
36 ರನ್‌ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ!
ಟೀಂ ಇಂಡಿಯಾದಲ್ಲಿ ಹೋರಾಟದ ಕಿಚ್ಚು ಹಚ್ಚಿದ ರವಿಶಾಸ್ತ್ರಿಯ ಆ ಸಂದರ್ಭವನ್ನ ಕ್ರಿಕೆಟ್ ದಿಗ್ಗಜ ಗವಾಸ್ಕರ್ ನೆನಪಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ ಪಂದ್ಯವೊಂದ್ರಲ್ಲಿ ಭಾರತ 36ರನ್‌ಗಳಿಗೆ ಆಲೌಟ್ ಆದ್ರೂ ಹೇಗೆ ಸರಣಿ ಗೆದ್ದು ಬಂದಿತು ಎಂಬುದನ್ನ ತಿಳಿಸಿದ್ದಾರೆ.
ಇದೇ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆಸೀಸ್ ವೇಗಿಗಳ ದಾಳಿಗೆ ತತ್ತರಿಸಿದ ಭಾರತ ಹಿಂದೆಂದೂ ಕಾಣದ ರೀತಿಯಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಕಳೆದ 70 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ (36 ರನ್) ಆಲೌಟ್ ಆಗುವು ಮೂಲಕ ಭಾರೀ ಮುಖಭಂಗ ಎದುರಿಸಿತು.
ಬ್ಯಾಟಿಂಗ್ ಮಾಡುವ ವೇಳೆ, ಹೀಗೆ ಪದೇ ಪದೇ ಗೊಣಗುತ್ತಿದ್ದ ಅಜಿಂಕ್ಯ ರಹಾನೆ: ಕಾರಣ ಏನ್ ಗೊತ್ತಾ?

ಭಾರೀ ಟೀಕೆಗಳನ್ನ ಎದುರಿಸಿದ ಭಾರತ
17 ಡಿಸೆಂಬರ್ 2020ರಂದು ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 21.2 ಓವರ್‌ಗಳಲ್ಲಿ ಕೇವಲ 36ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 244 ರನ್ ಕಲೆಹಾಕಿದ್ದ ಟೀಂ ಇಂಡಿಯಾಗೆ ಉತ್ತರವಾಗಿ ಆಸ್ಟ್ರೇಲಿಯಾ 191ರನ್‌ಗೆ ಮುಗ್ಗರಿಸಿತು. ಆದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್ ದಾಳಿಗೆ ನಲುಗಿದ ಕೊಹ್ಲಿ ಪಡೆ 36ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಭಾರತ ಪರ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಎರಡಂಕಿ ಮುಟ್ಟಲಿಲ್ಲ. ಆಸೀಸ್ ಪರ ಪ್ಯಾಟ್ ಕಮಿನ್ಸ್ (4), ಜೋಶ್ ಹೇಜಲ್‌ವುಡ್ (5) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.
ಭಾರತದ ಈ ಹೀನಾಯ ಪ್ರದರ್ಶನವು ಭಾರೀ ಟೀಕೆಗಳಿಗೆ ಕಾರಣವಾಯಿತು. ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರ ನಡುವೆ ನೀರವ ಮೌನಕ್ಕೆ ಕಾರಣವಾಯಿತು. ಮೊದಲ ಪಂದ್ಯದಲ್ಲೇ ಈ ಕೆಟ್ಟ ಪ್ರದರ್ಶನವು ತಂಡದ ಮನೋಬಲವನ್ನ ಕುಗ್ಗಿಸಿತು.

ಟೀಂ ಇಂಡಿಯಾಗೆ ಸ್ಪೂರ್ತಿ ತುಂಬಿದ ರವಿಶಾಸ್ತ್ರಿ
ಒಂದು ತಂಡವು ಟೆಸ್ಟ್ ಪಂದ್ಯವನ್ನು ಕೆಟ್ಟದಾಗಿ ಸೋತಾಗ, ಆ ತಂಡದ ಆಟಗಾರರು ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕಂಬ್ಯಾಕ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ ಕೋಚ್ ರವಿಶಾಸ್ತ್ರಿ ಮಾತುಗಳು ಟೀಂ ಇಂಡಿಯಾವನ್ನ ಹುರಿದುಂಬಿಸಿತು.
ನೀವು ಈ '36' ಅನ್ನು ಹೆಮ್ಮೆಯ ಬ್ಯಾಡ್ಜ್‌ನಂತೆ ಧರಿಸಬೇಕು ಎಂದು ರವಿಶಾಸ್ತ್ರಿ ತಂಡದ ಆಟಗಾರರಿಗೆ ಹೇಳಿದ್ದರು ಎಂದು ಸ್ಟಾರ್ ಸ್ಪೋರ್ಟ್ಸ್ ಚಾಟ್‌ನಲ್ಲಿ ಸುನಿಲ್ ಗವಾಸ್ಕರ್ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪ್ಲೇಯಿಂಗ್ 11ನಲ್ಲಿ ಆಡಿದ ಪ್ರತಿಯೊಬ್ಬ ಟೀಂ ಇಂಡಿಯಾ ಕ್ರಿಕೆಟಿಗನು ಸಹ ಉತ್ತಮವಾಗಿ ಪ್ರದರ್ಶನ ನೀಡಿದ್ರು ಎಂದು ಗವಾಸ್ಕರ್ ಹೊಗಳಿದ್ದಾರೆ.
ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್: ಮಳೆ ಅವಾಂತರ ನೋಡಿ 'ರಿಸರ್ವ್ ಡೇ ಬೇಕು' ಎಂದ ನೆಟ್ಟಿಗರು

2-1ರಿಂದ ಸರಣಿ ಕೈ ವಶ ಮಾಡಿಕೊಂಡ ಭಾರತ
ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲನ್ನ ಕಂಡಿದ್ದ ಭಾರತ, ಮೆಲ್ಬರ್ನ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿತು. ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ್ರೆ, ಬ್ರಿಸ್ಬೇನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 328ರನ್‌ಗಳ ಗುರಿ ಬೆನ್ನತ್ತಿ, 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಕಂಡು ಟ್ರೋಫಿ ಗೆದ್ದುಕೊಂಡಿತು.


Click it and Unblock the Notifications
