Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 8: ಮುಂಬೈ ವಿರುದ್ಧ ಕೆಕೆಆರ್ ಗೆ ಸುಲಭ ಜಯ

ಕೋಲ್ಕತ್ತಾ, ಏ.8 : ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಪ್ರೇಕ್ಷಕರಿಗೆ ರಸದೌತಣ ಸಿಕ್ಕಿದೆ. ಮುಂಬೈ ವಿರುದ್ಧ ಗೆಲ್ಲಲು 169 ರನ್ ಟಾರ್ಗೆಟ್ ಪಡೆದ ಕೆಕೆಆರ್ 7 ವಿಕೆಟ್ ಗಳ ಸುಲಭ ಜಯ ದಾಖಲಿಸಿತು.

ರೋಹಿತ್ ಶರ್ಮ, ಕೋರೆ ಆಂಡರ್ಸನ್ ಬಿರುಸಿನ ಬ್ಯಾಟಿಂಗ್ ನಂತರ ಕೆಕೆಆರ್ ನ ಗಂಭೀರ್, ಮನೀಶ್, ಯಾದವ್ ಉತ್ತಮ ಬ್ಯಾಟಿಂಗ್ ಪೈಸಾ ವಸೂಲ್ ಶೋ ನೀಡಿದರು. ಕೆಕೆಆರ್ ನ ಮಾರ್ನೆ ಮಾರ್ಕೆಲ್ ಬೌಲಿಂಗ್ ಸೂಪರ್ ಆಗಿತ್ತು.


ಪ್ರಶಸ್ತಿಗಳು:
* ಅತಿ ಹೆಚ್ಚು ಸಿಕ್ಸರ್: ಸೂರ್ಯಕಾಂತ್ ಯಾದವ್
* ರಂಜನೆ ನೀಡಿದ ಆಟಗಾರ: ಸೂರ್ಯಕಾಂತ್ ಯಾದವ್
* ಪಂದ್ಯಶ್ರೇಷ್ಠ: ಮಾರ್ನೆ ಮಾರ್ಕಲ್

ಕೋಲ್ಕತ್ತಾ ಚೇಸಿಂಗ್: 169ರನ್ ಚೇಸ್ ಮಾಡಲು ಬಂದ ಕೆಕೆಆರ್ ಆರಂಭದಲ್ಲೇ ರಾಬಿನ್ ಉತ್ತಪ್ಪ (9) ವಿಕೆಟ್ ಕಳೆದುಕೊಂಡು ಆತಂಕಕ್ಕೊಳಗಾಗಿತ್ತು. ಆದರೆ, ನಾಯಕ ಗೌತಮ್ ಗಂಭೀರ್ ಹಾಗೂ ಮನೀಶ್ ಪಾಂಡೆ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಅಡಿಪಾಯ ಹಾಕಿದರು. [ಐಪಿಎಲ್: ಟಾಪ್ 10 ಸ್ಕೋರರ್ ಗೇಲ್ ನಂ.1]

Rohit Sharma

ಪಾಂಡೆ 40 ರನ್ ( 24 ಎಸೆತ, 2x4,3x6) ಗಳಿಸಿ ಔಟಾದರೆ, ಗಂಭೀರ್ 57( 43ಎ , 7x4,1x6) ರನ್ ಗಳಿಸಿ ಬುರಾಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಸೂರ್ಯ ಕುಮಾರ್ ಯಾದವ್ 46 ರನ್ (20ಎ,1x4,5x6) ಗಳಿಸಿ ಗೆಲುವಿನ ರನ್ ಬಾರಿಸಿದರು.
ಪಂದ್ಯದ ವಿಡಿಯೋ ಹೈಲೇಟ್ಸ್:

ಮುಂಬೈ ಇನ್ನಿಂಗ್ಸ್ : ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆಡುವ ಅವಕಾಶ ಪಡೆದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮಾರ್ನೆ ಮಾರ್ಕೆಲ್ ದಾಳಿಗೆ ಸಿಲುಕಿದ ರೋಹಿತ್ ಪಡೆ ಸತತ ಮೂರು ವಿಕೆಟ್ ಕಳೆದುಕೊಂಡಿತು. [ಐಪಿಎಲ್: ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]

ಅರೋನ್ ಫಿಂಚ್ 5 , ಆದಿತ್ಯಾ ತಾರೆ 7 , ಅಂಬಟಿ ರಾಯುಡು 0 ರನ್ ಗಳಿಸಿ ವಿಫಲರಾದ ಮೇಲೆ ನಾಯಕ ರೋಹಿತ್ ಶರ್ಮ ಹಾಗೂ ಕೋರೆ ಆಂಡರ್ಸನ್ ಇನ್ನಿಂಗ್ಸ್ ಕಟ್ಟಿ ಬೆಳೆಸಿ ಕೊನೆ ತನಕ ಔಟಾಗದೆ ಉಳಿದು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರು. ತಂಡದ ಸ್ಕೋರ್ 12/3 ಆಗಿದ್ದಾಗಿಂದ 20 ಓವರ್ಸ್ ನಲ್ಲಿ 168/3 ಸ್ಕೋರ್ ತನಕ ಈ ಜೋಡಿ ಮುರಿಯದ ಆಟ ಪ್ರದರ್ಶಿಸಿತು. [IPL 2015: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]

Morkel

ರೋಹಿತ್ ಶರ್ಮ 98 ರನ್ (65ಎಸೆತ, 12x4, 4x6), ಕೋರೆ ಆಂಡರ್ಸನ್ 55ರನ್ (41 ಎ, 4x4,3x6) ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು. ಆದರೆ, ಇಬ್ಬರಿಗೂ ಎರೆಡೆರಡು ಬಾರಿ ಜೀವದಾನ ಸಿಕ್ಕಿತು. ಕೆಕೆಆರ್ ಪರ ಮಾರ್ನೆ ಮಾರ್ಕೆಲ್ 18ರನ್ನಿತ್ತು 2ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಸುನಿಲ್ ನಾರಾಯಣ್ ಹೊಸ ರೀತಿ ಬೌಲಿಂಗ್ ಶೈಲಿ ಏನೂ ಜಾದು ಮಾಡಲಿಲ್ಲ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+