IND vs WI: ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ವೆಸ್ಟ್ ಇಂಡೀಸ್‌ಗೆ ತೆರಳಿದ ಸ್ಟಾರ್ ಸ್ಪಿನ್ನರ್

ಶಿಖರ್ ಧವನ್ ನಾಯಕತ್ವದ ಮೊದಲ 2 ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಪಂದ್ಯ-ವಿಜೇತ ಕೊಡುಗೆ ನೀಡಿದ ಪರಿಣಾಮ ಭಾರತ ತಂಡ 2-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿದೆ.
ಈ ಮೂವರು ಯುವ ಬ್ಯಾಟರ್‌ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಯಶಸ್ವಿಯಾಗಿ 312 ರನ್ ಚೇಸ್ ಮಾಡಿತು ಮತ್ತು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ತನ್ನದಾಗಿಸಿಕೊಂಡಿತು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಭಾರತವು ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ.
ಮೂರು ಏಕದಿನ ಪಂದ್ಯಗಳ ನಂತರ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಹಲವು ಆಟಗಾರರು ಕೆರಿಬಿಯನ್ ನಾಡಿನಲ್ಲಿ ಇದ್ದು, ಏಕದಿನ ಸರಣಿಗೆ ವಿಶ್ರಾಂತಿ ಪಡೆದಿದ್ದವರು ವೆಸ್ಟ್ ಇಂಡೀಸ್‌ಗೆ ತೆರಳುತ್ತಿದ್ದಾರೆ. ಖಾಯಂ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದೆ.

ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ
ಇನ್ನು ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಕೆರಿಬಿಯನ್‌ಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಸರಣಿ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆ. ಎಡಗೈ ಸ್ಪಿನ್ನರ್ ತನ್ನ ಅಭಿಮಾನಿಳಿಗೆ ಸುದ್ದಿ ಹಂಚಿಕೊಳ್ಳಲು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಮನಾರ್ಹ ವಿಷಯವೆಂದರೆ, ಕುಲದೀಪ್ ಯಾದವ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರ ಕೈಗಾದ ಗಾಯದಿಂದಾಗಿ ಅವರನ್ನು ಹೊರಗಿಡಲಾಯಿತ್ತು. ನಂತರ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತೀಯ ಟಿ20 ತಂಡದಲ್ಲಿ ಮತ್ತೆ ಆಯ್ಕೆ ಮಾಡಿದಾಗ, ಆಡುವ 11ರ ಬಳಗದಲ್ಲಿ ಅವರ ಆಯ್ಕೆಯು ಫಿಟ್‌ನೆಸ್‌ಗೆ ಒಳಪಟ್ಟಿತ್ತು. ಇದೀಗ ಅವರು ಫಿಟ್ ಆಗಿದ್ದಾರೆ ಎಂದು ಘೋಷಿಸಲಾಗಿದ್ದು, ಕೆರಿಬಿಯನ್ನರ ವಿರುದ್ಧ ಪುನರಾಗಮನ ಮಾಡಲಿದ್ದಾರೆ.

ಜುಲೈ 29ರಂದು ಟ್ರಿನಿಡಾಡ್‌ನಲ್ಲಿ ಮೊದಲ ಟಿ20 ಪಂದ್ಯ
ಮೊದಲ ಟಿ20 ಪಂದ್ಯ ಜುಲೈ 29ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದ್ದು, ಮುಂದಿನ ಎರಡು ಟಿ20 ಪಂದ್ಯಗಳು ಆಗಸ್ಟ್ 1 ಮತ್ತು 2 ರಂದು ಸೇಂಟ್ ಕಿಟ್ಸ್‌ನಲ್ಲಿ ನಡೆಯಲಿವೆ. ಸದ್ಯ ಉಭಯ ತಂಡಗಳು ಸರಣಿಯ 2 ಏಕದಿನ ಪಂದ್ಯಗಳನ್ನು ಆಡಿದ್ದು, ಪ್ರವಾಸಿ ಭಾರತ ತಂಡ 2-0 ಮುನ್ನಡೆ ಸಾಧಿಸಿದ್ದಾರೆ.
ಕುಲದೀಪ್ ಯಾದವ್ ಅವರಲ್ಲದೆ, ರವಿ ಬಿಷ್ಣೋಯ್, ರಿಷಭ್ ಪಂತ್, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಶೀಘ್ರದಲ್ಲೇ ಭಾರತೀಯ ಟಿ20 ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಸರಣಿಯ ಭಾಗವಾಗಿದ್ದ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಟಿ20 ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ 14 ಪಂದ್ಯಗಳಲ್ಲಿ 21 ವಿಕೆಟ್
ಕುಲದೀಪ್ ಐಪಿಎಲ್ 2022ರಲ್ಲಿ ಮತ್ತೆ ಫಾರ್ಮ್‌ಗೆ ಮರಳಿದರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ 14 ಪಂದ್ಯಗಳಲ್ಲಿ 21 ವಿಕೆಟ್‌ಗಳೊಂದಿಗೆ ಮರಳಿದರು. ಬಿಸಿಸಿಐ ಅಧಿಕಾರಿಯ ಪ್ರಕಾರ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಎನ್‌ಸಿಎಯಲ್ಲಿ ಕಡ್ಡಾಯ ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
"ಕುಲದೀಪ್ ಯಾದವ್ ಪಂದ್ಯದ ಫಿಟ್‌ನೆಸ್‌ಗೆ ಹತ್ತಿರವಾಗಿದ್ದಾರೆ. ಆದರೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಪರಿಗಣಿಸಿ ಅವರ ವಾಪಸಾತಿಯನ್ನು ನಾವು ತಡೆಹಿಡಿಯಲು ಬಯಸುವುದಿಲ್ಲ. ಜುಲೈ 24ರಂದು ಎನ್‌ಸಿಎಯಲ್ಲಿ ಫಿಟ್‌ನೆಸ್ ಪರೀಕ್ಷೆ ನಡೆಯಲಿದ್ದು, ಅದನ್ನು ತೆರವುಗೊಳಿಸಿದರೆ ಅವರು ಟ್ರಿನಿಡಾಡ್‌ಗೆ ವಿಮಾನ ಹತ್ತಲಿದ್ದಾರೆ. ಕುಲದೀಪ್ ಯಾದವ್ ಚೆನ್ನಾಗಿದ್ದಾರೆ. ಅವರು ಎನ್‌ಸಿಎಯಿಂದ ಹೊರಬಂದಿದ್ದಾರೆ. ಅವರು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ," ಎಂದು ಬಿಸಿಸಿಐ ಅಧಿಕಾರಿ ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications