ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!

ಕೊಲಂಬೋ: ಭಾರತ ಮತ್ತು ಶ್ರೀಲಂಕಾ ಮಧ್ಯೆ ಏಕದಿನ ಸರಣಿ ಜುಲೈ 18ರಿಂದ ಶುರುವಾಗಲಿದೆ. ಸೀಮಿತ ಓವರ್‌ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತೀಯ ತಂಡ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಭಾರತೀಯ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ನಾಯಕನಾಗಿ ಮತ್ತು ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ಇರಲಿದ್ದಾರೆ.
ಭಾರತೀಯ ಮತ್ತೊಂದು ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸದ್ಯ ಇಂಗ್ಲೆಂಡ್‌ನಲ್ಲಿದೆ. ಈ ತಂಡಕ್ಕೆ ಎಂದಿನ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಅಂದ್ಹಾಗೆ ಭಾರತ-ಶ್ರೀಲಂಕಾ ಏಕದಿನ ಸರಣಿಯ ವೇಳೆ ಒಂದಿಷ್ಟು ಕುತೂಹಲಕಾರಿ ದಾಖಲೆಗಳು ನಿರ್ಮಾಣವಾಗಲಿವೆ. ಅದರ ಮಾಹಿತಿ ಇಲ್ಲಿದೆ.

ಶಿಖರ್ ಧವನ್ ದಾಖಲೆ
* ಶ್ರೀಲಂಕಾ ಪ್ರವಾಸದಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿರುವ ಶಿಖರ್ ಧವನ್ ಇನ್ನು 23 ರನ್ ಬಾರಿಸಿದರೆ ಏಕದಿನದಲ್ಲಿ ಅವರ ಹೆಸರಿನಲ್ಲಿ 6000 ರನ್ ಪೂರ್ಣಗೊಳ್ಳುತ್ತದೆ. ಈ ದಾಖಲೆಯೊಂದಿಗೆ ಧವನ್ ಏಕದಿನದಲ್ಲಿ 6000 ರನ್ ಬಾರಿಸಿದ ಐದನೇ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಳ್ಳಲಿದ್ದಾರೆ.
* ಇನ್ನು ಕೇವಲ 17 ರನ್ ಬಾರಿಸಿದರೆ, ಶಿಖರ್ ಧವನ್ ಶ್ರೀಲಂಕಾ ವಿರುದ್ಧ ಏಕದಿನದಲ್ಲಿ 1000 ರನ್ ಬಾರಿಸಿದಂತಾಗುತ್ತದೆ.

ಧವನ್, ಸ್ಯಾಮ್ಸನ್
* ಭಾರತ-ಶ್ರೀಲಂಕಾ ಮೊದಲನೇ ಏಕದಿನ ಪಂದ್ಯಕ್ಕಾಗಿ ಶಿಖರ್ ಧವನ್ ಕಣಕ್ಕಿಳಿಯುತ್ತಲೇ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಪಾದಾರ್ಪಣೆ ಪಂದ್ಯ ಆಡಿದ ಅತೀ ಹಿರಿಯ ಆಟಗಾರನಾಗಿ ಧವನ್ ಗುರುತಿಸಿಕೊಳ್ಳಲಿದ್ದಾರೆ. ಧವನ್‌ಗೆ ಆಗ 35 ವರ್ಷ 225 ದಿನ ವಯಸ್ಸಾಗಿರಲಿದೆ.
* ಟಿ20ಐ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಹಳ ಸಮಯದ ಬಳಿಕ ಏಕದಿನಕ್ಕೆ ಪಾದಾರ್ಪಣೆ ಮಾಡಿದ ಆಟಗಾರ ದಾಖಲೆಗೆ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಗುರುತಿಸಿಕೊಳ್ಳಲಿದ್ದಾರೆ. ಸ್ಯಾಮ್ಸನ್ ಟಿ20ಗೆ ಪಾದಾರ್ಪಣೆ ಮಾಡಿದ 5 ವರ್ಷ 364 ದಿನಗಳ ಬಳಿಕ ಏಕದಿನಕ್ಕೆ ಪಾದಾರ್ಪಣೆ ಮಾಡಿದಂತಾಗುತ್ತದೆ.

ಚಾಹಲ್, ಭುವನೇಶ್ವರ್
* ಇನ್ನು 8 ವಿಕೆಟ್‌ಗಳು ಲಭಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ದಾಖಲೆಗೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಗುರುತಿಸಿಕೊಳ್ಳಲಿದ್ದಾರೆ.
* ಉಪನಾಯಕ ಭುವನೇಶ್ವರ್ ಕುಮಾರ್‌ಗೆ ಇನ್ನು 12 ವಿಕೆಟ್‌ಗಳು ಸಿಕ್ಕರೆ ಏಕದಿನದಲ್ಲಿ 150 ವಿಕೆಟ್‌ಗಳ ಸಾಧನೆಗೆ ಕಾರಣರಾಗಲಿದ್ದಾರೆ.
* ಕಡೆಯಸಾರಿ ಭಾರತ ವಿರುದ್ಧ ಶ್ರೀಲಂಕಾ ತಂಡ ಏಕದಿನ ಸರಣಿ ಗೆದ್ದಿದ್ದೆಂದರೆ ಅದು 1997ರಲ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications