For Quick Alerts
ALLOW NOTIFICATIONS  
For Daily Alerts
 

ಭಾರತ V/S ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 5 ಬೌಲರ್ಸ್‌

Wicket takers

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಜಿದ್ದಾಜಿದ್ದಿನ ಟೆಸ್ಟ್ ಸರಣಿಗೆ ಕೌಂಟ್‌ಡೌನ್ ಶುರುವಾಗಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧಗೊಂಡಿದೆ. ಡಿಸೆಂಬರ್ 26ರಂದು ಸೆಂಚುರಿಯನ್ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತ ತಂಡವು ಮುನ್ನಡೆಸಲಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಡೀನ್ ಎಲ್ಗರ್‌ ನಾಯಕರಾಗಿದ್ದಾರೆ. ಭಾರತವು ದಕ್ಷಿಣ ಆಫ್ರಿಕಾದಲ್ಲಿ ಆಡಿದಾಗಲೆಲ್ಲಾ ಉತ್ತಮ ರೆಕಾರ್ಡ್ ಹೊಂದುವಲ್ಲಿ ವಿಫಲಗೊಂಡಿದ್ದು, ಅದ್ರಲ್ಲೂ ಟೆಸ್ಟ್‌ ಸರಣಿಯನ್ನ ಇದುವರೆಗೂ ಗೆಲ್ಲಲು ಸಾಧ್ಯವಾಗಿಲ್ಲ.

ಇದುವರೆಗೂ ಭಾರತವು 7 ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಭಾಗಿಯಾಗಿದ್ದು ಇದರಲ್ಲಿ 6 ಸರಣಿ ಸೋತಿದೆ ಮತ್ತು 1 ಟೆಸ್ಟ್ ಸರಣಿಯು ಡ್ರಾನಲ್ಲಿ ಅಂತ್ಯಗೊಂಡಿದೆ. ಇದರ ನಡುವೆ ಉಭಯ ರಾಷ್ಟ್ರಗಳು ಮುಖಾಮುಖಿಯಲ್ಲಿ, ಹರಿಣಗಳ ನಾಡಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಐವರು ಬೌಲರ್‌ಗಳನ್ನು ಈ ಕೆಳಗೆ ಕಾಣಬಹುದು.

ಡೇಲ್ ಸ್ಟೇನ್

ಡೇಲ್ ಸ್ಟೇನ್

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಉಭಯ ತಂಡಗಳ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಬಲಗೈ ವೇಗದ ಬೌಲರ್, ದಕ್ಷಿಣ ಆಫ್ರಿಕಾದಲ್ಲಿ ಭಾರತ ವಿರುದ್ಧ 8 ಟೆಸ್ಟ್ ಪಂದ್ಯಗಳಲ್ಲಿ 21.42ರ ಸರಾಸರಿಯಲ್ಲಿ 39 ವಿಕೆಟ್ ಕಬಳಿಸಿದ್ದಾರೆ. ಮೂರು ಬಾರಿ ಸ್ಟೇನ್ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

ಈತ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ 50 ರನ್ ನೀಡಿ 6 ವಿಕೆಟ್ ಪಡೆದಿದ್ದು ಬೆಸ್ಟ್ ಬೌಲಿಂಗ್ ಆಗಿದ್ದು, ಪಂದ್ಯವೊಂದರಲ್ಲಿ 9/147 ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ.

ಶಾನ್ ಪೊಲಾಕ್‌

ಶಾನ್ ಪೊಲಾಕ್‌

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬಾತ ಶಾನ್ ಪೊಲಾಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು ಭಾರತ ವಿರುದ್ಧ ಸರಣಿಯಲ್ಲಿ 17.05ರ ಸರಾಸರಿ ಹೊಂದಿದ್ದಾರೆ. ಪೊಲಾಕ್ 8 ಟೆಸ್ಟ್ ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿದ್ದಾರೆ. ಎರಡು ಬಾರಿ ಐದು ವಿಕೆಟ್ ಪಡೆದ್ರೆ, ಒಂದು ಬಾರಿ ಭಾರತ ವಿರುದ್ಧ 10 ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ.

ಈತನ ಬೆಸ್ಟ್ ಬೌಲಿಂಗ್ ಫಿಗರ್ 56 ರನ್‌ಗೆ 6 ವಿಕೆಟ್ ಕಬಳಿಸಿದ್ದು, ಇಡೀ ಪಂದ್ಯದಲ್ಲಿ 147 ರನ್ ನೀಡಿ 10 ವಿಕೆಟ್ ಪಡೆದ ಸಾಧನೆ ಇವರದ್ದಾಗಿದೆ.

IPL 2022: ಭಾರತದ 5 ಬೌಲಿಂಗ್ ಆಲ್‌ರೌಂಡರ್ಸ್ ಮೇಲೆ ಫ್ರಾಂಚೈಸಿಗಳ ಕಣ್ಣು

ಅಲಾನ್ ಡೊನಾಲ್ಡ್‌

ಅಲಾನ್ ಡೊನಾಲ್ಡ್‌

ದಕ್ಷಿಣ ಆಫ್ರಿಕಾ ಆಲ್‌ಟೈಮ್ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಅಲನ್ ಡೊನಾಲ್ಡ್‌ ಭಾರತ ವಿರುದ್ಧ ಸರಣಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಅಲನ್ ಡೊನಾಲ್ಟ್ ಭಾರತ ವಿರುದ್ಧ 7 ಟೆಸ್ಟ್‌ ಪಂದ್ಯಗಳಲ್ಲಿ 17.82ರ ಸರಾಸರಿಯಲ್ಲಿ 40 ವಿಕೆಟ್ ಪಡೆದು ಮಿಂಚಿದ್ದಾರೆ. ಈತ ಮೂರು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು, 1 ಬಾರಿ 10 ವಿಕೆಟ್ ಪಡೆದು ಮಿಂಚಿದ್ದಾರೆ.

ಅಲನ್ ಡೊನಾಲ್ಡ್‌ರ ಬೆಸ್ಟ್ ಬೌಲಿಂಗ್ ಫಿಗರ್ : ಇನ್ನಿಂಗ್ಸ್‌ನಲ್ಲಿ 7/84, ಪಂದ್ಯದಲ್ಲಿ 12//139

ಭಾರತ vs ದ.ಆಫ್ರಿಕಾ ಚೊಚ್ಚಲ ಟೆಸ್ಟ್: ಮೊದಲೆರಡು ದಿನ ಅನುಮಾನ, ಆರಂಭಕ್ಕೂ ಮುನ್ನ 2 ಕಹಿಸುದ್ದಿ!

ಜಾವಗಲ್ ಶ್ರೀನಾಥ್

ಜಾವಗಲ್ ಶ್ರೀನಾಥ್

ಭಾರತದ ಮಾಜಿ ವೇಗಿ, ಕನ್ನಡಿಗ ಜಾವಗಲ್ ಶ್ರೀನಾಥ್ ದಕ್ಷಿಣ ಆಫ್ರಿಕಾದಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀನಾಥ್ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ 43 ವಿಕೆಟ್ ಪಡೆದು ಮಿಂಚಿದ್ದು, ಸರಾಸರಿ 25.27ರ ಸರಾಸರಿಯಲ್ಲಿ ವಿಕೆಟ್ ಪಡೆದಿದ್ದಾರೆ. ಭಾರತದ ವೇಗಿ ಶ್ರೀನಾಥ್ ಮೂರು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಜಾವಗಲ್ ಶ್ರೀನಾಥ್ ಬೆಸ್ಟ್ ಬೌಲಿಂಗ್ ಫಿಗರ್: ಇನ್ನಿಂಗ್ಸ್‌ವೊಂದರಲ್ಲಿ 6/76, ಪಂದ್ಯದಲ್ಲಿ 8/104

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ | Oneindia Kannada
ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ

ವಿಶ್ವದ ಶ್ರೇಷ್ಟ ಸ್ಪಿನ್ನರ್‌ಗಳಲ್ಲಿ ಒಬ್ಬಾತ ಭಾರತ ಜಂಬೊ ಖ್ಯಾತಿಯ ಅನಿಲ್‌ ಕುಂಬ್ಳೆ , ದಕ್ಷಿಣ ಆಫ್ರಿಕಾ ನೆಲದಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದಾರೆ. ಅನಿಲ್ ಕುಂಬ್ಳೆ 12 ಟೆಸ್ಟ್ ಪಂದ್ಯಗಳಲ್ಲಿ 32.02 ಸರಾಸರಿಯಲ್ಲಿ 45 ವಿಕೆಟ್ ಕಬಳಿಸಿದ್ದಾರೆ. 1 ಬಾರಿ ಐದು ವಿಕೆಟ್ ಪಡೆದಿದ್ದು, ಇವರ ಬೆಸ್ಟ್ ಬೌಲಿಂಗ್ ಫಿಗರ್ ಈ ಕೆಳಗಿದೆ.

ಅನಿಲ್ ಕುಂಬ್ಳೆ ಇನ್ನಿಂಗ್ಸ್‌ವೊಂದರಲ್ಲಿ 53 ರನ್‌ ನೀಡಿ 6 ವಿಕೆಟ್ ಪಡೆದಿದ್ದು, ಪಂದ್ಯವೊಂದರಲ್ಲಿ 113ರನ್‌ಗೆ 8 ವಿಕೆಟ್‌ ಉರುಳಿಸಿದ್ದಾರೆ.

Story first published: Tuesday, December 21, 2021, 14:53 [IST]
Other articles published on Dec 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+