For Quick Alerts
ALLOW NOTIFICATIONS  
For Daily Alerts
 

Ind vs WI 4th T20: ಇಂದಿನ ಪಂದ್ಯದಲ್ಲಿ ಡ್ರೀಂ ಟೀಂನಲ್ಲಿ ಈ ಆಟಗಾರರನ್ನ ಮಿಸ್ ಮಾಡದಿರಿ

India vs West indies

ಟೀಂ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡ ಶನಿವಾರ (ಆ. 06) ನಾಲ್ಕನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಏಕದಿನ ಸರಣಿಯಲ್ಲಿ ವೈಟ್‌ವಾಶ್ ಆದ ಬಳಿಕ ಟಿ20 ಸರಣಿಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿರುವ ವಿಂಡೀಸ್ ಪಡೆಯು ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಪಡೆದಿರುವ ಭಾರತ ನಾಲ್ಕನೇ ಟಿ20 ಪಂದ್ಯ ಗೆದ್ದು ಸರಣಿ ಗೆಲುವಿನ ಲೆಕ್ಕಾಚಾರದಲ್ಲಿದೆ.

ಭಾರತ-ವಿಂಡೀಸ್ ಪಂದ್ಯವು ಅಮೆರಿಕಾದ ಫ್ಲೋರಿಡಾದಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಪಾರ್ಕ್ನಲ್ಲಿ ನಡೆಯಲಿದ್ದು, ಉಭಯ ತಂಡಗಳು ಇದೇ ಮೈದಾನದಲ್ಲಿ ಉಳಿದೆರಡು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು ಡಿಡಿ ಸ್ಪೋರ್ಟ್ಸ್‌, ಫ್ಯಾನ್‌ಕೋಡ್ ಆ್ಯಪ್‌ ಮೂಲಕ ಪಂದ್ಯ ವೀಕ್ಷಿಸಬಹುದು.

ಮೂರನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು

ಮೂರನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಟೀಂ ಇಂಡಿಯಾಗೆ 165ರನ್ ಟಾರ್ಗೆಟ್ ನೀಡಿತು. ಸೇಂಟ್ ಕಿಟ್ಸ್‌ನ ವಾರ್ನರ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್ ಆಯ್ದುಕೊಂಡ ರೋಹಿತ್ ಪಡೆ ಹಾಗೂ ವಿಂಡೀಸ್ ತಂಡವು ತಲಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು.

ಈ ಗುರಿಯನ್ನ ಬೆನ್ನತ್ತಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು. ಸೂರ್ಯಕುಮಾರ್ 76, ರಿಷಭ್ ಪಂತ್ 33ರನ್‌ಗಳ ಆಟದಿಂದಾಗಿ ಟೀಂ ಇಂಡಿಯಾ ಸುಲಭವಾಗಿ ಗುರಿ ಮುಟ್ಟಿತು. ಜೊತೆಗೆ 2-1ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಫ್ಲೋರಿಡಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹವಾಮಾನ 29 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 73ರಷ್ಟು ಹ್ಯುಮಿಡಿಟಿ ಮತ್ತು 19 km/hr ವೇಗದಲ್ಲಿ ಗಾಳಿ ಬೀಸಲಿದೆ. ಆದ್ರೆ ಆತಂಕದ ವಿಚಾರ ಅಂದ್ರೆ ಶೇಕಡ 24ರಷ್ಟು ಮಳೆ ಬರುವ ಸಾಧ್ಯತೆ ಇದೆ.

ಇಲ್ಲಿನ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 157ರಷ್ಟಿದ್ದು, ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಸೋತಿರುವ ಉದಾಹರಣೆ ಹೆಚ್ಚಿದೆ. ಚೇಸಿಂಗ್ ಮಾಡಿದ ತಂಡದ ಗೆಲುವಿನ ಸರಾಸರಿ ಶೇಕಡಾ 20ರಷ್ಟಿದೆ.

ಕೆ.ಎಲ್ ರಾಹುಲ್ ಫಿಟ್ ಇಲ್ಲದಿದ್ರೆ, ಈತನೇ ರೋಹಿತ್ ಜೊತೆಗೆ ಓಪನಿಂಗ್ ಬ್ಯಾಟರ್‌

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್‌), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್‌ ಸಿಂಗ್, ಅವೇಶ್ ಖಾನ್

ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಡೆವೊನ್ ಥಾಮಸ್ (ವಿಕೆಟ್ ಕೀಪರ್‌), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

IND vs WI: ಸೂರ್ಯಕುಮಾರ್ ಬಾಬರ್ ಹಿಂದಿಕ್ಕಿ ನಂ.1 ಆಗಲು 4ನೇ ಟಿ20ಯಲ್ಲಿ ಇಷ್ಟು ರನ್ ಗಳಿಸಿದರೆ ಸಾಕು!

ಡ್ರೀಂ ಫ್ಯಾಂಟೆಸಿ ಟೀಂ 1

ಡ್ರೀಂ ಫ್ಯಾಂಟೆಸಿ ಟೀಂ 1

ನಾಯಕ: ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ

ಉಪನಾಯಕ: ಕೈಲ್ ಮೇಯರ್ಸ್‌, ಒಬೆದ್ ಮೆಕಾಯ್

ಕೀಪರ್ಸ್ - ನಿಕೋಲಸ್ ಪೂರನ್, ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಕೈಲ್ ಮೇಯರ್ಸ್ (ಉಪನಾಯಕ), ಬ್ರಾಂಡನ್ ಕಿಂಗ್
ಆಲ್ ರೌಂಡರ್ಸ್ - ಜೇಸನ್ ಹೋಲ್ಡರ್, ಹಾರ್ದಿಕ್ ಪಾಂಡ್ಯ
ಬೌಲರ್‌ಗಳು - ಓಬೇದ್ ಮೆಕಾಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್

ಡ್ರೀಂ ಫ್ಯಾಂಟೆಸಿ ಟೀಂ 2

ಡ್ರೀಂ ಫ್ಯಾಂಟೆಸಿ ಟೀಂ 2

ಕೀಪರ್ಸ್ - ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಶಿಮ್ರಾನ್ ಹೆಟ್ಮೆಯರ್
ಆಲ್ ರೌಂಡರ್‌ಗಳು - ಜೇಸನ್ ಹೋಲ್ಡರ್, ಹಾರ್ದಿಕ್ ಪಾಂಡ್ಯ (ನಾಯಕ)
ಬೌಲರ್‌ಗಳು - ಓಬೇಡ್ ಮೆಕಾಯ್ (ಉಪನಾಯಕ), ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್

ಸೂರ್ಯಕುಮಾರ್ ಯಾದವ್ ಡ್ರೀಂ ಟೀಂ ನಾಯಕನ ಆಯ್ಕೆಯಲ್ಲಿ ಪ್ರಮುಖ ಆಟಗಾರನಾಗಿದ್ದು, ಹಾರ್ದಿಕ್ ಪಾಂಡ್ಯ ಕೂಡ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಹೆಚ್ಚು ಆಯ್ಕೆಯಾಗುವ ಆಟಗಾರರು. ಡ್ರೀಂ 11 ಫ್ಯಾಂಟೆಸಿ ತಂಡದ ಬೆಸ್ಟ್‌ ಸಂಯೋಜನೆ 2-4-2-3 ಆಗಿದೆ. ತಂಡದ ಬಲವನ್ನ ಗಮನಿಸಿದ್ರೆ, ಟೀಂ ಇಂಡಿಯಾ ಈ ಪಂದ್ಯ ಗೆಲ್ಲಬಹುದು.

Story first published: Saturday, August 6, 2022, 14:23 [IST]
Other articles published on Aug 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+