Ind vs Zim: ಕಂಬ್ಯಾಕ್ ಪಂದ್ಯದಲ್ಲಿ 1ರನ್‌ಗೆ ಇನ್ನಿಂಗ್ಸ್ ಮುಗಿಸಿದ ಕೆಎಲ್ ರಾಹುಲ್

ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ ಒಂದು ರನ್‌ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಹಲವು ತಿಂಗಳು ಬಳಿಕ ಭಾರತ ತಂಡದ ಪರ ಆಡುತ್ತಿರುವ ಕೆ.ಎಲ್ ರಾಹುಲ್, ಐದು ಎಸೆತಗಳನ್ನ ಎದುರಿಸಿ 1 ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಮೊದಲ ಏಕದಿನ ಪಂದ್ಯದಲ್ಲಿ ಓಪನಿಂಗ್ ಬಾರದ ಕೆಎಲ್ ರಾಹುಲ್ ಕುರಿತಾಗಿ ನೆಟ್ಟಿಗರು ಸಾಕಷ್ಟು ಟೀಕೆ ಮಾಡಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿ ನಿರೀಕ್ಷೆಯಂತೆ ಶಿಖರ್ ಧವನ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್ ರಾಹುಲ್ ವಿಕ್ಟರ್ ನ್ಯೌಚಿ ಬೌಲಿಂಗ್‌ನಲ್ಲಿ ಪಂದ್ಯದ ಎರಡನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು.

ಐಪಿಎಲ್ 2022ರ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ ಕೆ.ಎಲ್
ಕಳೆದ ಕೆಲವು ತಿಂಗಳಿನಿಂದ ಹೊರಗುಳಿದಿರುವ ಕೆ.ಎಲ್ ರಾಹುಲ್, ಐಪಿಎಲ್ 2022ರ ಸೀಸನ್ ಬಳಿಕ ಯಾವೊಂದು ಪಂದ್ಯವನ್ನು ಆಡಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಇಂಜ್ಯುರಿಯಿಂದ ತಂಡದಿಂದ ಹೊರಬಿದ್ದರು. ಅದಾದ ಬಳಿಕ ಐರ್ಲೆಂಡ್, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯಿಂದ ಕೆ.ಎಲ್ ರಾಹುಲ್ ಅವಕಾಶ ವಂಚಿತರಾದ್ರು.
ಇದಾದ ಬಳಿಕ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಧವನ್ ನಾಯಕನಾಗಿ ಆಯ್ಕೆಯಾಗಿದ್ದರೂ, ನಂತರ ಕೆಎಲ್ ರಾಹುಲ್ ಫಿಟ್ನೆಸ್ ಸಾಧಿಸಿದ ನೆಪದಲ್ಲಿ ತಂಡಕ್ಕೆ ಆಯ್ಕೆಯಾದರು. ಧವನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ರಾಹುಲ್ ಗೆ ನಾಯಕತ್ವ ನೀಡಲಾಯಿತು. ಆದರೆ ಧವನ್ ಅವರನ್ನು ಉಪನಾಯಕರನ್ನಾಗಿ ಮಾಡಲಾಯಿತು. ಆದ್ರೆ ಕೆ.ಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಗದಿದ್ರೂ, ಎರಡನೇ ಪಂದ್ಯದಲ್ಲಿ ಮಿಂಚಬಹುದೆಂಬ ನಿರೀಕ್ಷೆಗಳು ಸುಳ್ಳಾಗಿವೆ. ಏಷ್ಯಾಕಪ್‌ಗೂ ಮುನ್ನ ಅಂತಿಮ ಏಕದಿನ ಪಂದ್ಯದಲ್ಲಿ ರನ್‌ಗಳಿಸಿ ರಾಹುಲ್ ತನ್ನ ಫಾರ್ಮ್ ಅನ್ನು ಮರಳಿ ಪಡೆಯಬೇಕಿದೆ.
T20 World Cup 2022: ಭಾರತ ತಂಡದ ಘೋಷಣೆ ದಿನಾಂಕ ಫೈನಲ್, ಆದ್ರೆ ಇನ್ನೂ ತಪ್ಪಿಲ್ಲ ಸೆಲೆಕ್ಷನ್ ತಲೆನೋವು!

161ರನ್‌ಗೆ ಆಲೌಟ್ ಆದ ಜಿಂಬಾಬ್ವೆ
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆತಿಥೇಯ ಜಿಂಬಾಬ್ವೆ ತಂಡವನ್ನ 161ರನ್‌ಗಳಿಗೆ ಕಟ್ಟಿಹಾಕಿತು. ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಕಬಳಿಸಿದ್ರೆ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ದೀಪಕ್ ಹೂಡಾ ತಲಾ ಒಂದು ವಿಕೆಟ್ ಪಡೆದರು.
162 ರನ್ ಟಾರ್ಗೆಟ್‌ನಲ್ಲಿ ಬೆನ್ನತ್ತಿರುವ ಭಾರತ ಕೂಡ ಪವರ್‌ಪ್ಲೇ ಓವರ್‌ಗಳಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿದ್ದು, ಕೆ.ಎಲ್ ರಾಹುಲ್ (1), ಶಿಖರ್ ಧವನ್ (33), ಇಶಾನ್ ಕಿಶನ್ (6) ಬಹುಬೇಗನೆ ವಿಕೆಟ್ ಒಪ್ಪಿಸಿದ್ರು. ಮೂರನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡ್ತಿದ್ದ ಶುಭಮನ್ ಗಿಲ್ (33) ಕೂಡ ವಿಕೆಟ್ ಕಳೆದುಕೊಂಡಿದ್ದಾರೆ. ಈ ಮೂಲಕ ಭಾರತ 100ರನ್ ಒಳಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.
ಏಷ್ಯಾಕಪ್: ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಸ್ಕ್ವಾಡ್ ಹಾಗೂ ನಾಯಕರ ಸಂಪೂರ್ಣ ವಿವರ

ಭಾರತ-ಜಿಂಬಾಬ್ವೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಹರಾರೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಟೀಂ ಇಂಡಿಯಾ
ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ನಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ಶಹಬಾಜ್ ಅಹ್ಮದ್, ಅವೇಶ್ ಖಾನ್, ರುತುರಾಜ್ ಗಾಯಕ್ವಾಡ್, ರಾಹುಲ್ ಗಾಯಕ್ವಾಡ್ , ದೀಪಕ್ ಚಹಾರ್
ಜಿಂಬಾಬ್ವೆ
ಇನೊಸೆಂಟ್ ಕೈಯಾ, ತಕುಡ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಂಗಾ
ಬೆಂಚ್: ಡೊನಾಲ್ಡ್ ತಿರಿಪಾನೊ, ಮಿಲ್ಟನ್ ಶುಂಭ, ಟೋನಿ ಶುಂಯ್‌ಸಾರಾ, ಮಿಲ್ಟನ್ ಶುಂಯ್‌ಸಾರಾ , ತಡಿವಾನಾಶೆ ಮರುಮನಿ, ರಿಚರ್ಡ್ ನಾಗರವ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications