ಭಾರತ ವಿಶ್ವಕಪ್ ಗೆಲ್ಲುವ ಫೆವರಿಟ್: ಮಾಸ್ಟರ್ ಬ್ಲಾಸ್ಟರ್
ದುಬೈ, ಜ.13: ಕ್ರಿಕೆಟ್ ಲೋಕದಲ್ಲಿ ಗಾಡ್ ಆಫ್ ಕ್ರಿಕೆಟ್ ಸಚಿನ್ ಕಾಲಿರಿಸುವುದಕ್ಕಿಂತ ಮುನ್ನ ಅಭಿಮಾನಿಗಳಿಂದ ಮಾಸ್ಟರ್ ಬ್ಲಾಸ್ಟರ್ ಎಂದು ಕರೆಸಿಕೊಂಡ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು ಈ ಬಾರಿ ವಿಶ್ವಕಪ್ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಟೀಂ ಇಂಡಿಯಾ ಈಗಿರುವ ಫಾರ್ಮ್ ನೋಡಿದರೆ ಈ ಬಾರಿಯ ವಿಶ್ವಕಪ್ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ ಎಂದು ಐಸಿಸಿ ವೆಬ್ ಸೈಟ್ ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ಹೇಳಿದ್ದಾರೆ. ಅದರೆ, ಇದು 1992 ರ ವಿಶ್ವಕಪ್ ನಂತೆ ತೋರುತ್ತಿದ್ದು, ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ ಹಾಗೂ ಅಸ್ಟ್ರೇಲಿಯಾ ಕಪ್ ಫೆವರಿಟ್ ಎಂದಿದ್ದಾರೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ದಕ್ಷಿಣ ಆಫ್ರಿಕಾ ಎಲ್ಲರ ಫೆವರಿಟ್ ಆದರೆ, ಕೊನೆ ಹಂತದಲ್ಲಿ ಅವರ ಆಟದಲ್ಲಿ ಕ್ಷಮತೆ, ತಾಳ್ಮೆ ಕಾಯ್ದುಕೊಳ್ಳುವುದು ಮುಖ್ಯ. ನ್ಯೂಜಿಲೆಂಡ್ ಡಾರ್ಕ್ ಹಾರ್ಸ್ ಆಗಿದ್ದು ಯಾವುದೇ ಅಚ್ಚರಿ ಫಲಿತಾಂಶ ಹೊರ ಹಾಕುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಕೆಟರ್ ಬರೆದಿದ್ದಾರೆ.

ಕಳೆದ ಕೆಲವು ವಿಶ್ವಕಪ್ ಟೂರ್ನಿಗಳಿಗೆ ಈ ಟೂರ್ನಿಯನ್ನು ಹೋಲಿಸಲು ಆಗುವುದಿಲ್ಲ. 1992ರಲ್ಲಿದ್ದ ಪರಿಸ್ಥಿತಿ ಈಗಲೂ ಇದೆ. ತಂಡಗಳ ತುಲನೆ, ಆಟಗಾರರ ವೈಖರಿ ಎಲ್ಲವೂ ಇದು ಮುಕ್ತವಾಗಿ ಪೈಪೋಟಿ ನೀಡುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ವಿವಿಯನ್ ಅಭಿಪ್ರಾಯಪಟ್ಟಿದ್ದಾರೆ. [ಕದನಕ್ಕಿಳಿಯುವ 14 ತಂಡಗಳ ವಿವರ]
ಹಾಲಿ ಚಾಂಪಿಯನ್ ಟೀಂ ಇಂಡಿಯಾ ಎಂಎಸ್ ಧೋನಿ ನೇತೃತ್ವದಲ್ಲಿ ವಿಶ್ವಕಪ್ ಆಡಲಿದ್ದು, ತನ್ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಫೆ.15ರಂದು ಅಡಿಲೇಡ್ ನಲ್ಲಿ ನಡೆಯಲಿರುವ ಈ ಪಂದ್ಯವನ್ನು ವಿಶ್ವವೇ ಎದುರು ನೋಡುತ್ತಿದೆ.
ವಿಶ್ವಕಪ್ ವೀರ ರಿಚರ್ಡ್ಸ್: ಚ್ಯೂಯಿಂಗ್ ಗಮ್ ಅಗಿಯುತ್ತಾ, ಬ್ಯಾಟ್ ತಿರುವುತ್ತಾ 1975 ಹಾಗೂ 1979 ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ಕಪ್ ಎತ್ತುವಂತೆ ಮಾಡಿದ್ದ ವಿವಿಯನ್ ರಿಚರ್ಡ್ಸ್ ಅಸಲಿ ಮಾಸ್ಟರ್ ಬ್ಲಾಸ್ಟರ್. 1983ರ ಫೈನಲ್ ನಲ್ಲಿ ರಿಚರ್ಡ್ಸ್ ಔಟಾಗಿದ್ದು ವೆಸ್ಟ್ ಇಂಡೀಸ್ ಗೆ ಕಪ್ ಕೈತಪ್ಪುವಂತೆ ಮಾಡಿದ್ದು ಈಗ ಇತಿಹಾಸ. [ಬದ್ಧವೈರಿಗಳ ಕಾದಾಟ, ಎಲ್ಲಾ ದಾಖಲೆಗಳ ಧೂಳಿಪಟ]
ಸುಮಾರು 23 ವಿಶ್ವಕಪ್ ಪಂದ್ಯಗಳನ್ನಾಡಿರುವ ವಿವಿಯನ್ ರಿಚರ್ಡ್ಸ್ 63.13 ರನ್ ಸರಾಸರಿಯಂತೆ 1,103 ರನ್ ಚೆಚ್ಚಿದ್ದಾರೆ. 1979ರ ಫೈನಲ್ ನಲ್ಲಿ 138 ಎಸೆತಗಳಲ್ಲಿ 157 ರನ್ ಬಾರಿಸಿದ್ದು ಇನ್ನೂ ಕ್ರಿಕೆಟ್ ಅಭಿಮಾನಿಗಳ ಮನಸಲ್ಲಿ ಅಚ್ಚಳಿಯದೆ ಉಳಿದಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ. 14 ರಿಂದ ಮಾ. 29ರ ತನಕ ವಿಶ್ವಕಪ್ ಟೂರ್ನಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications