44ರ ಹರೆಯದ ಆಸೀಸ್ ಸ್ಪಿನ್ನರ್ ಐಪಿಎಲ್ ದಾಖಲೆ
ಚೆನ್ನೈ, ಏ.29: ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ಬ್ಯಾಟ್ಸ್ ಮನ್ ಗಳಿಂದ ದಾಖಲೆಗಳ ಧೂಳಿಪಟವಾಗುತ್ತದೆ ಎಂದೇ ನಂಬಲಾಗಿತ್ತು. ಅದರೆ, 44ರ ಹರೆಯ ಚೈನಾಮನ್ ಬೌಲರ್ ಬ್ರಾಡ್ ಹಾಗ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ಸ್ ರೈಡರ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾದ 44 ವರ್ಷ 81 ದಿನಗಳ ವಯಸ್ಸಿನ ಬ್ರಾಡ್ ಹಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ವೆಸ್ಟ್ ಇಂಡೀಸ್ ನ ಬೌಲರ್ ಸುನಿಲ್ ನಾರಾಯಣ್ ಬದಲಿಗೆ ಆಸೀಸ್ ನ ಬ್ರಾಡ್ ಹಾಗ್ ಅವರನ್ನು ಆಡುವ XI ತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಕಳೆದ ವಾರ ಸುನಿಲ್ ಬೌಲಿಂಗ್ ಶೈಲಿ ಬಗ್ಗೆ ಮತ್ತೊಮ್ಮೆ ಅನುಮಾನಗಳು ಕಂಡ ಬಂದ ಹಿನ್ನೆಲೆಯಲ್ಲಿ ಅವರನ್ನು ಆಡಿಸಲಾಗಿಲ್ಲ.

ವಯಸ್ಸಾದರೂ ದಣಿಯದ ಪ್ರತಿಭೆ ಬ್ರಾಡ್
ವಯಸ್ಸಾದರೂ ದಣಿಯದ ಪ್ರತಿಭೆ ಬ್ರಾಡ್ ಹಾಗ್ ಅವರು 4 ಓವರ್ ಎಸೆದು 18ರನ್ನಿತ್ತು 1 ವಿಕೆಟ್ ಪಡೆದುಕೊಂಡರು. ರನ್ ಚೇಸಿಂಗ್ ನಲ್ಲಿ ಕೊನೆಯದಾಗಿ ಕಣಕ್ಕಿಳಿದು 2ರನ್ ಗಳಿಸಿ ರೋಚಕ ಸೋಲಿನೊಂದಿಗೆ ಪೆವಿಲಿಯನ್ ಸೇರಿದರು.
ಚೆನ್ನೈ ತಂಡಕ್ಕೆ ಜಯ ಸುಲಭವಾಗಿರಲಿಲ್ಲ
ಚೆನ್ನೈ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 134ರನ್ ಗಳಿಸಿತ್ತು. ಇದನ್ನು ಸುಲಭವಾಗಿ ಚೇಸ್ ಮಾಡುತ್ತಿದ್ದ ಕೋಲ್ಕತ್ತಾ ಉತ್ತಮ ಜೊತೆಯಾಟದ ಕೊರತೆಯಿಂದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 132ರನ್ ಗಳಿಸಿ ಸೊಲೊಪ್ಪಿಕೊಂಡಿತು.
ಬ್ರಾಡ್ ಹಾಗ್ ಐಪಿಎಲ್ ನ ಅಫ್ರಿದಿ
ಐಪಿಎಲ್ 8 ರ ಹರಾಜಿನಲ್ಲಿ ಬ್ರಾಡ್ ಹಾಗ್ ರನ್ನು 50 ಲಕ್ಷ ರು ನೀಡಿ ಕೆಕೆಆರ್ ಖರೀದಿಸಿತ್ತು.ಇದಕ್ಕೂ ಮುನ್ನ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಹಾಗ್ ಆಡಿದ್ದರು.
ಪ್ರತಿಭೆಗೂ ವಯಸ್ಸಿಗೂ ಸಂಬಂಧವಿಲ್ಲ
ಈ ಬಾರಿ ಐಪಿಎಲ್ ನಲ್ಲಿ ಕೆಕೆಆರ್ ನ ಬ್ರಾಡ್ ಹಾಗ್ ಅತ್ಯಂತ ಹಿರಿಯ ಆಟಗಾರ ಎನಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸರ್ಫಾಜ್ ಖಾನ್ (17 ವರ್ಷ) ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಹಾಗ್ ಬಗ್ಗೆ ಆಡಂ ಗಿಲ್ ಕ್ರಿಸ್ಟ್ ಟ್ವೀಟ್
ಬ್ರಾಡ್ ಹಾಗ್ ಬಗ್ಗೆ ಮಾಜಿ ಕ್ರಿಕೆಟರ್ ಆಡಂ ಗಿಲ್ ಕ್ರಿಸ್ಟ್ ಟ್ವೀಟ್ ಮಾಡಿದ್ದು ಹೀಗೆ...
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications