ಟಿ20 ಶತಕ ಬಾರಿಸಿ ದಿಗ್ಗಜರ ಸಾಲಲ್ಲಿ ನಿಂತ ಎವಿನ್ ಲೆವಿಸ್
ಕಿಂಗ್ಸ್ ಟನ್ (ಜಮೈಕಾ), ಜುಲೈ 10: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿರೀಕ್ಷೆಯಂತೆ ರನ್ ಮಳೆ ಹರಿಯಿತು. ವೆಸ್ಟ್ ಇಂಡೀಸ್ ತಂಡದ ಪರ ಕ್ರಿಸ್ ಗೇಲ್ ಬದಲಿಗೆ ಆರಂಭಿಕ ಆಟಗಾರ ಎವಿನ್ ಲೆವಿಸ್ ಅವರು ಭರ್ಜರಿ ಆಟವಾಡಿ ಎಲ್ಲರ ಗಮನ ಸೆಳೆದರು.
ಗೇಲ್ ವೈಫಲ್ಯದ ನಡುವೆಯೂ ಭಾರತವನ್ನು ವಿಂಡೀಸ್ ಮಣಿಸಿದ್ದು ಹೇಗೆ?
ಭಾರತ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಲ್ಲಿ 125 ರನ್ (6 ಬೌಂಡರಿ, 12 ಸಿಕ್ಸರ್) ಸಿಡಿಸಿ ಅಜೇಯವಾಗಿ ಉಳಿದ ಎವಿನ್ ಅವರು ತಮ್ಮ ವೃತ್ತಿ ಬದುಕಿನ ಎರಡನೇ ಶತಕ ಬಾರಿಸಿ ದಿಗ್ಗಜರ ಸಾಲಿಗೆ ನಿಂತರು. ಜತೆಗೆ ವೆಸ್ಟ್ ಇಂಡೀಸ್ ತಂಡವು ಭಾರತ ವಿರುದ್ಧ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಲು ನೆರವಾದರು. ಟಿ20 ಮಾದರಿಯಲ್ಲಿ ಭಾರತ ವಿರುದ್ಧ ವಿಂಡೀಸ್ ತಂಡ 5-2ರ ಅಂತರದಲ್ಲಿ ಮುಂದಿದೆ.
ಟಿ20ಐː ಭಾರತ ವಿರುದ್ಧ ವೆಸ್ಟ್ ಇಂಡೀಸ್ ಗೆ 9 ವಿಕೆಟ್ ಗಳ ಜಯ
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿ ತನಕ ಕೇವಲ ಮೂವರು ಮಾತ್ರ ಒಂದಕ್ಕಿಂತ ಹೆಚ್ಚು ಬಾರಿ ಶತಕ ಬಾರಿಸಿದ್ದಾರೆ.ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ ನಂತರ ವಿಂಡೀಸ್ ನ ಎವಿನ್ ಲೆವಿಸ್ ಈ ಸಾಧನೆ ಮಾಡಿದ್ದಾರೆ. ಈ ಶತಕಕ್ಕೂ ಮುನ್ನ ಫ್ಲೋರಿಡಾದಲ್ಲಿ ಭಾರತ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ದರು.

ಎವಿನ್ ದಾಖಲೆಗಳು
ವೆಸ್ಟ್ ಇಂಡೀಸ್ ವಿರುದ್ಧ ವೈಯಕ್ತಿಕ ಗರಿಷ್ಠ ಮೊತ್ತಗಳಿಕೆ(ಅಜೇಯ 125). ಈ ಮುಂಚೆ ಕ್ರಿಸ್ ಗೇಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ್ದ 117ರನ್(ವಿಶ್ವ ಟಿ20, 2007) ದಾಖಲೆಯಾಗಿತ್ತು.
ಜಾಗತಿಕವಾಗಿ ಅರೋನ್ ಫಿಂಚ್ 156 ಇಂಗ್ಲೆಂಡ್ ವಿರುದ್ಧ 2013 ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅಜೇಯ 145ರನ್ ಶ್ರೀಲಂಕಾ ವಿರುದ್ಧ ಗಳಿಸಿದ್ದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಸಿಕ್ಸರ್ 2ನೇ ಬೆಸ್ಟ್
ಅಜೇಯ 125ರನ್ ಮೊತ್ತದಲ್ಲಿ 12 ಸಿಕ್ಸರ್ ಬಾರಿಸಿದ ಎವಿನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಅರೋನ್ ಫಿಂಚ್ ಅವರು 156ರನ್ ಬಾರಿಸಿದ್ದಾಗ 14 ಸಿಕ್ಸರ್ ಹೊಡೆದಿದ್ದರು. ಭಾರತ ವಿರುದ್ಧ ಮೊದಲ ಶತಕ ಗಳಿಸಿದ್ದಾಗ ಲೆವಿಸ್ ಅವರು 9 ಸಿಕ್ಸರ್ ಸಿಡಿಸಿದ್ದರು.

ಭಾರತ ವಿರುದ್ಧ ದಾಖಲೆ
ಚೇಸ್ ಮಾಡುವಾಗ ಎವಿನ್ 125 ರನ್ ಗಳಿಸಿದ್ದು ದಾಖಲೆಯಾಗಿದೆ. ಈ ಮುಂಚೆ ಶೇನ್ ವಾಟ್ಸನ್ ಅವರು ಭಾರತದ ವಿರುದ್ಧ 2016ರಲ್ಲಿ 124ರನ್ ಗಳಿಸಿದ್ದು ದಾಖಲೆಯಾಗಿತ್ತು. ಇದಲ್ಲದೆ, ಚೇಸ್ ಮಾಡುವಾಗ ಹೆಚ್ಚು ರನ್ ಗಳಿಸಿದ್ದ ದಾಖಲೆ ಹೊಂದಿದ್ದ ಹಾಂಗ್ ಕಾಂಗ್ ನ ಬಾಬರ್ ಹಯಾತ್ ಅವರ 122ರನ್(ಏಷ್ಯಾ ಕಪ್) ದಾಖಲೆಯನ್ನು ಎವಿನ್ ಸರಿಗಟ್ಟಿದರು.

ಪವರ್ ಪ್ಲೇ
ಪವರ್ ಪ್ಲೇ ನಲ್ಲಿ 47ರನ್ ಗಳಿಸಿದ ಎವಿನ್ ಈ ರೀತಿ ಭರ್ಜರಿ ಪ್ರದರ್ಶನ ನೀಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಕಳೆದ ವರ್ಷ ಫ್ಲೋರಿಡಾದಲ್ಲಿ ಜಾನ್ಸನ್ ಚಾರ್ಲ್ಸ್ ಅವರು ಪವರ್ ಪ್ಲೇ ನಲ್ಲೇ 51ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications