Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs WI 3rd T20: ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಭಾರತ; ಪಂದ್ಯದ ವಿವರ, ಟಿವಿ ಮತ್ತು ಲೈವ್ ಸ್ಟ್ರೀಮಿಂಗ್

ಮಂಗಳವಾರ, ಆಗಸ್ಟ್ 8ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿ ಸೆಣಸಾಡಲಿದೆ.

ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳನ್ನು ಸೋತಿರುವ ನಂತರ, ಭಾರತ ತಂಡವು ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಸಾಧಿಸಿದೆ. ಮಂಗಳವಾರದ ಪಂದ್ಯದಲ್ಲೂ ಸೋತರೆ 2016ರ ನಂತರ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಕಳೆದುಕೊಳ್ಳಲಿದೆ.

IND vs WI: India Under Pressure To Win; 3rd T20 Match Details, TV and Live Streaming

ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡ 2016ರ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಭಾನುವಾರ ಗಯಾನಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 40 ಎಸೆತಗಳಲ್ಲಿ 67 ರನ್ ಸಿಡಿಸುವ ಮೂಲಕ ನಿಕೋಲಸ್ ಪೂರನ್ ಪಂದ್ಯ ವಿಜೇತನಾಗಿದ್ದರು.

IND vs WI: ತಿಲಕ್ ವರ್ಮಾ ತನ್ನ ಚೊಚ್ಚಲ ಟಿ20 ಅರ್ಧಶತಕ ಅರ್ಪಿಸಿದ್ದು ಯಾರಿಗೆ?

ಟಿ20 ಸರಣಿಯಲ್ಲಿ ಭಾರತೀಯ ವೇಗಿಗಳು ದುಬಾರಿಯಾಗಿದ್ದಾರೆ ಮತ್ತು 3 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದಿದ್ದ ಯುಜ್ವೇಂದ್ರ ಚಹಾಲ್ ಅವರಿಗೆ 18ನೇ ಓವರ್‌ ನೀಡದೇ ನಾಯಕ ಹಾರ್ದಿಕ್ ಪಾಂಡ್ಯ ಅವರು ಮುಖೇರ್ಶ ಕುಮಾರ್‌ನನ್ನು ಆಯ್ಕೆ ಮಾಡಿಕೊಂಡಿದ್ದು ಗೊಂದಲಮಯವಾಗಿತ್ತು.

ಇದೇ ವೇಳೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ದೊಡ್ಡ ಮೈಲಿಗಲ್ಲು ಸ್ಥಾಪಿಸುವ ಸಮೀಪಿಸುತ್ತಿದ್ದಾರೆ. ಟಿ20 ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಆಗಲು ಕೇವಲ 5 ವಿಕೆಟ್‌ಗಳ ಅವಶ್ಯಕತೆ ಇದೆ.

IND vs WI: India Under Pressure To Win; 3rd T20 Match Details, TV and Live Streaming

ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಹೊರತುಪಡಿಸಿ ಭಾರತದ ಉಳಿದ ಬ್ಯಾಟ್ಸ್‌ಮನ್‌ಗಳು ಕೂಡ ಇಲ್ಲಿಯವರೆಗೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಹೋರಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಯುವ ಆಟಗಾರ ತಿಲಕ್ ವರ್ಮಾ ಅವರು ರೋಹಿತ್ ಶರ್ಮಾ ನಂತರ ಟಿ20 ಅರ್ಧಶತಕ ಗಳಿಸಿದ ಎರಡನೇ ಕಿರಿಯ ಆಟಗಾರ ಎನಿಸಿದರು.

ಭಾರತ vs ವೆಸ್ಟ್ ಇಂಡೀಸ್ 3ನೇ ಟಿ20 ಪಂದ್ಯದ ವಿವರ

ಸ್ಥಳ ಮತ್ತು ದಿನಾಂಕ: ಭಾರತ vs ವೆಸ್ಟ್ ಇಂಡೀಸ್ 3ನೇ ಟಿ20 ಪಂದ್ಯವು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮಂಗಳವಾರ, ಆಗಸ್ಟ್ 8ರಂದು ನಡೆಯಲಿದೆ.

ಪಂದ್ಯದ ಸಮಯ: ಭಾರತ vs ವೆಸ್ಟ್ ಇಂಡೀಸ್ 3ನೇ ಟಿ20 ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ಪಂದ್ಯದ ಟಾಸ್ ರಾತ್ರಿ 7.30ಕ್ಕೆ ನಡೆಯಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ

ಭಾರತ vs ವೆಸ್ಟ್ ಇಂಡೀಸ್ 3ನೇ ಟಿ20 ಪಂದ್ಯವನ್ನು ಡಿಡಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋ ಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಲೈವ್‌ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಭಾರತ vs ವೆಸ್ಟ್ ಇಂಡೀಸ್ 3ನೇ ಟಿ20 ಸಂಭಾವ್ಯ ಆಡುವ 11ರ ಬಳಗ

ಭಾರತ: ಶುಭ್ಮನ್ ಗಿಲ್, ಇಶಾನ್ ಕಿಶನ್/ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.

ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್.

Story first published: Tuesday, August 8, 2023, 12:39 [IST]
Other articles published on Aug 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+