For Quick Alerts
ALLOW NOTIFICATIONS  
For Daily Alerts
 

IND vs WI: ಏಕದಿನ ಕ್ರಿಕೆಟ್‌ನಲ್ಲಿ ವಿಶಿಷ್ಟ ಸಾಧನೆಗೈದ ಜಡೇಜಾ-ಕುಲದೀಪ್ ಜೋಡಿ; 49 ವರ್ಷಗಳಲ್ಲಿ ಇದೇ ಮೊದಲು!

ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಸರ್ವಪತನ ಕಂಡಿತು. ನಾಯಕ ಶಾಯ್ ಹೋಪ್ 43 ರನ್, ಅಲಿಕ್ ಅಥನಾಜೆ 22 ರನ್, ಬ್ರಾಂಡನ್ ಕಿಂಗ್ 17 ರನ್, ಶಿಮ್ರಾನ್ ಹೆಟ್ಮೆಯರ್ 11 ರನ್ ಹೊರತುಪಡಿಸಿ ಉಳಿದವರಾರು ಎರಡಂಕಿ ಮೊತ್ತ ದಾಟಲಿಲ್ಲ.

IND vs WI: Ravindra Jadeja And Kuldeep Yadavs Duo Make Unique Record In ODI Cricket

115 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 22.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತು. ಆರಂಭಿಕ ಇಶಾನ್ ಕಿಶನ್ 52 ರನ್, ಸೂರ್ಯಕುಮಾರ್ ಯಾದವ್ 19 ರನ್, ರವೀಂದ್ರ ಜಡೇಜಾ 16 ರನ್, ರೋಹಿತ್ ಶರ್ಮಾ 12 ರನ್ ಗಳಿಸಿ ಗೆಲ್ಲಿಸಿದರು.

ಇನ್ನು ಭಾರತದ ಸ್ಟಾರ್‌ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್‌ ಜೋಡಿ ಎನಿಸಿದರು. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರು ವೆಸ್ಟ್ ಇಂಡೀಸ್ ತಂಡದ ಹೀನಾಯ ಸೋಲಿಗೆ ಕಾರಣರಾದರು.

ವೆಸ್ಟ್ ಇಂಡೀಸ್ ವಿರುದ್ಧ ಭಾರತ 5 ವಿಕೆಟ್‌ಗಳ ಜಯ ಸಾಧಿಸಿದ ಸಂದರ್ಭದಲ್ಲಿ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಈ ಅಪರೂಪದ ಸಾಧನೆ ಮಾಡಿದರು. ಕುಲದೀಪ್ ಯಾದವ್ ಕೇವಲ 3 ಓವರ್‌ಗಳಲ್ಲಿ 6 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 37 ರನ್‌ ನೀಡಿ 3 ವಿಕೆಟ್ ಪಡೆದರು.

IND vs WI: Ravindra Jadeja And Kuldeep Yadavs Duo Make Unique Record In ODI Cricket

"ಇದು ವೇಗಿಗಳ ಸ್ವರ್ಗ ಎಂದು ನಾನು ಭಾವಿಸಿದ್ದೆವು. ನಮ್ಮ ಕಡೆಯಿಂದ 7 ವಿಕೆಟ್ ಪಡೆದಿರುವುದು ನಮಗೆ ಸಂತೋಷವಾಗಿದೆ. ಪಿಚ್ ಸ್ವಲ್ಪ ಟರ್ನ್ ಆಗುತ್ತಿತ್ತು ಮತ್ತು ಬೌನ್ಸ್ ಕೂಡ ಇತ್ತು. ಇಂತಹ ಪಂದ್ಯವನ್ನು ಹೊಂದಿರುವುದು ಯಾವಾಗಲೂ ಒಳ್ಳೆಯದು. ನಾವು ಒಟ್ಟಿಗೆ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ," ಎಂದು ಪಂದ್ಯದ ನಂತರ ಕುಲದೀಪ್ ಯಾದವ್ ಹೇಳಿದ್ದಾರೆ.

ಹಿಂದಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದಿದ್ದ ಭಾರತ ತಂಡ, ಆತಿಥೇಯ ತಂಡವನ್ನು 23 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಕಟ್ಟಿಹಾಕಿತು. ಏಕೆಂದರೆ ಜಡೇಜಾ ಮತ್ತು ಯಾದವ್ ಕೆರಿಬಿಯನ್ ಬ್ಯಾಟರ್‌ಗಳ ವಿರುದ್ಧ ಮೇಲುಗೈ ಸಾಧಿಸಿದರು.

ನಂತರ ಇಶಾನ್ ಕಿಶನ್ 46 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 52 ರನ್‌ ಗಳಿಸಿದರು. ಭಾರತ ಸುಲಭವಾಗಿ ಗೆಲವು ಸಾಧಿಸಲು ಎದುರು ನೋಡುತ್ತಿತ್ತು. ಆದರೆ, ಚೇಸ್‌ನ ಅಂತ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಗೆಲುವಿಗೆ ಸ್ವಲ್ಪ ತಿಣುಕಾಡಿತು.

ಇನ್ನು 2023ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಕಿರಿಯ ಆಟಗಾರರಿಗೆ ಅವಕಾಶ ನೀಡಲು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೈದಾನಕ್ಕಿಳಿಯಲಿಲ್ಲ. ಆದರೆ, ನಾಯಕ ರೋಹಿತ್ ಶರ್ಮಾ ಐದನೇ ವಿಕೆಟ್ ಪತನದ ನಂತರ ಕ್ರೀಸ್‌ಗೆ ಆಗಮಿಸಿದರು.

ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಶನಿವಾರ, ಜುಲೈ 29ರಂದು ನಡೆಯಲಿದೆ.

Story first published: Friday, July 28, 2023, 9:20 [IST]
Other articles published on Jul 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+