ಭಾರತ v/s ದಕ್ಷಿಣ ಆಫ್ರಿಕಾ: ಹೆಡ್ To ಹೆಡ್ ರೆಕಾರ್ಡ್, ಆಟಗಾರರ ಪ್ರಮುಖ ದಾಖಲೆಗಳು ಇಲ್ಲಿವೆ

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಡಿದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದ ನಂತರ, ಭಾರತ ತಂಡವು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದೆ. ವಿಶ್ವದ ನಂಬರ್ 1 ಟೆಸ್ಟ್ ತಂಡವಾಗಿರುವ ಭಾರತವು ತನ್ನ ಕ್ರಿಕೆಟ್ ಇತಿಹಾಸದಲ್ಲಿಯೇ ಟೆಸ್ಟ್ ಸರಣಿ ಗೆಲ್ಲದೆ ಇರುವ ಏಕೈಕ ದೇಶ ಇದಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಭಾರತಕ್ಕೆ ಇಲ್ಲಿ ಗೆಲುವು ಎನ್ನುವುದು ಕಬ್ಬಿಣದ ಕಡಲೆಯಾಗಿದೆ.
ಗಾಯದ ಸಮಸ್ಯೆಯಿಂದಾಗಿ ಈ ಪ್ರವಾಸದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ, ಈ ಬಾರಿ ಭಾರತ ತಂಡವು ಬಲಿಷ್ಠ ಪಡೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಕಣಕ್ಕಿಳಿಸಲು ಸಿದ್ದಗೊಂಡಿದೆ. ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ ಮತ್ತು ಇತ್ತೀಚೆಗೆ ಚೊಚ್ಚಲ ಶತಕ ಗಳಿಸಿದ ಶ್ರೇಯಸ್ ಅಯ್ಯರ್ ಅವರನ್ನೊಳಗೊಂಡ ಭಾರತೀಯ ಕ್ರಿಕೆಟ್ ತಂಡವು ರನ್‌ಗಳ ಮಳೆಗರೆಯಲು ದಕ್ಷಿಣ ಆಫ್ರಿಕಾದ ಪಿಚ್‌ಗಳ ಮೇಲೆ ಕಣ್ಣಿಟ್ಟಿದೆ.
ಇದರ ಜೊತೆಗೆ ತಮ್ಮ ವೃತ್ತಿಜೀವನದ ಕೆಟ್ಟ ಫಾರ್ಮ್ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಮೇಲೂ ಆಯ್ಕೆಗಾರರ ಕಣ್ಣಿದ್ದು, ಮಾಡು ಇಲ್ಲವೆ ಮಡಿ ಪರಿಸ್ಥಿತಿ ಅವರಿಗೆ ಬಂದೊದಗಿದೆ.
ಮತ್ತೊಂದೆಡೆ, ಡೀನ್ ಎಲ್ಗರ್ ನೇತೃತ್ವದ ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ನಾಯಕ ಎಲ್ಗರ್ ಹಾಗೂ ಟೆಂಬಾ ಬವುಮಾ, ಏಡೆನ್ ಮಾರ್ಕ್ರಾಮ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ಸಾಕಷ್ಟು ರನ್ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ, ಡುವಾನ್ ಒಲಿವರ್ ಮತ್ತು ಲುಂಗಿ ಎನ್‌ಗಿಡಿ ಅವರ ವೇಗದ ದಾಳಿಯು ಭಾರತವನ್ನು ತಡೆಯುವಲ್ಲಿ ರೆಡಿಯಾಗಿದೆ.
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ. ಕೋವಿಡ್-19 ಹಿನ್ನಲೆಯಲ್ಲಿ ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಅನೇಕ ದಾಖಲೆಗಳನ್ನ ಎದುರು ನೋಡಲಾಗಿದೆ. ಆ ಕುರಿತಾಗಿ ಅಂಕಿ-ಅಂಶಗಳನ್ನು ನೀವು ಈ ಕೆಳಗೆ ಕಾಣಬಹುದು.

ಹೆಡ್ ಟು ಹೆಡ್ ರೆಕಾರ್ಡ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ನಡೆದಿರುವ ಟೆಸ್ಟ್ ಪಂದ್ಯಗಳ ಇತಿಹಾಸವನ್ನು ಗಮನಿಸಿದರೆ, ಎರಡು ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 39 ಬಾರಿ ಮುಖಾಮುಖಿಯಾಗಿದ್ದಾರೆ. ಈ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 15 ಬಾರಿ ಮತ್ತು ಭಾರತ ತಂಡ 14 ಬಾರಿ ಗೆದ್ದಿದ್ದರೆ, 10 ಪಂದ್ಯಗಳ ಫಲಿತಾಂಶ ಡ್ರಾ ಆಗಿದೆ.
ಈ ಅವಧಿಯಲ್ಲಿ 20 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಮತ್ತು 19 ಪಂದ್ಯಗಳನ್ನ ಭಾರತ ಆಯೋಜಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಆಡಿದ 20 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಕೇವಲ 3 ಬಾರಿ ಗೆದ್ದಿದ್ದರೆ, 10 ಬಾರಿ ಸೋತಿದೆ. ಅಲ್ಲಿ 7 ಪಂದ್ಯಗಳು ಡ್ರಾ ಆಗಿವೆ. ಸೆಂಚುರಿಯನ್ ಮೈದಾನದಲ್ಲಿ ಭಾರತ ತಂಡ 2 ಪಂದ್ಯಗಳನ್ನು ಆಡಿದ್ದು, ಪ್ರತಿ ಬಾರಿಯೂ ಸೋಲನ್ನು ಕಂಡಿದೆ.
ಟೆಸ್ಟ್ ಸರಣಿಗೂ ಮುನ್ನ ಭರ್ಜರಿ ಡಿನ್ನರ್: ಆಟಗಾರರಿಗೆ ಸಾಥ್ ನೀಡಿದ ಕೋಚ್ ರಾಹುಲ್ ದ್ರಾವಿಡ್

ಕೊಹ್ಲಿ, ರಿಷಭ್ ಪಂತ್, ರಹಾನೆ ಕ್ಯಾಚ್‌ಗಳ ಶತಕಕ್ಕೆ ಹತ್ತಿರ
ಈ ಬಾರಿ ಭಾರತ ತಂಡ ಸೆಂಚುರಿಯನ್ ಮೈದಾನಕ್ಕೆ ಇಳಿದರೆ, ಇತಿಹಾಸವನ್ನು ಬದಲಾಯಿಸುವತ್ತ ದೃಷ್ಟಿ ನೆಟ್ಟಿದೆ. ಅದೇ ಸಮಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಅವರು ಈ ಪಂದ್ಯದಲ್ಲಿ ನೂರು ಕ್ಯಾಚ್‌ಗಳನ್ನು ಮುಟ್ಟಲು ಎದುರು ನೋಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಕ್ಯಾಚ್‌ಗಳ ಶತಕ ಪೂರೈಸಲು 2 ವಿಕೆಟ್‌ಗಳ ಅಗತ್ಯವಿದ್ದಲ್ಲಿ, ರಹಾನೆ 3 ಕ್ಯಾಚ್‌ಗಳ ದೂರದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಕ್ಯಾಚ್‌ಗಳನ್ನು ಪೂರೈಸಲು ಕೆಎಲ್ ರಾಹುಲ್ ಕೇವಲ ಒಂದು ಕ್ಯಾಚ್ ದೂರದಲ್ಲಿದ್ದಾರೆ. ಇನ್ನು ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಕ್ಯಾಚ್‌ಗಳ ಶತಕ ಪೂರೈಸಲು ಕೇವಲ 3 ವಿಕೆಟ್‌ಗಳ ಅಂತರದಲ್ಲಿದ್ದು, ಮೊದಲ ಪಂದ್ಯದಲ್ಲೇ ಅವರ ಕಣ್ಣುಗಳು ಈ ಅಂಕಿಅಂಶವನ್ನು ದಾಟಲು ಪ್ರಯತ್ನಿಸುತ್ತವೆ.

ಭಾರತದ ಬೌಲರ್‌ಗಳ ದಾಖಲೆಗಳು
ಈ ಸೆಂಚುರಿಯನ್ ಪಂದ್ಯವು ಭಾರತೀಯ ಬೌಲರ್‌ಗಳಿಗೆ ತುಂಬಾ ಉತ್ತಮ ರಿಸಲ್ಟ್ ನೀಡಿದೆ. ಹೀಗಾಗಿ ಕೆಲವರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಬಹುದು. ಭಾರತ ತಂಡದ ಹಿರಿಯ ಬೌಲರ್ ಇಶಾಂತ್ ಶರ್ಮಾ ಅವರು ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದರೆ, ರವಿಚಂದ್ರನ್ ಅಶ್ವಿನ್ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಬಹುದು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಲುಪಲು ಇಶಾಂತ್ ಶರ್ಮಾ ಜಹೀರ್ ಖಾನ್ (311 ವಿಕೆಟ್) ದಾಖಲೆಯನ್ನು ಮುರಿಯಲು ಕೇವಲ ಒಂದು ವಿಕೆಟ್ ಬೇಕಿದೆ. ಇನ್ನು ರವಿಚಂದ್ರನ್ ಅಶ್ವಿನ್ (427) ಈ ಪಟ್ಟಿಯಲ್ಲಿದ್ದು, 8 ವಿಕೆಟ್ ಪಡೆದ್ರೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಲಿದ್ದಾರೆ. ಈ ಮೂಲಕ ಮಾಜಿ ನಾಯಕ ಕಪಿಲ್ ದೇವ್ (434) ಅವರನ್ನು ಹಿಂದಿಕ್ಕಲಿದ್ದಾರೆ. ಇವುಗಳ ಹೊರತಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಲು 5 ವಿಕೆಟ್‌ಗಳ ಅಂತರದಲ್ಲಿರುವ ಮೊಹಮ್ಮದ್ ಶಮಿ ಅವರ ಬೌಲಿಂಗ್‌ನ ಮೇಲೆಯೂ ಎಲ್ಲರ ಕಣ್ಣಿದೆ.
ಕೊಹ್ಲಿ ರೆಕ್ಕೆ ಕಟ್ಟಿಹಾಕಲು ಇದುವೇ ಸರಿಯಾದ ಸಮಯ ಎಂದು ಭಾವಿಸಿದ್ದಾರೆ: ಮಾಜಿ ವೇಗಿಯ ಹೇಳಿಕೆ

ದಾಖಲೆಯ ಹೊಸ್ತಿಲಲ್ಲಿರುವ ದಕ್ಷಿಣ ಆಫ್ರಿಕಾ ವೇಗಿಗಳು
ದಕ್ಷಿಣ ಆಫ್ರಿಕಾದ ಯುವ ವೇಗಿ ಡುವಾನ್ ಒಲಿವರ್ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಲು ಕೇವಲ 2 ವಿಕೆಟ್‌ಗಳ ಅಂತರದಲ್ಲಿದ್ದು, ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸಿಕ್ಸರ್‌ಗಳ ಅನೇಕ ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಪರ ಎಲ್ಲಾ ಸ್ವರೂಪಗಳಲ್ಲಿ 400 ಸಿಕ್ಸರ್‌ಗಳ ಗಡಿಯನ್ನು ಪೂರ್ಣಗೊಳಿಸಲು ಏಡೆನ್ ಮಾರ್ಕ್ರಾಮ್‌ಗೆ 5 ಸಿಕ್ಸರ್‌ಗಳ ಅಗತ್ಯವಿದ್ದಲ್ಲಿ, ಟೆಂಬಾ ಬವುಮಾಗೆ ಎಲ್ಲಾ ಸ್ವರೂಪಗಳಲ್ಲಿ 350 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು 6 ಹೊಡೆತಗಳ ಅಗತ್ಯವಿದೆ.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ (129) ಅವರು ದಕ್ಷಿಣ ಆಫ್ರಿಕಾ ಪರ ಈ ಪಂದ್ಯದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ 10 ರೊಳಗೆ ಸೇರಬಹುದು. ಇದಕ್ಕಾಗಿ ಅವರಿಗೆ ಕೇವಲ 6 ವಿಕೆಟ್‌ಗಳ ಅಗತ್ಯವಿದ್ದು, ಪಾಲ್ ಆಡಮ್ಸ್ ಅವರನ್ನು ಹಿಂದಿಕ್ಕಿದ 10ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications