ಫೀಲ್ಡಿಂಗ್ ಸ್ಟಾರ್ ಜಾಂಟಿ ಮಗಳಿಗೂ ಭಾರತಕ್ಕೂ ನಂಟು!
ಮುಂಬೈ, ಏ.24: ವರ್ಣ ಬೇಧ ನೀತಿಯಿಂದ ಕ್ರಿಕೆಟ್ ಲೋಕದಿಂದ ದೂರವುಳಿದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 90ರ ದಶಕದಲ್ಲಿ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ಸರಣಿ ಆಡುವಂತೆ ಆಹ್ವಾನಿಸಿತ್ತು ನೆನಪಿರಬಹುದು. ಅಂದಿನಿಂದ ಇಂದಿನ ತನಕ ಫೀಲ್ಡಿಂಗ್ ಸ್ಟಾರ್ ಜಾಂಟಿ ರೋಡ್ಸ್ ಅಚ್ಚರಿ ಮೂಡಿಸುತ್ತಲೇ ಇದ್ದಾರೆ. ಈಗ ತಮ್ಮ ನವಜಾತ ಶಿಶುವಿಗೆ ಭಾರತದ ಹೆಸರಿಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಜಾಂಟಿ ರೋಡ್ಸ್ ಅವರು ತಮ್ಮ ಮಗಳಿಗೆ 'India' ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ 8 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ಅವರು ಈ ಶುಭ ಸಮಾಚಾರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಏ.23ರ ರಾತ್ರಿ ನಾನು ತಂದೆಯಾದೆ. ಬೇಬಿ ರೋಡ್ಸ್ ಗೆ ಶುಭವಾಗಲಿ. India Jeane Rhodes(ಶಿಶುವಿನ ಪೂರ್ಣ ಹೆಸರು) 3.29 PM ಗೆ ಜನಿಸಿದ್ದು, 3.7 ಕೆಜಿ ಇದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಗುರುವಾರ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನವದೆಹಲಿಯಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯವಾಡಿತ್ತು. ಡೆಲ್ಲಿ ತಂಡ ಮುಂಬೈಯನ್ನು 37ರನ್ ಗಳಿಂದ ಸೋಲಿಸಿತ್ತು.[]
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮುಂಬೈನ ಸಂತಾ ಕ್ರೂಜ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಜಾಂಟಿ ರೋಡ್ಸ್ ಅವರ ಪತ್ನಿ ಮೆಲಾನಿ ಜೀನೀ ಅವರು ಹೆಣ್ಣು ಶಿಶುವಿಗೆ ಜನ್ಮ ನೀಡಿದರು. ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು ಡಾ. ಭೂಪೇಂದ್ರ ಆವಸ್ತಿ, ಸೂರ್ಯ ಮದರ್ ಅಂಡ್ ಚೈಲ್ಡ್ ಕೇರ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications