
ಆಟಗಾರರೊಂದಿಗೆ ಬೆರೆತಿದೆ ಯೋಗದ ನಂಟು
ಹೌದು.. ಯೋಗದ ಮಹಿಮೆ ಕ್ರೀಡೆಗೂ ಹೊರತಾಗಿಲ್ಲ. ಆಟ ಯಾವುದೇ ಇರ್ಲಿ, ಆಟಗಾರನು ಬಳಸಬಲ್ಲ ಆಧ್ಯಾತ್ಮಿಕ ಅಭ್ಯಾಸ ಈ ಯೋಗ. ಇನ್ನು ಕ್ರಿಕೆಟ್ ಕೂಡ ಇದ್ರ ಜೊತೆ ನಂಟು ಹೊಂದಿದೆ. ಭಾರತದ ಅನೇಕ ಕ್ರಿಕೆಟಿಗರು ಇದ್ರಿಂದ ಸಾಕಷ್ಟು ಅನುಕೂಲ ಪಡೆದಿದ್ದಾರೆ.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಆಟಗಾರನೊಬ್ಬ ತನ್ನ ನೈಜ ಆಟವನ್ನ ಸಾಕಷ್ಟು ಕಾಲ ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನವನ್ನು ನಡೆಸುತ್ತಾನೆ. ಆದ್ರೆ ಆತ ನೈಜತೆಯನ್ನ ಹೆಚ್ಚು ಹೊತ್ತು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಗಾಯ-ನೋವುಗಳನ್ನೆಲ್ಲಾ ಅನುಭವಿಸಬೇಕಾಗುತ್ತೆ. ಮಾನಸಿಕ ಒತ್ತಡಕ್ಕೂ ಹೊರತಾಗಿಲ್ಲ. ಹೀಗಾಗಿ ಪುರಾತನ ಆಧ್ಯಾತ್ಮಿಕ ಅಭ್ಯಾಸವಾದ ಯೋಗ ಯಾವುದೇ ಕ್ರೀಡಾಪಟುಗಳಿಗೆ ಸಾಕಷ್ಟು ಸಹಕಾರಿಯಾಗುತ್ತದೆ.

ಆಟಗಾರರ ಭಾವನಾತ್ಮಕ ಸಮತೋಲನಕ್ಕೆ ಉಪಕಾರಿ
ಜಿಮ್ ಮತ್ತಿತರ ವರ್ಕೌಟ್‌ಗಳು ಕೆಲವು ಅಂಗಾಗಗಳಿಗಷ್ಟೇ ವ್ಯಾಯಾಮವನ್ನ ನೀಡುತ್ತದೆ. ಆದ್ರೆ ಯೋಗ ಇಡೀ ದೇಹದ ಮೇಲೆ ಪರಿಣಾಮ ಬೀರುವುದಲ್ಲದೆ ಮಾನಸಿಕ ಸಮತೋಲನಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ ಪ್ರಾಣಾಯಾಮ, ಶ್ವಾಸಕೋಶ ಹಾಗೂ ಹೃದಯದ ನಡುವಿನ ಬಂಧಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಇದು ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲಕರ. ಯಾಕಂದ್ರೆ, ಯಾವುದೇ ಕ್ರೀಡಾಪಟು ಆಗಲಿ ಆತ ಹೆಚ್ಚು ಹೊತ್ತು ಮೈದಾನದಲ್ಲಿ ಕಳೆಯುತ್ತಾನೆ. ಸಾಕಷ್ಟು ಶಕ್ತಿಯನ್ನ ವ್ಯಯಿಸಿ ಅಭ್ಯಾಸದಲ್ಲಿ ತೊಡಗುವುದಲ್ಲದೆ ಆಟದಲ್ಲಿ ಭಾಗವಹಿಸುತ್ತಾನೆ. ಹೀಗಿರುವಾಗ ಈತನ ಶ್ವಾಸಕೋಶ ಹಾಗೂ ಹೃದಯದ ಸಮತೋಲನ ಸಾಧನೆ ಪ್ರಮುಖವಾಗುತ್ತದೆ.
8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು 410.html

ಅಥ್ಲಿಟ್‌ನ ತೂಕ ಕಾಯ್ದುಕೊಳ್ಳಲು ಸಹಕಾರಿ
ಯೋಗ ಇಷ್ಟಲ್ಲದೆ ಆಟಗಾರನ ಸೂಕ್ಷ್ಮತೆ ಹಾಗೂ ಚುರುಕುತನಕ್ಕೆ ತನ್ನದೇ ಆದ ವಿವಿಧ ಆಸನಗಳನ್ನ ಹೊಂದಿದೆ. ಅಷ್ಟೇ ಅಲ್ಲದೆ ಸೂರ್ಯ ನಮಸ್ಕಾರದಂತಹ ಆಸನಗಳು ಆಟಗಾರನ ದೇಹದ ತೂಕ ಕಾಯ್ದುಕೊಳ್ಳಲು ಸಹಕಾರಿಯಾಗುತ್ತೆ. ಇನ್ನು ಕ್ರಿಕೆಟ್‌ನಲ್ಲಿ ಆಟಗಾರರಿಗೆ ಬೆನ್ನುನೋವು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಂಡುಬರೋದು ಸಹಜ. ಹೀಗಿರುವಾಗ ಹೆಗಲುಗಳಿಗೆ ಹೆಚ್ಚಿನ ಗಮನ ಕೊಡಬೇಕಾಗುತ್ತೆ. ಅದಕ್ಕೆ ತಕ್ಕಂತೆ ಆಸನಗಳನ್ನ ಅಭ್ಯಾಸ ಮಾಡಿದ್ದಲ್ಲಿ ಆತನಿಗೆ ಹೆಚ್ಚು ಅನುಕೂಲವಾಗುತ್ತದೆ.
ಮೊದಲ 15 ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಪಂದ್ಯ ಗೆಲ್ಲಿಸಿದ ನಾಯಕರ ಪಟ್ಟಿ; ಭಾರತದ ಪರ ಓರ್ವ ನಾಯಕ

ಸಚಿನ್, ದ್ರಾವಿಡ್, ಸೆಹ್ವಾಗ್ ಯೋಗ ಅಭ್ಯಾಸದಲ್ಲಿ ತೊಡಗಿದ್ರು
ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸೇರಿದಂತೆ ಅನೇಕ ಆಟಗಾರರು ಯೋಗದ ಅಭ್ಯಾಸದಲ್ಲಿ ತೊಡಗಿದ್ರು. ಅದ್ರಲ್ಲೂ ಅನೇಕ ಗಾಯ ಹಾಗೂ ನೋವಿಗೆ ತುತ್ತಾಗಿದ್ದ ಸಚಿನ್, ತನ್ನ ವೃತ್ತಿ ಜೀವನದಲ್ಲಿ ಔಷಧಿಯಿಂದ ವಾಸಿಯಾಗದೇ ಇದ್ದದ್ದನ್ನ ಈ ಯೋಗದ ಮೂಲಕ ಪರಿಹಾರ ಮಾಡಿಕೊಂಡ್ರು ಎಂದು ಅವರ ಆಪ್ತ ವಲಯ ಹೇಳುತ್ತದೆ.
ಹೀಗಾಗಿ ಯೋಗ ಎನ್ನುವುದು ಕ್ರೀಡೆಯ ಜೊತೆಗೆ ತನ್ನ ಅವಿನಾಭಾವ ಸಂಬಂಧ ಹೊಂದಿದೆ. ಯಾವುದೇ ಆಟಗಾರನ ಕ್ರೀಡಾ ಜೀವನದಲ್ಲಿ ಹಾಗೂ ಆತನ ನಿವೃತ್ತಿ ನಂತರದ ಜೀವನಕ್ಕೂ ಹೆಚ್ಚು ಸಹಕಾರಿಯಾಗಿದೆ.


Click it and Unblock the Notifications












