ಮಿಚೆಲ್ ಸ್ಟಾರ್ಕ್ ರಿಂದ ಯಾರ್ಕರ್ ಕಲಿತೆ : ಕನ್ನಡಿಗ ಅರವಿಂದ್
ಬೆಂಗಳೂರು, ಮೇ.8: ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ನಿಜಕ್ಕೂ ವಿಶ್ವ ಶ್ರೇಷ್ಠ ಬೌಲರ್ ಅವರಿಂದ ನಾನು ಯಾರ್ಕ್ ಮಾಡುವುದನ್ನು ಕಲಿತೆ. ಗಾಯಗೊಂಡು ಕ್ರಿಕೆಟ್ ನಿಂದ ದೂರಾಗಿದ್ದ ನನಗೆ ಆರ್ ಸಿಬಿಯಿಂದ ಮತ್ತೆ ಕರೆ ಬಂದಿದ್ದು ನನ್ನ ಅದೃಷ್ಟ ಎಂದು ಕನ್ನಡಿಗ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ ಭರ್ಜರಿ ಗೆಲುವು ಸಾಧಿಸಲು ಕ್ರಿಸ್ ಗೇಲ್ ಪ್ರತಾಪ ಕಾರಣವಾದಂತೆ ಸ್ಟಾರ್ಕ್ ಹಾಗೂ ಅರವಿಂದ್ ಬೌಲಿಂಗ್ ಕೂಡಾ ನೆರವಾಯಿತು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಪಂಜಾಬ್ ಚೇಸಿಂಗ್ ಗೂ ಮುನ್ನ ನಾಯಕ್ಲ ಕೊಹ್ಲಿ ತನ್ನ ಆಟಗಾರರಿಗೆ 'ಗೋ ಫಾರ್ ದಿ ಕಿಲ್' ಎಂದು ಹೇಳಿದ್ದು ಸಾರ್ಥಕವಾಗಿದೆ. ಆರ್ ಸಿಬಿ ಉತ್ತಮ ರನ್ ರೇಟ್ ಗಳಿಸಿದೆ.[ಗಂಗ್ನಮ್ ಓಲ್ಡ್ , ಗೇಲ್ ಈಗ ರೊನಾಲ್ಡೊ ಸ್ಟೈಲ್]
ಆರ್ ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಗೇಲ್, ಅರವಿಂದ್ ಹಾಗೂ ಸ್ಟಾರ್ಕ್, ಗೇಲ್ 57 ಎಸೆತಗಳಲ್ಲಿ 117ರನ್ ಚೆಚ್ಚಿದರೆ, ಎಡಗೈ ಬೌಲರ್ ಎಸ್ ಅರವಿಂದ್ ಅವರು 4/27 ಗಳಿಸಿದರೆ, ಸ್ಟಾಕ್ ಅವರು 4/15 ಗಳಿಸಿ 138 ರನ್ ಗಳ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು.

ಟ್ರೈನರ್ ಗಳ ನೆರವಿನಿಂದ ವಾಪಸ್
2011ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಆಡುವ ಅವಕಾಶ ಪಡೆದರೂ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಎಸ್ ಅರವಿಂದ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಬರಲು ಟ್ರೈನರ್ ಗಳಾದ ಮುತ್ತುಕುಮಾರ್, ಶ್ರವಣ್ ಕಾರಣ. ಕಳೆದ ರಣಜಿ ಸೀಸನ್ ಪಂದ್ಯಗಳ ನಂತರ ಇದೇ ಮೊದಲ ಬಾರಿಗೆ ಐಪಿಎಲ್ 2015ರಲ್ಲಿ ಆಡಲು ಟ್ರೈನರ್ ಗಳು ನೆರವಾದರು ಎಂದಿದ್ದಾರೆ.
ಗೆಲುವಿನ ನಂತರ ಆರ್ ಸಿಬಿ ಸಂಭ್ರಮ
ಗೆಲುವಿನ ನಂತರ ಆರ್ ಸಿಬಿ ಸಂಭ್ರಮಾಚರಣೆ ಝಲಕ್.
ಸ್ಟಾರ್ಕ್ ಹಾಗೂ ಅರವಿಂದ್ ಉತ್ತಮ ಪ್ರದರ್ಶನ
ಸ್ಟಾರ್ಕ್ ಹಾಗೂ ಅರವಿಂದ್ ಉತ್ತಮ ಪ್ರದರ್ಶನ ನೀಡಿ ತಲಾ 4 ವಿಕೆಟ್ ಗಳಿಸಿ ಆರ್ ಸಿಬಿ ಬೌಲಿಂಗ್ ಶಕ್ತಿ ತೋರಿಸಿದರು.
ಗೇಲ್ ಹಾಗೂ ಅರವಿಂದ್ ಗೆ ಶುಭ ಹಾರೈಕೆ
ಗೇಲ್ ಹಾಗೂ ಅರವಿಂದ್ ಗೆ ಶುಭ ಹಾರೈಕೆ #playbold ಎಂದ ಅಭಿಮಾನಿಗಳು.
ಮೇ 6 ಅರವಿಂದ್ ಪಾಲಿಗೆ ಮರೆಯಲಾಗದ ದಿನ
ಮೇ 6 ಅರವಿಂದ್ ಪಾಲಿಗೆ ಮರೆಯಲಾಗದ ದಿನ ವರ್ಷಗಳ ನಂತರ ತಂಡಕ್ಕೆ ಮರಳಿದ್ದು, ಕಾಮೆಂಟೆಟರ್ಸ್ ಗಳು ಕೂಡಾ ಟೀಂ ಇಂಡಿಯಾಕ್ಕೆ ಆಡುವ ಅರ್ಹತೆಯುಳ್ಳ ಪ್ರತಿಭೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications