Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ ಗೆದ್ದ ಕೊಹ್ಲಿ ಅಪ್ಪಿ ಮುದ್ದಾಡಿದ ಮಲ್ಯ

ನವದೆಹಲಿ,ಏ.27: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಗೆಲುವಿನ ಹಾದಿಗೆ ಮರಳಿದೆ.

ಗೆಲುವಿನ ಸಂಭ್ರಮದಲ್ಲಿ ತಂಡದ ಮಾಲೀಕ ವಿಜಯ್ ಮಲ್ಯ ಪಾಲ್ಗೊಂಡು ನಾಯಕ ವಿರಾಟ್ ಕೊಹ್ಲಿ ಅವರನ್ನು ತಬ್ಬಿ ಮುದ್ದಾಡಿದ್ದು ವಿಶೇಷವಾಗಿತ್ತು. ಸಿದ್ದ್ ಮಲ್ಯ ಬೇರೆ ಏನೇನೋ ಅನರ್ಥಕಾರಿ ಕೆಲಸ ಮಾಡಿ ಊರು ಬಿಟ್ಟು ಟ್ವಿಟ್ಟರ್ ನಲ್ಲೇ ತಂಡಕ್ಕೆ ಶುಭ ಹಾರೈಸುವ ಕೆಲಸಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮಲ್ಯರಿಗೆ ಕೊಹ್ಲಿ ಕಂಡು ವಾತ್ಸಲ್ಯ ಉಕ್ಕಿ ಹರಿದಿದೆ. []

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಬೌಲಿಂಗ್, ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಮೂರರಲ್ಲೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸರಿಸಾಟಿಯಾಗಲಿಲ್ಲ. 96 ರನ್ ಚೇಸ್ ಮಾಡಿದ ಆರ್ ಸಿಬಿ ಕ್ರಿಸ್ ಗೇಲ್ ಬಿರುಗಾಳಿಯುತ 62 ನಾಟೌಟ್, ವಿರಾಟ್ ಕೊಹ್ಲಿ ಜವಾಬ್ದಾರಿಯುತ 35 ನಾಟೌಟ್ ರನ್ ನೆರವಿನಿಂದ 10 ವಿಕೆಟ್ ಜಯ ದಾಖಲಿಸಿತು.

6 ಪಂದ್ಯಗಳಿಂದ 3 ಗೆಲುವು ಸಾಧಿಸಿ ಈ ಜಯದ ಮೂಲಕ 6 ಅಂಕ ಗಳಿಸಿದ ಆರ್​ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಡೇರ್ ಡೇವಿಲ್ಸ್ ತಂಡ ಏಳು ಪಂದ್ಯಗಳಲ್ಲಿ 4 ಸೋಲು ಕಂಡಿದೆ.

95ರನ್ನಿಗೆ ಆಲೌಟ್ ಆದ ಡೆಲ್ಲಿ ಡೇರ್ ಡೆವಿಲ್ಸ್

95ರನ್ನಿಗೆ ಆಲೌಟ್ ಆದ ಡೆಲ್ಲಿ ಡೇರ್ ಡೆವಿಲ್ಸ್

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆಮಾಡಿಕೊಂಡ ಆರ್​ಸಿಬಿಗೆ ಗೆಲುವಿನ ಕನಸು ಚಿಗುರಿಸಿದ್ದು ಬೌಲರ್ಸ್. ಮಿಚೆಲ್ ಸ್ಟಾರ್ಕ್ (20 ಕ್ಕೆ 3), ವರುಣ್ ಅರೋನ್ (24 ಕ್ಕೆ 2) ಮತ್ತು ಡೇವಿಡ್ ವಿಸೆ (18 ಕ್ಕೆ 2) ಉತ್ತಮ ಬೌಲಿಂಗ್ ಮಾಡಿ ಎದುರಾಳಿ ತಂಡವನ್ನು 95ರನ್ನಿಗೆ ಆಲೌಟ್ ಮಾಡಿದರು.

ಗೆಳೆಯರ ಸಮಾಗಮ ಕೊಹ್ಲಿ -ಯುವರಾಜ್

ಗೆಳೆಯರ ಸಮಾಗಮ ಕೊಹ್ಲಿ -ಯುವರಾಜ್

ಸ್ಥಳೀಯ ಆಟಗಾರ ಕೊಹ್ಲಿ - ಸ್ಥಳೀಯ ತಂಡದ ಆಟಗಾರ ಯುವರಾಜ್ ಸಿಂಗ್ ಗೆಳೆತನ ಸಾರುವ ಚಿತ್ರ

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ಡೆಲ್ಲಿ ಡೇರ್​ಡೇವಿಲ್ಸ್ 18.2 ಓವರ್ 95 ಆಲೌಟ್ (ಕೇದಾರ್ ಜಾದವ್ 33, ಮಯಾಂಕ್ ಅಗರ್​ವಾಲ್ 27, ಮಿಚೆಲ್ ಸ್ಟಾರ್ಕ್ 20 ಕ್ಕೆ 3), ಡೇವಿಡ್ ವಿಸೆ 18 ಕ್ಕೆ 2, ವರುಣ್ ಅರೋನ್ 24 ಕ್ಕೆ 2)
ರಾಯಲ್ ಚಾಲೆಂಜರ್ಸ್ ಬೆಂಗಳೂರು 10.3 ಓವರ್ 99 ಕ್ಕೆ 0 (ಕ್ರಿಸ್ ಗೇಲ್ 62, ವಿರಾಟ್ ಕೋಹ್ಲಿ 35)

ಜಾಧವ್ ಹಾಗೂ ಮಾಯಾಂಕ್ ಪ್ರತಿರೋಧ

ಜಾಧವ್ ಹಾಗೂ ಮಾಯಾಂಕ್ ಪ್ರತಿರೋಧ

ಡೆಲ್ಲಿ ಪರ ಕೆಳ ಕ್ರಮಾಂಕದಲ್ಲಿ ಕೇದಾರ್ ಜಾದವ್ (33ರನ್) ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್​ವಾಲ್ (27) ಮಾತ್ರ ಕೊಂಚ ಪ್ರತಿರೋಧ ತೋರಿದರು.

ಮತ್ತೆ ಕ್ರಿಸ್ ಗೇಲ್ ಆರ್ಭಟ

ಮತ್ತೆ ಕ್ರಿಸ್ ಗೇಲ್ ಆರ್ಭಟ

ಮತ್ತೆ ಕ್ರಿಸ್ ಗೇಲ್ ಆರ್ಭಟಿಸಿ 40 ಎಸೆತಗಳಲ್ಲಿ 62ರನ್ (6X4, 4X6) ಚೆಚ್ಚಿದರು. ಕೊಹ್ಲಿ 6 ಬೌಂಡರಿ ಇದ್ದ 35ರನ್ ಗಳಿಸಲು 23ಎಸೆತ ಬಳಸಿದರು.

ವಿಫಲರಾದ ದುಬಾರಿ ಆಟಗಾರ ಯುವಿ

ವಿಫಲರಾದ ದುಬಾರಿ ಆಟಗಾರ ಯುವಿ

ಐಪಿಎಲ್ 2015ರ ದುಬಾರಿ ಆಟಗಾರ ಯುವರಾಜ್ ಸಿಂಗ್ 5 ಎಸೆತಗಳಲ್ಲಿ 2 ರನ್ ಗಳಿಸಿ ನಿರಾಶೆ ಮೂಡಿಸಿದರು.

ಲಯಕ್ಕೆ ಮರಳಿದ ವರುಣ್ ಅರೋನ್

ಲಯಕ್ಕೆ ಮರಳಿದ ವರುಣ್ ಅರೋನ್

ಭಾರತದ ಭರವಸೆಯ ವೇಗಿ ವರುಣ್ ಅರೋನ್ ಮತ್ತೆ ಲಯ ಕಂಡುಕೊಂಡಿದ್ದಾರೆ 24ರನ್ನಿತ್ತು 2 ವಿಕೆಟ್ ಗಳಿಸಿದ್ದಲ್ಲದೆ ಉತ್ತಮ ಫೇಸ್ ನಲ್ಲಿ ಎಸೆತಗಳನ್ನು ಹಾಕಿ ಡೆಲ್ಲಿ ಬ್ಯಾಟ್ಸ್ ಮನ್ ಗಳನ್ನು ಕಂಗೆಡಿಸಿದರು.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+