Ind vs WI 3rd T20: ಮಹತ್ವದ ದಾಖಲೆ ಮಾಡಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ದಾಖಲೆ ಮಾಡಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದ ಭಾರತ ಮೂರನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್ ಗಳ ಗೆಲುವು ಸಾಧಿಸಿದೆ.
ಮೂರನೇ ಟಿ20 ಪಂದ್ಯದಲ್ಲಿ ವಿಂಡೀಸ್ ನೀಡಿದ್ದ 165ರನ್‌ಗಳ ಗುರಿ ಬೆನ್ನತ್ತಿದ ಭಾರತ ಸುಲಭವಾಗಿ 19 ಓವರ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಸುಲಭ ಜಯ ಸಾಧಿಸಿತು.
ಓಪನರ್ ಆಗಿ ಮೊದಲ ಅರ್ಧಶತಕ ದಾಖಲಿಸಿದ ಸೂರ್ಯಕುಮಾರ್ ಯಾದವ್ 146ರ ಸ್ಟ್ರೈಕ್‌ರೇಟ್‌ನಲ್ಲಿ 50 ಎಸೆತಗಳಲ್ಲಿ 73ರನ್ ಸಿಡಿಸಿದರು. ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಸೂರ್ಯ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಅಮೋಘ ಸಿಕ್ಸರ್ ಒಳಗೊಂಡಿದ್ದವು. ಒಂದೆಡೆ ವಿಕೆಟ್ ಉರುಳಿದರೂ ತನ್ನ ಕ್ಲಾಸ್ ಆಟವಾಡಿದ ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶದಲ್ಲಿ ಮಿಂಚಿನ ಆಟವಾಡಿದರು. ಇದಕ್ಕೂ ಮೊದಲು ಬೌಲಿಂಗ್‌ನಲ್ಲಿ ಒಂದು ಪ್ರಮುಖ ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯ ದಾಖಲೆ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 50ನೇ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ
ಭಾರತೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಆಟಗಾರ ಮಾಡದ ಸಾಧನೆಯನ್ನ ಹಾರ್ದಿಕ್ ಪಾಂಡ್ಯ ಮಾಡಿದರು. ಪಂದ್ಯದ 8ನೇ ಓವರ್‌ನಲ್ಲಿ ಬ್ರಾಂಡನ್ ಕಿಂಗ್ ವಿಕೆಟ್ ಪಡೆದರು. ಕೈಲ್ ಮೇಯರ್ಸ್ ಜೊತೆಗೆ ಉತ್ತಮ ಜೊತೆಯಾಟ ನೀಡುತ್ತಿದ್ದ ಬ್ರಾಂಡನ್ ವಿಕೆಟ್ ಎಗರಿಸುವಲ್ಲಿ ಹಾರ್ದಿಕ್ ಯಶಸ್ವಿಯಾದ್ರು. ಇದು ಟಿ20 ಕ್ರಿಕೆಟ್‌ನಲ್ಲಿ ಹಾರ್ದಿಕ್‌ಗೆ 50ನೇ ವಿಕೆಟ್ ಆಗಿದೆ.

50 ಟಿ20 ವಿಕೆಟ್ ಪಡೆದ ಭಾರತದ ಆರನೇ ಬೌಲರ್
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟ್ ಮೈಲುಗಲ್ಲು ತಲುಪಿದ ಭಾರತದ ಆರನೇ ಆಟಗಾರ ಎಂಬ ಸಾಧನೆಯನ್ನ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ. ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್, ರವೀಂದ್ರ ಜಡೇಜಾ ಅವರಂತಹ ಆಟಗಾರರು ಈ ಸಾಧನೆ ಮಾಡಿದ್ದಾರೆ.
50ನೇ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಜೊತೆಗೆ ಪಾಂಡ್ಯ ದಾಖಲೆ ಹಂಚಿಕೊಂಡಿದ್ದಾರೆ. ಜಡ್ಡು ಕೂಡ 50 ವಿಕೆಟ್ ಪಡೆದಿದ್ದು, ಪಾಂಡ್ಯ ಕಡಿಮೆ ಸಮಯದಲ್ಲಿ ಈ ಸಾಧನೆ ಮಾಡಿದ್ದಾರೆ. ಜಡೇಜಾ 2009ರಲ್ಲೇ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಹಾರ್ದಿಕ್ ಪಾಂಡ್ಯ 2016ರಲ್ಲಿ ಚೊಚ್ಚಲ ಟಿ20 ಪಂದ್ಯವನ್ನಾಡಿದರು.
ಇಷ್ಟಲ್ಲದೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಲ್ಲಿ 800 ರನ್ (802) ದಾಟಿದ್ದಾರೆ. ಭಾರತದ ಟಿ20 ಇತಿಹಾಸದಲ್ಲಿ 50 ವಿಕೆಟ್ ಮತ್ತು 800 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಆಶ್ಚರ್ಯವೇನಂದ್ರೆ ಜಡೇಜಾ ಕೂಡ ಈ ಮೈಲಿಗಲ್ಲನ್ನು ಇನ್ನೂ ತಲುಪಿಲ್ಲ.
ಆದ್ರೆ ಪಾಂಡ್ಯ ಅವರು ಬೌಲಿಂಗ್ ಮಾಡಿದ 57 ಇನ್ನಿಂಗ್ಸ್‌ಗಳಲ್ಲಿ ತಮ್ಮ 50 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬರೋಡಾ ಆಲ್‌ರೌಂಡರ್ ಉತ್ತಮ ಸರಾಸರಿ 27 ಮತ್ತು 8.26 ರ ಎಕಾನಮಿಯೊಂದಿಗೆ ಬೌಲಿಂಗ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಸೌತಾಂಪ್ಟನ್‌ನಲ್ಲಿ ಬೆಸ್ಟ್ ಬೌಲಿಂಗ್ 4/33 ಅಲ್ಲದೆ, ಅರ್ಧಶತಕ ದಾಖಲಿಸಿದ ಮೊದಲ ಭಾರತೀಯ ಕ್ರಿಕೆಟಿಗನಾದರು.
IND vs WI 3ನೇ ಟಿ20: ರೋಹಿತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಹೊರನಡೆದದ್ದೇಕೆ? ಮುಂದಿನ ಪಂದ್ಯ ಆಡ್ತಾರಾ, ಇಲ್ವಾ?

ಅಂತರಾಷ್ಟ್ರೀಯ ಮಟ್ಟದಲ್ಲಿ 9ನೇ ಸ್ಥಾನ
ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ 9ನೇ ಆಟಗಾರ ಹಾರ್ದಿಕ್ ಪಾಂಡ್ಯ ಆಗಿದ್ದಾರೆ. ಈ ಮೊದಲು ಶಕಿಬ್ ಅಲ್ ಹಸನ್, ಶಾಹಿದ್ ಅಫ್ರಿದಿ, ಡ್ವೇನ್ ಬ್ರಾವೋ, ಜಾರ್ಜ್ ಡಕ್ರೆಲ್, ಮೊಹಮ್ಮದ್ ಹಫೀಜ್, ಕೆವಿನ್ ಒ'ಬ್ರೇನ್ ಮತ್ತು ದಿಶಾರಾ ಪೆರಾರಾ ಇದಕ್ಕೂ ಮುನ್ನ ಸಾಧನೆ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಕಳೆದ 2 ವರ್ಷಗಳಿಂದ ಗಾಯದ ಸಮಸ್ಯೆಯಿಂದ ಭಾರತ ತಂಡದಿಂದ ಹೊರಗುಳಿದಿದ್ದರು. ಐಪಿಎಲ್ ಸರಣಿಯಲ್ಲಿ ಗುಜರಾತ್ ತಂಡದ ನಾಯಕನಾಗಿ ಹೊಸ ಪಯಣ ಆರಂಭಿಸಿದ ಅವರು ಭಾರತ ತಂಡದಲ್ಲಿ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ.
ಎಬಿ ಡಿವಿಲಿಯರ್ಸ್ ಬಳಿಯಿದ್ದ ಆ ವಿಶೇಷ ಸಾಮರ್ಥ್ಯ ಈ ಭಾರತೀಯನಲ್ಲಿದೆ ಎಂದ ಮಾಜಿ ಕ್ರಿಕೆಟಿಗ

ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಯುಜವೇಂದ್ರ ಚಹಾಲ್
ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆಯನ್ನ ಸ್ಪಿನ್ನರ್ ಯುಜವೇಂದ್ರ ಚಹಾಲ್ ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್ 79 ವಿಕೆಟ್‌ಗಳು, ಭುವನೇಶ್ವರ್ ಕುಮಾರ್ 73 ವಿಕೆಟ್, ಜಸ್ಪ್ರೀತ್ ಬುಮ್ರಾ 69 ವಿಕೆಟ್ ಕಬಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್ 64 ವಿಕೆಟ್ ಪಡೆಯುವ ಮೂಲಕ ಜಡೇಜಾ, ಪಾಂಡ್ಯಗಿಂತ ಮುಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications