ಐಪಿಎಲ್ 2015: ಈ ಹೊತ್ತಿನ ಶ್ರೇಷ್ಠ ತಂಡ, ಆಟಗಾರ ಪ್ರಕಟ
ಬೆಂಗಳೂರು, ಏ.20: ಇಂಡಿಯನ್ ಪ್ರಿಮಿಯರ್ ಲೀಗ್ 8ರಲ್ಲಿ ಯಾವ ಆಟಗಾರರು ಮಿಂಚುತ್ತಿದ್ದಾರೆ, ಯಾರು ತಮ್ಮ ಮೌಲ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ, ಯಾವ ತಂಡ ಮುಂದಿನ ಹಂತಕ್ಕೇರುವ ಆತುರದಲ್ಲಿದೆ, ಯಾವ ತಂಡ ಎಣ್ಣೆ ಹೊಡೆದಂತೆ ಮಲಗಿಬಿಟ್ಟಿದೆ ಎಂಬೆಲ್ಲಾ ಲೆಕ್ಕಾಚಾರ ಹಾಕಲಾಗಿದೆ. 16 ಪಂದ್ಯಗಳ ನಂತರ ಈ ತನಕದ ಶ್ರೇಷ್ಠ ತಂಡ, ಆಟಗಾರರ ಪಟ್ಟಿಯನ್ನು ಪ್ರಸಾರಕರು ಪ್ರಕಟಿಸಿದ್ದಾರೆ.
ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೂ ಮುನ್ನ ಈ ಪಟ್ಟಿ ಪ್ರಕಟಿಸಲಾಗಿದೆ. ಸೋಮವಾರ ರಾತ್ರಿ ಡೆಲ್ಲಿ ವಿರುದ್ಧ ಕೆಕೆಆರ್ ಭರ್ಜರಿ ಜಯ ದಾಖಲಿಸಿದೆ. []
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಇಲ್ಲಿ ತನಕ ಆಟಗಾರರು ತೋರಿರುವ ಪ್ರದರ್ಶನವನ್ನು ಪರಿಗಣಿಸಿ ಐಪಿಎಲ್ ಟೂರ್ನಿಯ ಅಧಿಕೃತ ಪ್ರಸಾರಕರಾದ ಸೋನಿ ಮ್ಯಾಕ್ಸ್ ಶ್ರೇಷ್ಠ ಪ್ರದರ್ಶಕರ ಪಟ್ಟಿ ಪ್ರಕಟಿಸಿದೆ.

ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ನಿರೀಕ್ಷೆಯಂತೆ ಐಪಿಎಲ್ 2015 ಟೂರ್ನಿಯ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ. ಮುಂದಿನ ಹಂತಕ್ಕೇರುವ ಅರ್ಹತೆ ಪಡೆಯುವ ಮೊದಲ ತಂಡ ಎನಿಸಿದರೂ ಅಚ್ಚರಿ ಪಡಬೇಕಾಗಿಲ್ಲ.
ಐಪಿಎಲ್ 8ರ 16ನೇ ಪಂದ್ಯದ ನಂತರದ ಲೆಕ್ಕಾಚಾರದಂತೆ ಸೋನಿ ಮ್ಯಾಕ್ಸ್ ಆಯ್ಕೆಯ ಪಟ್ಟಿ ಹೀಗಿದೆ: (ಒನ್ ಇಂಡಿಯಾ ಸುದ್ದಿ)

ಶ್ರೇಷ್ಠ ಬ್ಯಾಟ್ಸ್ ಮನ್
ಅಜಿಂಕ್ಯ ರಹಾನೆ (ರಾಜಸ್ಥಾನ ರಾಯಲ್ಸ್) -ಆರೇಂಜ್ ಕ್ಯಾಪ್ ಹೊಂದಿದ್ದಾರೆ -5 ಇನ್ನಿಂಗ್ಸ್ ನಿಂದ 231 ರನ್ ಗಳಿಸಿದ್ದಾರೆ.

ಶ್ರೇಷ್ಠ ತಂಡ
ರಾಜಸ್ಥಾನ ರಾಯಲ್ಸ್ (5 ಗೆಲುವು) ಅಂಕಪಟ್ಟಿಯಲ್ಲಿ ಅಗ್ರಸ್ಥಾನ, ಸ್ಟೀವ್ ಸ್ಮಿತ್, ವಾಟ್ಸನ್ ನಾಯಕತ್ವ, ರಾಹುಲ್ ದ್ರಾವಿಡ್ ಕೋಚ್.

ಶ್ರೇಷ್ಠ ಪಾದಾರ್ಪಣೆ
ದೀಪಕ್ ಹೂಡಾ (ರಾಜಸ್ಥಾನ್ ರಾಯಲ್ಸ್)

ಸಿಕ್ಸರ್ ಕಿಂಗ್
ಬ್ರೆಂಡನ್ ಮೆಕ್ಲಮ್ (ಚೆನ್ನೈ ಸೂಪರ್ ಕಿಂಗ್ಸ್) ಕಿರಾನ್ ಪೊಲ್ಲಾರ್ಡ್ (ಮುಂಬೈ ಇಂಡಿಯನ್ಸ್) -ತಲಾ 11 ಸಿಕ್ಸರ್

ಶ್ರೇಷ್ಠ ವಾಪಸ್ಸಾತಿ
ಡೆಲ್ಲಿ ಡೇರ್ ಡೆವಿಲ್ಸ್ (2 ಸತತ ಜಯ, 11 ಸತತ ಸೋಲಿನ ನಂತರ ಗೆಲುವು)

ಶ್ರೇಷ್ಠ ವಿದೇಶಿ ಆಟಗಾರ
ಇಮ್ರಾನ್ ತಾಹೀರ್ (ಡೆಲ್ಲಿ ಡೇರ್ ಡೆವಿಲ್ಸ್) 9 ವಿಕೆಟ್ಸ್- ಪರ್ಪಲ್ ಕ್ಯಾಪ್ ಹೊಂದಿದ್ದಾರೆ.

ಶ್ರೇಷ್ಠ ಜೋಡಿ
ಮೆಕ್ಲಮ್ ಹಾಗೂ ಡ್ವಾಯ್ನೆ ಸ್ಮಿತ್ (ಚೆನ್ನೈ ಸೂಪರ್ ಕಿಂಗ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications