For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್‌ ವಿರುದ್ಧ ದಾಖಲೆಯ ಸರಣಿ ಗೆದ್ದ ಭಾರತ: 2007ರಿಂದ ಸೋತೆ ಇಲ್ಲ!

Team india

ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯವನ್ನ 44 ರನ್‌ಗಳಿಂದ ಗೆದ್ದು ಬೀಗಿದ ಟೀಂ ಇಂಡಿಯಾ 44 ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿದೆ. ಈ ಗೆಲುವಿನ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದು ಬೀಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್‌ಗಳಿಸಲಷ್ಟೇ ಶಕ್ತವಾಯಿತು. ವೆಸ್ಟ್‌ ಇಂಡೀಸ್‌ 239 ರನ್‌ಗಳ ಗುರಿಯನ್ನ ಸುಲಭವಾಗಿ ತಲುಪಬಹುದೆಂಬ ಊಹೆ ತಪ್ಪಾಯಿತು. ಭಾರತದ ಪ್ರಬಲ ಬೌಲಿಂಗ್ ದಾಳಿಗೆ, ಅದ್ರಲ್ಲೂ ಕನ್ನಡಿಗ ಪ್ರಸಿದ್ಧ ಕೃಷ್ಣ ದಾಳಿಗೆ ನಲುಗಿದ ವಿಂಡೀಸ್ 193 ರನ್‌ಗಳಿಗೆ ಆಲೌಟ್ ಆಗಿದೆ. ಪರಿಣಾಮ 44ರನ್‌ಗಳ ಜಯದ ಜೊತೆಗೆ ಸರಣಿ ಗೆದ್ದಿತು.

ಈ ಸರಣಿ ಗೆಲುವಿನ ಜೊತೆಗೆ ಭಾರತ ವಿಶೇಷ ಸಾಧನೆ ಮಾಡಿದೆ. ದ್ವಿಪಕ್ಷೀಯ ಸರಣಿಯಲ್ಲಿ ತಂಡವೊಂದರ ವಿರುದ್ಧ ದೀರ್ಘಕಾಲದಿಂದ ಅತಿ ಹೆಚ್ಚು ಗೆಲುವನ್ನ ಸಾಧಿಸಿದ ತಂಡವಾಗಿ ಭಾರತ ಹೊರಹೊಮ್ಮಿದೆ. 2007 ರಿಂದ 2022ರ ವರೆಗೆ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 11 ಸರಣಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನ 1996-2021ರ ಅವಧಿಯಲ್ಲಿ 11 ಸರಣಿಯನ್ನ ಗೆದ್ದಿದೆ. ಇದೇ ರೀತಿ ಯಾವ ತಂಡಗಳು ಎಷ್ಟು ಸರಣಿಯನ್ನ ಗೆದ್ದಿವೆ ಎಂಬುದನ್ನ ಈ ಕೆಳಗೆ ಕಾಣಬಹುದು.

Surya Kumar Yadaw , ಇತಿಹಾಸದಲ್ಲೇ ಯಾರೂ ಮಾಡದ ಸಾಧನೆ ಮಾಡಿದ್ದಾರೆ | Oneindia Kannada

ಜಿಂಬಾಬ್ವೆ ವಿರುದ್ಧ ಪಾಕಿಸ್ತಾನಕ್ಕೆ 11 ಸರಣಿ ಜಯ (1996-21)
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 11 ಸರಣಿ ಗೆಲುವು (2007-22)
ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನಕ್ಕೆ 9 ಸರಣಿ ಜಯ (1999-17)
ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾಗೆ 9 ಸರಣಿ ಗೆಲುವು (1995-18)
ಶ್ರೀಲಂಕಾ ವಿರುದ್ಧ ಭಾರತಕ್ಕೆ 9 ಸರಣಿ ಜಯ (2007-21)

Story first published: Wednesday, February 9, 2022, 23:42 [IST]
Other articles published on Feb 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+