For Quick Alerts
ALLOW NOTIFICATIONS  
For Daily Alerts
 

ಪತ್ನಿ ಸಾನಿಯಾ ಸ್ಫೂರ್ತಿಯಿಂದ ಶತಕ ಬಾರಿಸಿದ ಶೊಯೆಬ್

By Mahesh

ಕರಾಚಿ, ಅ.13: ಪಾಕಿಸ್ತಾನದ ಮಾಜಿ ನಾಯಕ ಶೊಯೆಬ್ ಮಲ್ಲಿಕ್ ಅವರು ತಮ್ಮ ಟೆಸ್ಟ್ ಶತಕವನ್ನು ಪತ್ನಿ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಅರ್ಪಿಸಿದ್ದಾರೆ. ಟೆಸ್ಟ್ ತಂಡಕ್ಕೆ ಮರಳಲು ಸಾನಿಯಾ ಸ್ಫೂರ್ತಿಯಾಗಿದ್ದಾರೆ ಎಂದು ಶೊಯೆಬ್ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶೊಯೆಬ್ ತಾಳ್ಮೆಯುತ ಶತಕ ಗಳಿಸಿದ್ದಾರೆ.

ಅಬುಧಾಬಿಯಲ್ಲಿ ನಡೆದಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದೆಡೆ ಯೂನಿಸ್ ಖಾನ್ ಅವರು ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನೊಂದೆಡೆ ಹಲವು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ ಶೊಯೆಬ್ ಅವರು ಅರ್ಹ ಶತಕ ಗಳಿಸಿದ್ದಾರೆ.

Inspired by wife Sania Mirza

ಆಗಸ್ಟ್ 2010ರ ನಂತರ ಪಾಕಿಸ್ತಾನ ತಂಡಕ್ಕೆ ಮರಳಿರುವ ಶೊಯೆಬ್ ಅವರು ಮೊದಲ ದಿನದ ಅಂತ್ಯಕ್ಕೆ 124ರನ್ ಗಳಿಸಿದ್ದರು. ಈ ಇದೇ ವರ್ಷ ಏಕದಿನ ಹಾಗೂ ಟಿ20 ತಂಡಕ್ಕೆ ಮರಳಿದ ಶೊಯೆಬ್ ಅವರು ಉತ್ತಮ ಲಯದಲ್ಲಿದ್ದಾರೆ.[ದ್ರಾವಿಡ್ ಹೊಗಳಿದ್ದ ಕ್ರಿಕೆಟರ್ ನಿಂದ ಅದ್ಭುತ ದಾಖಲೆ]

ಕ್ರೀಡಾ ಸ್ಫೂರ್ತಿ: ಸಾನಿಯಾ ಮಿರ್ಜಾ ಅವರು ಸತತವಾಗಿ 8ಕ್ಕೂ ಅಧಿಕ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ನನ್ನಲ್ಲಿ ಕ್ರೀಡಾ ಸ್ಫೂರ್ತಿ ತುಂಬಿದ್ದಾರೆ. ನಾನು ತಂಡಕ್ಕೆ ಮರಳಿ ಉತ್ತಮ ಆಟ ಪ್ರದರ್ಶಿಸಲು ಸಾನಿಯಾ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಶೊಯೆಬ್ ಹೇಳಿದ್ದಾರೆ.

Shoaib Malik

ಆಲ್‌ರೌಂಡರ್ ಶೊಯೆಬ್ ಮಲ್ಲಿಕ್ ಅವರ ಶತಕ ಹಾಗೂ ಆರಂಭಿಕ ಆಟಗಾರ ಮುಹಮ್ಮದ್ ಹಫೀಜ್ (98) ಅರ್ಧಶತಕದ ಸಹಾಯದಿಂದ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ರನ್ ಕಲೆ ಹಾಕಿದೆ.

ಇತ್ತೀಚಿನ ವರದಿಗಳು ಬಂದಾಗ 128 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 428ರನ್ ಗಳಿಸಿದೆ. ಶೊಯೆಬ್ ಮಲಿಕ್ 188ರನ್ (21X4, 2X6), ಅಸದ್ ಶಫೀಕ್ 85ರನ್(8x4) ಗಳಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+