Asia Cup 2022 : ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಸ್ಕ್ವಾಡ್ ಹಾಗೂ ನಾಯಕರ ಸಂಪೂರ್ಣ ವಿವರ

ಇದೇ ತಿಂಗಳ 27ರಂದು ನಡೆಯಲಿರುವ ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ಮೂಲಕ ಈ ಬಾರಿಯ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಇನ್ನು ಶ್ರೀಲಂಕಾ ನೆಲದಲ್ಲಿ ನಡೆಯಬೇಕಿದ್ದ ಈ ಬಾರಿಯ ಏಷ್ಯಾಕಪ್ ಟೂರ್ನಿ ಅಲ್ಲಿನ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಈ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ಇರಲಿದ್ದು, ಇದೊಂದು ಮಿನಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಎಂದೇ ಬಿಂಬಿತವಾಗಿದೆ. ಕಳೆದ ಬಾರಿ 2018ರಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾ ಈ ಬಾರಿಯೂ ಸಹ ಚಾಂಪಿಯನ್ ಆಗಿ ಹೊರಹೊಮ್ಮಿ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವುದರ ಜೊತೆಗೆ ಸತತ ಮೂರನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿಯುವತ್ತ ಚಿತ್ತ ನೆಟ್ಟಿದೆ.

ಏಷ್ಯಾಕಪ್: ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಫಿಟ್‌ನೆಸ್ ಟೆಸ್ಟ್; ಯಾವಾಗ ಯುಎಇ ಪ್ರಯಾಣ?ಏಷ್ಯಾಕಪ್: ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಫಿಟ್‌ನೆಸ್ ಟೆಸ್ಟ್; ಯಾವಾಗ ಯುಎಇ ಪ್ರಯಾಣ?

ಭಾರತ, ಶ್ರೀಲಂಕಾ, ಅಘ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಕ್ವಾಲಿಫೈಯರ್ ಗೆದ್ದು ಅರ್ಹತೆ ಪಡೆಕೊಳ್ಳುವ ಒಂದು ಪಂದ್ಯ ಸೇರಿದಂತೆ ಒಟ್ಟು 6 ತಂಡಗಳು ಟೂರ್ನಿಯಲ್ಲಿ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಕ್ವಾಲಿಫೈಯರ್ ತಂಡವಿದ್ದರೆ, ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿವೆ. ಇನ್ನು ಏಷ್ಯಾಕಪ್ ಕ್ರಿಕೆಟ್ ಕೌನ್ಸಿಲ್ ಸೂಚನೆಯಂತೆ ಶ್ರೀಲಂಕಾ ಹೊರತುಪಡಿಸಿ ಉಳಿದ ಎಲ್ಲಾ ತಂಡಗಳೂ ಸಹ ಸ್ಕ್ವಾಡ್‌ಗಳನ್ನು ಘೋಷಣೆ ಮಾಡಿದ್ದವು. ಆದರೆ ಲಂಕಾದಲ್ಲಿನ ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ತಂಡವನ್ನು ಪ್ರಕಟಿಸಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಮಯವನ್ನು ತೆಗೆದುಕೊಂಡು ಇಂದು ( ಆಗಸ್ಟ್ 20 ) ತನ್ನ ಸ್ಕ್ವಾಡ್‌ನ್ನು ನಿಗದಿತ ದಿನಕ್ಕಿಂತ ಹನ್ನೆರಡು ದಿನಗಳು ತಡವಾಗಿ ಪ್ರಕಟಿಸಿದೆ.

Maharaja Trophy: ಪ್ಲೇಆಫ್ ಆರಂಭಕ್ಕೆ 6 ಪಂದ್ಯಗಳಷ್ಟೇ ಬಾಕಿ; ಅಂಕಪಟ್ಟಿಯಲ್ಲಿ ಬೆಂಗಳೂರು ಟಾಪ್!Maharaja Trophy: ಪ್ಲೇಆಫ್ ಆರಂಭಕ್ಕೆ 6 ಪಂದ್ಯಗಳಷ್ಟೇ ಬಾಕಿ; ಅಂಕಪಟ್ಟಿಯಲ್ಲಿ ಬೆಂಗಳೂರು ಟಾಪ್!

ಈ ಮೂಲಕ ಕ್ವಾಲಿಫೈ ಆಗಲಿರುವ ತಂಡವನ್ನು ಹೊರತುಪಡಿಸಿ ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲಾ ತಂಡಗಳ ಸ್ಕ್ವಾಡ್ ಪ್ರಕಟವಾದಂತಾಗಿದ್ದು ಅವುಗಳ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

ಭಾರತ

ಭಾರತ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹಾರ್, ಶ್ರೇಯಸ್ ಅಯ್ಯರ್

ಪಾಕಿಸ್ತಾನ

ಪಾಕಿಸ್ತಾನ

ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್

*ಶಹೀನ್ ಶಾ ಆಫ್ರಿದಿ ಮೊಣಕಾಲಿನ ಗಾಯದಿಂದ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ.

ಶ್ರೀಲಂಕಾ

ಶ್ರೀಲಂಕಾ

ದಸುನ್ ಶನಕ (ನಾಯಕ), ಧನುಷಕ ಗುಣತಿಲಕ, ಪಾತುಂ ನಿಸ್ಸಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಬಾನುಕ ರಾಜಪಕ್ಷ, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿದು ಹಸರಂಗ, ಮಹೇಶ್ ತೀಕ್ಷಣ, ಜೆಫರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ದುಷ್ಮಂತ ಚಮೀರನನ್, ಚಮೀರನನ್, ಚಮೀರನನ್, ಚಮೀರನನ್ ಮಧುಶಂಕ, ಮಥೀಶ ಪತಿರಾನ, ದಿನೇಶ್ ಚಂಡಿಮಲ್, ನುವಾನಿಂದು ಫೆರ್ನಾಂಡೋ ಮತ್ತು ಕಸುನ್ ರಜಿತಾ.

*ಬಿನುರಾ ಫೆರ್ನಾಂಡೋ ಮತ್ತು ಕಸುನ್ ರಜಿತಾ ಅವರನ್ನು ಮೂಲ ತಂಡದಲ್ಲಿ ಆಯ್ಕೆ ಮಾಡಲಾಗಿದೆ, ಆದರೆ SLC ಇನ್ವಿಟೇಷನಲ್ ಟಿ20 ಲೀಗ್ 2022ರ ಸಮಯದಲ್ಲಿ ಗಾಯಕ್ಕೊಳಗಾದ ಅವರು ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ.

ಬಾಂಗ್ಲಾದೇಶ

ಬಾಂಗ್ಲಾದೇಶ

ಶಕಿಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಮಹ್ಮುದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ನಸುಮ್ ಅಹ್ಮದ್, ಸಬ್ಬೀರ್ ರಹಮಾನ್, ಮೆಹಿದಿ ಹಸನೋತ್ ಮಿಹಿದಿ ಹಸನೋತ್, ,ರು ನೂರುಲ್ ಹಸನ್ ಸೋಹನ್, ತಸ್ಕಿನ್ ಅಹ್ಮದ್

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ

ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್ (ಉಪನಾಯಕ), ಅಫ್ಸರ್ ಝಝೈ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ಮುಜಿಬ್ ಉಲ್ ರಹಮಾನ್, ಮುಜಿಬ್ ಹಕ್, ನೂರ್ ಅಹ್ಮದ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಶೀದ್ ಖಾನ್ ಮತ್ತು ಸಮೀವುಲ್ಲಾ ಶಿನ್ವಾರಿ.

ಮೀಸಲು: ನಿಜತ್ ಮಸೂದ್, ಖೈಸ್ ಅಹ್ಮದ್ ಮತ್ತು ಶರಫುದ್ದೀನ್ ಅಶ್ರಫ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: asia cup 2022 mykhel original
Story first published: Saturday, August 20, 2022, 17:38 [IST]
Other articles published on Aug 20, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X