ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂರನೇ ಟೆಸ್ಟ್‌ನಲ್ಲಿ ಭಾರತ ಟೆಸ್ಟ್‌ ತಂಡದ ಹುಬ್ಬೇರಿಸುವ ಸಾಧನೆಗಳು

By Manjunatha

ನಾಟಿಂಗಂ, ಆಗಸ್ಟ್ 22: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಅತಿ ಸನಿಹದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪಾರಮ್ಯ ಮೆರೆದ ಭಾರತ ಈ ಟೆಸ್ಟ್‌ನಲ್ಲಿ ಏಕಾಧಿಪತ್ಯ ಸಾಧಿಸಿದೆ.

ಈ ಟೆಸ್ಟ್‌ನಲ್ಲಿ ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಗಮನ ಸೆಳೆದ ಭಾರತ ತಂಡ ಹಲವು ಸಾಧನೆಗಳನ್ನು ಮಾಡಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿಯೂ ಕೆಲವು ಹೊಸ ದಾಖಲೆಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್: ಒಂದು ವಿಕೆಟ್‌ಗಾಗಿ ಒಂದು ದಿನ ಕಾಯಬೇಕುಭಾರತ-ಇಂಗ್ಲೆಂಡ್ ಟೆಸ್ಟ್: ಒಂದು ವಿಕೆಟ್‌ಗಾಗಿ ಒಂದು ದಿನ ಕಾಯಬೇಕು

ಬ್ಯಾಟಿಂಗ್ ದೈತ್ಯ ಕೊಹ್ಲಿ ಸೆಂಚುರಿಯದ್ದು ಒಂದು ಅಂದವಾದರೆ, ಬುಮ್ರಾರ ಬೌಲಿಂಗ್‌ ನದ್ದೇ ಒಂದು ಅಂದ, ಎರಡಕ್ಕೂ ಚಿನ್ನದ ಚೌಕಟ್ಟು ಹಾಕಿದಂತೆ ಫೀಲ್ಡಿಂಗ್ ಕೂಡ ಈ ಪಂದ್ಯದಲ್ಲಿ ಜೊತೆಯಾಗಿತ್ತು.

ಬುಮ್ರಾ ಐದು ವಿಕೆಟ್ ಮ್ಯಾಜಿಕ್

ಬುಮ್ರಾ ಐದು ವಿಕೆಟ್ ಮ್ಯಾಜಿಕ್

ವಿದೇಶ ನೆಲದಲ್ಲಿ ಭಾರತದ ಬೌಲರ್‌ಗಳ ಸಾಧನೆ ಅಷ್ಟಕ್ಕಷ್ಟೆ ಆದರೆ ಈ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಐದು ವಿಕೆಟ್ ಕಬಳಿಸಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ. ಮೊದಲೆರಡು ಪಂದ್ಯದಿಂದ ವಂಚಿತರಾಗಿದ್ದ ಅವರು ಮೂರನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಇದು ಅವರ ಎರಡನೇ 5 ವಿಕೆಟ್ ಗುಚ್ಛವಾಗಿದೆ.

ಅಜರ್ ದಾಖಲೆ ಮುರಿದು, ಕೊಹ್ಲಿ ಮಾಡಿದ ಸಾಧನೆಗಳೇನು?

ಕೊಹ್ಲಿ ಟೆಸ್ಟ್ ಶತಕ

ಕೊಹ್ಲಿ ಟೆಸ್ಟ್ ಶತಕ

ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ರನ್‌ನಿಂದ ಶತಕ ವಂಚಿತರಾಗಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ದಾಖಲೆ ಮಾಡಿದರು. ವಿದೇಶಿ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕ, ವೇಗವಾಗಿ 23 ಶತಕಗಳಿಸಿದ ಭಾರತೀಯ ಇನ್ನೂ ಹಲವು ದಾಖಲೆಗಳು ಅವರ ಶತಕಕ್ಕೆ ಅಂಟಿಕೊಂಡಿವೆ.

ವಿಕೆಟ್ ಕೀಪಿಂಗ್‌ನಲ್ಲಿಯೂ ದಾಖಲೆ ನಿರ್ಮಿಸಿದ ರಿಷಬ್ ಪಂತ್

ರಿಷಬ್ ಪಂತ್ ಮತ್ತು ಕೆ.ಎಲ್.ರಾಹುಲ್ ದಾಖಲೆ

ರಿಷಬ್ ಪಂತ್ ಮತ್ತು ಕೆ.ಎಲ್.ರಾಹುಲ್ ದಾಖಲೆ

ಒಂದೇ ಟೆಸ್ಟ್‌ ಪಂದ್ಯದಲ್ಲಿ ಐದಕ್ಕೂ ಹೆಚ್ಚು ಕ್ಯಾಚುಗಳನ್ನು ಕೆ.ಎಲ್.ರಾಹುಲ್ ಮತ್ತು ಕೀಪರ್ ರಿಷಬ್ ಪಂಥ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ರಿಷಬ್ ಪಂಥ್ 7 ಮತ್ತು ಕೆ.ಎಲ್.ರಾಹುಲ್ ಏಳು ಕ್ಯಾಚನ್ನು ಪಡೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಒಬ್ಬರೇ ನಾಲ್ಕು ಕ್ಯಾಚ್ ಪಡೆದಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಕೆ.ಎಲ್.ರಾಹುಲ್ ದಾಖಲೆ

ಇಂಗ್ಲೆಂಡ್ ನೆಲದಲ್ಲಿ ಕೆ.ಎಲ್.ರಾಹುಲ್ ದಾಖಲೆ

ಕರ್ನಾಟಕದ ಕೆ.ಎಲ್.ರಾಹುಲ್ ಇಂಗ್ಲೆಂಡ್ ನೆಲದಲ್ಲಿ ದಾಖಲೆ ಮಾಡಿದ್ದಾರೆ. ಇಂಗ್ಲೆಂಡ್ ನಲ್ಲಿ ಟೆಸ್ಟ್‌ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚು ಪಡೆದ ಶ್ರೇಯ ಕೆ.ಎಲ್.ರಾಹುಲ್ ಪಾಲಾಗಿದೆ. ಅವರು ಒಟ್ಟು 7 ಕ್ಯಾಚ್ ಪಡೆದಿದ್ದಾರೆ. ಇರುವ ಒಂದು ವಿಕೆಟ್ ಕೂಡ ಅವರ ಕೈಗೆ ಕ್ಯಾಚಿತ್ತರೆ ಇದು ಮತ್ತೊಂದು ದಾಖಲೆಯಾಗುತ್ತದೆ.

ರಿಷಬ್ ಪಂಥ್ ದಾಖಲೆ

ರಿಷಬ್ ಪಂಥ್ ದಾಖಲೆ

ಪಾದಾರ್ಪಣೆ ಪಂದ್ಯದಲ್ಲಿ ಮೊದಲ ರನ್ ಅನ್ನು ಸಿಕ್ಸರ್‌ ಮೂಲಕಗಳಿಸಿ ದಾಖಲೆ ನಿರ್ಮಿಸಿದ್ದ ರಿಷಬ್ ಪಂಥ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲಿಯೇ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ವಿಕೆಟ್ ಕೀಪರ್ ಎಂಬ ಶ್ರೇಯ ರಿಷಬ್ ಪಂಥ್ ಪಾಲಾಗಿದೆ. ಅವರು ಒಟ್ಟು 7 ಕ್ಯಾಚ್‌ ಪಡೆದು ಮಿಂಚಿದ್ದಾರೆ.

ವೇಗಿ ಸ್ಟುವರ್ಟ್‌ ಬ್ರಾಡ್‌ ದಾಖಲೆ

ವೇಗಿ ಸ್ಟುವರ್ಟ್‌ ಬ್ರಾಡ್‌ ದಾಖಲೆ

ಇಂಗ್ಲೆಂಡ್ ತಂಡದ ಆಟಗಾರರಿಂದಲೂ ಕೆಲವು ದಾಖಲೆಗಳಾಗಿವೆ. ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್‌ ಬ್ರಾಡ್ ಅವರು 2000 ರನ್ ಗಳಿಸಿದ ಹಾಗೂ 269 ವಿಕೆಟ್ ಗಳಿಸಿದ ವಿರಳ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇಯಾನ್ ಬಾತಮ್, ಭಾರತದ ಕಪಿಲ್ ದೇವ್ ಈ ಪಟ್ಟಿಯಲ್ಲಿರುವ ಪ್ರಮುಖರು.

ಮೆಕ್‌ಗ್ರಾತ್ ದಾಖಲೆ ಸನಿಹಕ್ಕೆ ಜೇಮ್ಸ್‌

ಮೆಕ್‌ಗ್ರಾತ್ ದಾಖಲೆ ಸನಿಹಕ್ಕೆ ಜೇಮ್ಸ್‌

ಇಂಗ್ಲೆಂಡ್ ವೇಗಿ ಜೇಮ್ಸ್‌ ಆಂಡರ್ಸನ್ ಟೆಸ್ಟ್‌ನಲ್ಲಿ 557 ಟೆಸ್ಟ್‌ ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮೆಕ್‌ಗ್ರಾತ್ 563 ಟೆಸ್ಟ್ ವಿಕೆಟ್ ಪಡೆದಿದ್ದು ಅವರ ದಾಖಲೆ ಅಳಿಸುವತ್ತ ದಾಪುಗಾಲು ಹಾಕಿದ್ದಾರೆ.

Story first published: Wednesday, August 22, 2018, 13:49 [IST]
Other articles published on Aug 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X