ಚೆನ್ನೈ ಮಣಿಸಿದ ಮುಂಬೈ ಅಂಕಪಟ್ಟಿಯಲ್ಲಿ 'ಜಿಗಿತ'
ಚೆನ್ನೈ, ಮೇ.9: ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರಿಗೆ ಸಣ್ಣ ಪ್ರಮಾಣದ ಪೆಟ್ಟು ನೀಡುವಲ್ಲಿ ಮುಂಬೈ ತಂಡದ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಉಭಯ ತಂಡಗಳಿಗೂ ಕೊನೆ ತನಕ ಆಟವಾಡಿಸಿದ 'ವಿಜಯಲಕ್ಷ್ಮಿ' ಕೊನೆಗೆ ರೋಹಿತ್ ಶರ್ಮ ಕೊರಳಿಗೆ ಹಾರ ಹಾಕಿದ್ದಾಳೆ. ಎಂ ಚಿದಂಬರಂ ಸ್ಟೇಡಿಯಂನಲ್ಲಿ ರೋಚಕ ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಐಪಿಎಲ್ 2015ರ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಸತತ ಐದು ಜಯದೊಂದಿಗೆ ಮುಂಬೈ ತಂಡ ಬೀಗುತ್ತಿದ್ದರೆ, ತವರು ನೆಲದಲ್ಲಿ ಧೋನಿ ಮೊದಲ ಸೋಲಿನ ಕಹಿ ಉಂಡಿದ್ದಾರೆ,
ಎಂ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 158/5 ಸ್ಕೋರ್ ಮಾಡಿತು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಇದಕ್ಕೆ ಉತ್ತರವಾಗಿ ಮುಂಬೈ ತಂಡ 19.2 ಓವರ್ಗಳಲ್ಲಿ 4 ವಿಕೆಟ್ಗೆ 159ರನ್ ಗಳಿಸಿ ಜಯಭೇರಿ ಬಾರಿಸಿದರು. ಕೊನೆ ಹಂತದಲ್ಲಿ ಅಂಬಟಿ ರಾಯುಡು ಹಾಗೂ ಹಾರ್ದಿಕ್ ಪಾಂಡ್ಯ ಆಟ ಧೋನಿ ತಂತ್ರವನ್ನು ಬುಡಮೇಲು ಮಾಡಿತು. ಆಟದ ಇನ್ನಷ್ಟು ವಿವರ ಹಾಗೂ ಚಿತ್ರಗಳು ಮುಂದಿವೆ...

ಮುಂಬೈ ರನ್ ಚೇಸ್ ಉತ್ತಮ ಆರಂಭ
ಮುಂಬೈ ತಂಡ ಮೊದಲ ವಿಕೆಟ್ಗೆ 61 ಎಸೆತಗಳಲ್ಲಿ 84 ರನ್ ಗಳಿಸಿತು. ಲೆಂಡ್ಲ್ ಸಿಮನ್ಸ್(38 ರನ್)(31 ಎಸೆತ, 3X4, 2X6), ಪಾರ್ಥಿವ್ ಪಟೇಲ್ 45 ರನ್(32ಎ, 6X4) ಗಳಿಸಿದರು .ಅದರೆ, ಒಂದು ರನ್ ಅಂತರದಲ್ಲಿ ಇಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಕೈಕೊಟ್ಟ ಮಧ್ಯಮ ಕ್ರಮಾಂಕ
ಉತ್ತಮ ಆರಂಭದ ಲಾಭ ಪಡೆಯಲಾಗದೆ ಮುಂಬೈ ಸಂಕಷ್ಟ ಅನುಭವಿಸಿತು. ಪೊಲ್ಲಾರ್ಡ್ 1 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮ 18ರನ್ ಗಳಿಸಿದರೂ ಬ್ರಾವೋ ಎಸೆತಗಳಲ್ಲಿ ರೈನಾಗೆ ಕ್ಯಾಚಿತ್ತು ಔಟಾದರು.

ಜಯ ತಂದಿತ್ತ ರಾಯುಡು- ಪಾಂಡ್ಯ
ಅಂಬಟಿ ರಾಯುಡು ಅಜೇಯ 34ರನ್ (19ಎ, 1X4, 3X6)
ಹಾರ್ದಿಕ್ ಪಾಂಡ್ಯ ಅಜೇಯ 21ರನ್ (8X4, 3X6) ಸತತ ಸಿಕ್ಸರ್ ಗಳನ್ನು ಬಾರಿಸಿದ್ದು ಪಂದ್ಯಕ್ಕೆ ಹೊಸ ತಿರುವು ತಂದುಕೊಟ್ಟಿತು. ಪಾಂಡ್ಯ ಬ್ಯಾಟಿಂಗ್ ಬಗ್ಗೆ ರಿಕಿ ಪಾಟಿಂಗ್ ಅವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತೆ ಮಿಂಚಿದ ಆಲ್ ರೌಂಡರ್ ನೇಗಿ
ಎಡಗೈ ಸ್ಪಿನ್ನರ್ ಕಮ್ ಬ್ಯಾಟ್ಸ್ ಮನ್ ಪವನ್ ನೇಗಿ 36 ರನ್(17 ಎ, 4X4, 1X6)ಗಳಿಸಿದರೆ, ನಾಯಕ ಧೋನಿ 39 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದರು. ಅದರೆ, ಬೌಲಿಂಗ್ ನಲ್ಲಿ ನೇಗಿ 4 ಓವರ್ ಗಳಲ್ಲಿ 34ರನ್ನಿತ್ತು ದುಬಾರಿ ಎನಿಸಿದರು.

ಕುಸಿದ ಮಧ್ಯಮ ಕ್ರಮಾಂಕ
ಸ್ಮಿತ್ 27ರನ್ ಹಾಗೂ ಮೆಕ್ಲಮ್ 23ರನ್ ಗಳಿಸಿ ಉತ್ತಮ ಅರಂಭ ಒದಗಿಸಿದರೂ ರೈನಾ 10 ಹಾಗೂ ಡುಫ್ಲೆಸಿಸ್ 17ರನ್ ಗಳಿಸಿ ವಿಫಲರಾದರು. ಕರ್ನಾಟಕದ ಸ್ಪಿನ್ನರ್ ಜಗದೀಶ್ ಸುಚಿತ್ 21 ರನ್ನಿತ್ತು 1 ವಿಕೆಟ್ ಉತ್ತಮ ಪ್ರದರ್ಶನ ನೀಡಿದರು.

ಕ್ರಿಕೆಟ್ ದಿಗ್ಗಜರ ಸಮಾಗಮ
ಕ್ರಿಕೆಟ್ ದಿಗ್ಗಜರಾದ ಎಂಎಸ್ ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ಅವರು ಪಂದ್ಯ ನಂತರ ಪೆವಿಲಿಯನ್ ಗೆ ಮರಳುತ್ತಿರುವ ಸಿಕ್ಕ ದೃಶ್ಯ.. ಚಿತ್ರ ಕೃಪೆ: ಪಿಟಿಐ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications