕ್ಕಿಳಿದಿದ್ದ ಕೈಲ್ ಮೇಯರ್ಸ್ ಉತ್ತಮ ಜೊತೆಯಾಟದ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಸಹ ಪ್ರದರ್ಶಿಸಿದ್ರು. 50 ಎಸೆತಗಳಲ್ಲಿ 73 ರನ್ ಸಿಡಿಸಿದ ಮೇಯರ್ಸ್ ಇನ್ನಿಂಗ್ಸ್‌ನಲ್ಲಿ 8 ಸೊಗಸಾದ ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಬ್ರಾಂಡನ್ ಕಿಂಗ್ 20ರನ್‌ಗಳಿಸಿ ಔಟಾದ ಬಳಿಕ ಕೈಲ್ ಮೇಯರ್ಸ್ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಸಾಥ್ ನೀಡಲು ವಿಫಲಗೊಂಡ್ರು. ನಿಕೋಲಸ್ ಪೂರನ್ 22, ರೋವ್ಮನ್ ಪೊವೆಲ್ 23, ಶಿಮ್ರೋನ್ ಹೆಟ್ಮೆಯರ್ 12 ಎಸೆತಗಳಲ್ಲಿ 20ರನ್ ಸಿಡಿಸಿ ಔಟಾದ್ರು. ಪರಿಣಾಮ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 164ರ್ ಕಲೆಹಾಕಿತು.

ದುಬಾರಿಯಾದ ವೇಗಿ ಅವೇಶ್ ಖಾನ್
ಟೀಂ ಇಂಡಿಯಾ ಪರ ಯುವ ವೇಗಿ ಅವೇಶ್ ಖಾನ್ ದುಬಾರಿಯೆನಿಸಿದ್ರು. ಅದ್ರಲ್ಲೂ 19ನೇ ಓವರ್‌ನಲ್ಲಿ ಎರಡು ಸಿಕ್ಸರ್ ಜೊತೆಗೆ 17 ರನ್ ನೀಡಿದ್ದಲ್ಲದೆ, ಕೇವಲ ಮೂರು ಓವರ್‌ಗಳಲ್ಲಿ 47ರನ್ ಬಿಟ್ಟುಕೊಡುವ ಮೂಲಕ ವಿಂಡೀಸ್‌ಗೆ ನೆರವಾದ್ರು.
ಭಾರತದ ಪರ ಭುವನೇಶ್ವರ್ ಕುಮಾರ್ 2, ಹಾರ್ದಿಕ್ ಪಾಂಡ್ಯ ಮತ್ತು ಅರ್ಷ್‌ದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ನಾಲ್ಕು ಓವರ್‌ಗಳಲ್ಲಿ 26ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ.

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್
ಬೆಂಚ್: ರವಿ ಬಿಷ್ಣೋಯ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಓಡಿಯನ್ ಸ್ಮಿತ್, ಕೀಮೋ ಪಾಲ್, ಶಮರ್ ಬ್ರೂಕ್ಸ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications