ಚಿತ್ರಗಳಲ್ಲಿ: ಸೂಪರ್ ಮ್ಯಾಚ್, ಪಂಜಾಬ್ ಇಸ್ ಕಿಂಗ್
ಅಹಮದಾಬಾದ್, ಏ.22: ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನ ಮೊಟೇರಾ ಮೈದಾನ ಸಕತ್ ಥ್ರಿಲ್ಲಿಂಗ್ ಮ್ಯಾಚಿಗೆ ಸಾಕ್ಷಿಯಾಯಿತು. ಮಂಗಳವಾರ ಕಿಂಗ್ಸ್ XI ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಅನೇಕ ರೋಚಕ ಕ್ಷಣಗಳಿತ್ತು. ಅಭಿಮಾನಿಗಳಿಗೆ ರಸದೌತಣ ನೀಡಿದ ಈ ಪಂದ್ಯದ ಚಿತ್ರಗಳು ನಿಮಗಾಗಿ ಇಲ್ಲಿವೆ
ಐಪಿಎಲ್ 2015ರಲ್ಲಿ ಐದು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದ್ದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೊದಲ ಬಾರಿಗೆ ಸೋಲಿನ ರುಚಿಯನ್ನು ಪಂಜಾಬಿಗಳು ತೋರಿಸಿದರು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಆದರೆ, ಪಂಜಾಬಿನ ಕಿಂಗ್ ಗಳಿಗೆ ಗೆಲುವು ಸುಲಭವಾಗಿ ದಕ್ಕಲಿಲ್ಲ. ಪಂದ್ಯ ಟೈ ಆಗಿ ಸೂಪರ್ ಓವರ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಬೇಕಾಯಿತು.[ಪಂದ್ಯದ ಸ್ಕೋರ್ ಕಾರ್ಡ್]
20 ಓವರ್ ಗಳ ನಂತರ ಉಭಯ ತಂಡಗಳು 191/6 ಸ್ಕೋರ್ ಮಾಡಿ ಪಂದ್ಯ ಟೈ ಮಾಡಿಕೊಂಡ ಮೇಲೆ ಸೂಪರ್ ಓವರ್ ನಲ್ಲಿ ರಾಜಸ್ಥಾನ ರಾಯಲ್ಸ್ ಎರಡು ವಿಕೆಟ್ ಕಳೆದು ಕೊಂಡು ಪಂದ್ಯ ಬಿಟ್ಟುಕೊಟ್ಟಿತು.

ಮಾರ್ಷ್ ಮ್ಯಾನ್ ಆಫ್ ದಿ ಮ್ಯಾಚ್
40 ಎಸೆತಗಳಲ್ಲಿ 65 ರನ್ (5X4, 3X6) ಬಾರಿಸಿದ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸೂಪರ್ ಓವರ್ ನಲ್ಲಿ ಎರಡು ಬೌಂಡರಿ ಬಾರಿಸಿ ಕೊನೆ ಎಸೆತದಲ್ಲಿ ರನೌಟ್ ಆದರು.

ರಾಜಸ್ಥಾನ್ ರಾಯಲ್ಸ್ ಗೆ ಸೂಪರ್ ಓವರ್ಸ್ ನಂಟು
ಮೂರು ಬಾರಿ ರಾಜಸ್ಥಾನ್ ರಾಯಲ್ಸ್ ಸೂಪರ್ ಓವರ್ ಎದುರಿಸಿದ್ದು, ಎರಡು ಬಾರಿ ಗೆಲುವು ಸಾಧಿಸಿದೆ. ಐಪಿಎಲ್ 2015ರಲ್ಲಿ ಮಾತ್ರ ಸೋಲು ಕಂಡಿದೆ.

ಇನ್ನಿಂಗ್ಸ್ ಕೊನೆ ಓವರ್ ಸೂಪರ್ ಆಗಿತ್ತು
ಜೇಮ್ಸ್ ಫಾಲ್ಕ್ನರ್ ಎಸೆದ ಕೊನೆ ಓವರ್ ನಲ್ಲಿ ಕಿಂಗ್ಸ್ XI ಪಂಜಾಬಿಗೆ 14 ರನ್ ಟಾರ್ಗೆಟ್ ನೀಡಲಾಗಿತ್ತು. ರನ್ ಗಳಿಕೆ ಹೀಗಿತ್ತು: 2, 2, 1, 2, 2, 4

ಸೂಪರ್ ಓವರ್ ನಲ್ಲಿ ಪಂಜಾಬ್ ಮೊದಲು ಬ್ಯಾಟಿಂಗ್
ಡೇವಿಡ್ ಮಿಲ್ಲರ್ ಹಾಗೂ ಶಾನ್ ಮಾರ್ಷ್ ಜೋಡಿ 15/2 ರನ್ ಸ್ಕೋರ್ ಮಾಡಿತು.

ಸೂಪರ್ ಓವರ್ ನಲ್ಲಿ ರಾಯಲ್ಸ್ ಗೆ ಸೋಲು
ಇದಕ್ಕೆ ಉತ್ತರವಾಗಿ ರಾಜಸ್ಥಾನ ರಾಯಲ್ಸ್ 0.3 ಓವರ್ಸ್ ನಲ್ಲಿ 6/2 ಸ್ಕೋರ್ ಮಾಡಿ ಪಂದ್ಯ ಸೋತಿತು.

ಸೂಪರ್ ಓವರ್ ಟೈ ಆಗಿದ್ದರೆ ಏನಾಗುತ್ತಿತ್ತು
ಸೂಪರ್ ಓವರ್ ಕೂಡಾ ಟೈ ಆಗಿದ್ದರೆ ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತಿತ್ತು. ಪಂದ್ಯದಲ್ಲಿ ರಾಜಸ್ಥಾನ್ 24 ಬೌಂಡರಿ ಹೊಡೆದಿದ್ದರೆ, ಪಂಜಾಬ್ 22 ಬೌಂಡರಿ ಹೊಡೆದು ಹಿನ್ನಡೆ ಅನುಭವಿಸಿತ್ತು.

ಸೆಹ್ವಾಗ್ ನಾಯಕತ್ವದಲ್ಲಿ ಆಡಿದ ಪಂಜಾಬ್
ಕಿಂಗ್ಸ್ XI ಪಂಜಾಬ್ ತಂಡದ ನಾಯಕ ಜಾರ್ಜ್ ಬೈಲಿ ಅವರು ಭುಜದ ನೋವಿನಿಂದ ಪಂದ್ಯದಿಂದ ಹೊರಗುಳಿಯಬೇಕಾಯಿತು. ವೀರೇಂದರ್ ಸೆಹ್ವಾಗ್ ನಾಯಕತ್ವದಲ್ಲಿ ಪಂಜಾಬ್ ಸೂಪರ್ ಆಗಿ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications