For Quick Alerts
ALLOW NOTIFICATIONS  
For Daily Alerts
 

IND vs WI: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಭಾರತಕ್ಕೆ ರೋಚಕ ಜಯ

India vs West Indies; India Beat West Indies By 3 Runs In 1st ODI Match

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಗೆಲುವಿನ ನಗೆ ಬೀರಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ರನ್‌ಗಳ ಅಂತರದ ರೋಮಾಂಚನಕಾರಿ ಜಯ ಸಾಧಿಸುವುದರ ಮೂಲಕ ಭಾರತ ತಂಡ ಶುಭಾರಂಭ ಮಾಡಿದೆ. ಕೊನೆಯವರೆಗೂ ತೂಗುವುಯ್ಯಾಲೆಯಲ್ಲಿದ್ದ ವಿಜಯಲಕ್ಷ್ಮಿ ಕೊನೆಗೂ ಭಾರತದ ಕಡೆ ಒಲಿಯಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ನಾಯಕತ್ವದ ಭಾರತ ತಂಡ ಆತಿಥೇಯ ತಂಡದ ವಿರುದ್ಧ ಉತ್ತಮ ಮೊತ್ತ ಕಲೆಹಾಕಿತ್ತು. ನಾಯಕ ಶಿಖರ್ ಧವನ್, ಶುಭ್‌ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧ ಶತಕದ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ, ಎದುರಾಳಿ ತಂಡಕ್ಕೆ 309 ರನ್‌ಗಳ ಬೃಹತ್ ಗುರಿ ನೀಡಿತ್ತು.

ಭಾರತ ನೀಡಿದ್ದ 309 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 305 ರನ್ ಗಳಿಸಿ ಕೊನೆಯ ಎಸೆತದಲ್ಲಿ ಸೋಲೊಪ್ಪಿಕೊಂಡಿತು.

ಡೆತ್ ಓವರ್‌ಗಳಲ್ಲಿ ರೊಮಾರಿಯೊ ಶೆಫರ್ಡ್ ಮತ್ತು ಅಕೆಲ್ ಹೊಸೈನ್ ಅವರ ವ್ಯರ್ಥ ಹೋರಾಟ ಕೊನೆಗೊಂಡಿತು ಮತ್ತು ಕೊನೆಯ ಓವರ್‌ನಲ್ಲಿ 15 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 11 ರನ್ ನೀಡಿ ಗೆಲುವಿಗೆ ಕಾರಣರಾದರು, ಅಲ್ಲದೇ 10 ಓವರ್‌ಗಳಲ್ಲಿ 58 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅಗತ್ಯ ಸಂದರ್ಭದಲ್ಲಿ 2 ವಿಕೆಟ್ ಪಡೆದರು ಮತ್ತು ಭಾರತ ಯಶಸ್ವಿಯಾಗಿ 308 ರನ್‌ಗಳನ್ನು ರಕ್ಷಿಸಿತು.

ವೆಸ್ಟ್ ಇಂಡೀಸ್ ಆರಂಭಿಕ ಕೈಲ್ ಮೇಯರ್ಸ್ ಅವರಿಂದ 75 ರನ್ ಮತ್ತು ಬ್ರ್ಯಾಂಡನ್ ಕಿಂಗ್ ಅವರ ಅರ್ಧಶತಕ ಮತ್ತು ಶೆಫರ್ಡ್ ಮತ್ತು ಮೇಯರ್ಸ್ ಅವರ ಅತಿಥಿ ಪಾತ್ರಗಳಿಂದ ಗುರಿ ಬೆನ್ನತ್ತುವತ್ತ ಸಾಗಿತ್ತು. ಆದಾಗ್ಯೂ ವೆಸ್ಟ್ ಇಂಡೀಸ್ 305/6 ಕ್ಕೆ ಸೀಮಿತಗೊಂಡಿತು.

India vs West Indies; India Beat West Indies By 3 Runs In 1st ODI Match


ಭಾರತದ ಬ್ಯಾಟಿಂಗ್ ಇನ್ನಿಂಗ್ಸ್
ಅಗ್ರ ಕ್ರಮಾಂಕದಲ್ಲಿ ನಾಯಕ ಶಿಖರ್ ಧವನ್ (97), ಶುಭ್‌ಮನ್ ಗಿಲ್ (64) ಮತ್ತು ಶ್ರೇಯಸ್ ಅಯ್ಯರ್ (54) ಹಾಗೂ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ (27), ಅಕ್ಷರ್ ಪಟೇಲ್ (21) ಉತ್ತಮ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಭಾರತ ತಂಡ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಕೆರಿಬಿಯನ್ನರ ಬೌಲಿಂಗ್ ದಾಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಕ್ರಮವಾಗಿ 13 ಮತ್ತು 12 ರನ್ ಗಳಿಸಿ ಔಟಾದರು.

ನಾಯಕ ಶಿಖರ್ ಧವನ್ ಮತ್ತು ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ 17.4 ಓವರ್‌ಗಳಲ್ಲಿ 119 ರನ್ ಜೊತೆಯಾಟ ನೀಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಮಧ್ಯದಲ್ಲಿ ಒಂದರ ಹಿಂದೆ ಒಂದು ವಿಕೆಟ್ ಉರುಳುತ್ತಿದ್ದಂತೆ ಭಾರತದ ರನ್ ವೇಗಕ್ಕೆ ಕಡಿವಾಣ ಬಿತ್ತು.

India vs West Indies; India Beat West Indies By 3 Runs In 1st ODI Match

ಒಂದು ಹಂತದಲ್ಲಿ ಭಾರತ 119/1 ಮೂಲಕ ದೊಡ್ಡ ಮೊತ್ತದ ಮುನ್ಸೂಚನೆ ನೀಡಿತ್ತು. ಆದಾಗ್ಯೂ, ವೆಸ್ಟ್ ಇಂಡೀಸ್ ನಿಯಮಿತ ಮಧ್ಯಂತರದಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರಿಂದ ದೊಡ್ಡ ಮೊತ್ತ ಬಾರಿಸಲು ಅವಕಾಶ ನೀಡಲಿಲ್ಲ.

ಮೈದಾನದಲ್ಲೇ ಅಯ್ಯರ್ ಮತ್ತು ಶಿಖರ್ ಧವನ್ ಮಸ್ತಿ ಹೇಗಿತ್ತು ನೋಡಿ | *Cricket | OneIndia Kannada

ವೆಸ್ಟ್ ಇಂಡೀಸ್ ಬೌಲಿಂಗ್
ಇನ್ನು ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ 10 ಓವರ್‌ಗಳಲ್ಲಿ 61 ರನ್ ನೀಡಿ 2 ವಿಕೆಟ್ ಪಡೆದರು. ಅದೇ ರೀತಿ ಗುಡಕೇಶ್ ಮೋಟಿ 10 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Story first published: Saturday, July 23, 2022, 9:57 [IST]
Other articles published on Jul 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+