Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಮ್ಯಾಚ್ ಗೈಡ್: ಧೋನಿ vs ಕೊಹ್ಲಿ ಕದನ

ಬೆಂಗಳೂರು, ಏ.22: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಹಾಗೂ ಉಪನಾಯಕ ವಿರಾಟ್ ಕೊಹ್ಲಿ ನಡುವಿನ ಪ್ರತಿಷ್ಠೆಯ ಕದನಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆರ್ ಸಿಬಿಗೆ ಈಗ ವಿಶ್ವಕಪ್ ಹೀರೋ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಬಲ ಸಿಕ್ಕಿದೆ. ಎರಡು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ತಂಡ ಹೇಗೆ ಎದುರಿಸುತ್ತದೆ ಕಾದು ನೋಡಬೇಕಿದೆ.

ಸ್ಟಾರ್ಕ್ ಸೇರ್ಪಡೆಯಿಂದ ಆರ್ ಸಿಬಿ ಬೌಲಿಂಗ್ ಪಡೆ ಬಲ ಹೆಚ್ಚಿರುವುದರಿಂದ ಬಿರುಸಿನ ಕಾದಾಟದ ನಿರೀಕ್ಷೆ ಇಟ್ಟುಕೊಳ್ಳಬಹುದು. ಆರ್ ಸಿಬಿ ಬ್ಯಾಟಿಂಗ್ ಬಲದ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಕ್ರಿಸ್ ಗೇಲ್, ಎಬಿ ಡಿ ವಿಲೆಯರ್ಸ್, ವಿರಾಟ್ ಕೊಹ್ಲಿ ಅಲ್ಲದೆ, ಆಲ್ ರೌಂಡರ್ ವಿಸೆ ಕೂಡಾ ನೆರವಿಗೆ ಬರುತ್ತಾರೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಒಟ್ಟಾರೆ ಕ್ರಿಸ್ ಗೇಲ್ vs ಆಶೀಶ್ ನೆಹ್ರಾ, ಬ್ರೆಂಡನ್ ಮೆಕ್ಲಮ್, ಡ್ವಾಯ್ನೆ ಸ್ಮಿತ್ vs ಸ್ಟಾರ್ಕ್ ಅಂಡ್ ಬೌಲರ್ಸ್ ಆಟವಲ್ಲದೆ, ಬೆಸ್ಟ್ ಫಿನಿಷರ್ ಗಳೆನಿಸಿರುವ ಎಂಎಸ್ ಧೋನಿ ಹಾಗೂ ಎಬಿ ಡಿವಿಲೆಯರ್ಸ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. (ಐಪಿಎಲ್ ಗ್ಯಾಲರಿ)

Virat Kohli

ಮೊದಲಿಗೆ ಹವಾಮಾನ ವರದಿ
* ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಸಾಧ್ಯತೆ ಕಡಿಮೆ. 35 ಡಿಗ್ರಿ ಸೆಲ್ಸಿಯಸ್ ತಾಪಮಾನ, ಆದ್ರತೆ 54%, ಗಾಳಿ 11 ಕಿ.ಮೀ/ಗಂಟೆ ಇರಲಿದೆ.

ಐಪಿಎಲ್ 2015 ಮ್ಯಾಚ್ 20 ಗೈಡ್ ಇದೆ:
ಇಂದಿನ ಮೊದಲ ಪಂದ್ಯ 4 PM - ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಿಶಾಖಪಟ್ಟಣಂ

ಯಾವಾಗ, ಎಲ್ಲಿ ಪಂದ್ಯ?:
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್
* ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
* ಏ.22, ಬುಧವಾರ, 8PM IST

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]

ಪ್ರಮುಖ ಆಟಗಾರರು:

* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಚೆನ್ನೈ ಸೂಪರ್ ಕಿಂಗ್ಸ್: ಬ್ರೆಂಡನ್ ಮೆಕ್ಲಮ್, ಡ್ವಾಯ್ನೆ ಸ್ಮಿತ್, ಸುರೇಶ್ ರೈನಾ, ಎಂಎಸ್ ಧೋನಿ, ಡ್ವಾಯ್ನೆ ಬ್ರಾವೋ, ಆಶೀಶ್ ನೆಹ್ರಾ

MS Dhoni

ಮುಖಾಮುಖಿ
ಸಿಎಸ್ ಕೆ -9; ಆರ್ ಸಿಬಿ-7

ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ

* ಸಿಎಸ್ ಕೆ -2 (3 ಗೆಲುವು, 1 ಸೋಲು)
* ಆರ್ ಸಿಬಿ- 8(1 ಗೆಲುವು, 2 ಸೋಲು)

ಅರ್ಥ್ ಡೇ ಗಾಗಿ ಆರ್ ಸಿಬಿ ನೀಡಿರುವ ಸಲಹೆ:



ಚೆನ್ನೈ ತಂಡದಿಂದ ಫುಲ್ ಇನ್ಫೋಗ್ರಾಫಿಕ್ ಮಾಹಿತಿ:

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

ಸಿಎಸ್ ಕೆ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ಆಶೀಶ್ ನೆಹ್ರಾ, ಬಾಬಾ ಅಪರಾಜಿತ್, ಬ್ರೆಂಡನ್ ಮೆಕ್ಲಮ್, ಡ್ವಾಯ್ನೆ ಬ್ರಾವೋ, ಡ್ವಾಯ್ನೆ ಸ್ಮಿತ್, ಎಫ್ ಡು ಫ್ಲೆಸಿಸ್, ಈಶ್ವರ್ ಪಾಂಡೆ, ಮ್ಯಾಟ್ ಹೆನ್ರಿ, ಮಿಥುನ್ ಮನ್ಹಾಸ್, ಮೋಹಿತ್ ಶರ್ಮ, ಪವನ್ ನೇಗಿ, ಆರ್ ಅಶ್ವಿನ್, ಆರ್ ಜಡೇಜ, ಸ್ಯಾಮುಯಲ್ ಬದ್ರಿ, ಸುರೇಶ್ ರೈನಾ, ರೋನಿತ್ ಮೋರೆ, ಮೈಕಲ್ ಹಸ್ಸಿ, ರಾಹುಲ್ ಶರ್ಮ, ಕೈಲಿ ಅಬಾಟ್, ಅಂಕುಶ್ ಬೈನ್ಸ್, ಇರ್ಫಾನ್ ಪಠಾಣ್, ಪ್ರತ್ಯುಷ್ ಸಿಂಗ್, ಆಂಡ್ರೂ ಟೈ, ಏಕಲವ್ಯ ದ್ವಿವೇದಿ.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+