ಎಬಿ ಡಿ ಬಂದ ದಾರಿಬಿಡಿ, ಹೊಡಿ ಬಡಿ ಆಟ ನೋಡಿ
ಮುಂಬೈ, ಮೇ.10: ದಕ್ಷಿಣ ಆಫ್ರಿಕಾದ 'ಸೂಪರ್ ಕ್ರಿಕೆಟರ್' ಎಬಿ ಡಿ ವಿಲೆಯರ್ಸ್ ಅಬ್ಬರದ ಆಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಹಂತಕ್ಕೇರುವ ಅವಕಾಶ ಹೆಚ್ಚಿಸಿದೆ. ಚೆನ್ನೈ ಮಣಿಸಿದ ಹುಮ್ಮಸ್ಸಿನಲ್ಲಿದ್ದ ಮುಂಬೈ ತಂಡಕ್ಕೆ ತವರು ನೆಲದಲ್ಲೇ ಬೆಂಗಳೂರು ತಂಡ ಸೋಲುಣಿಸಿದೆ. ಎಬಿಡಿ ಶತಕದ ನೆರವಿನಿಂದ ಕೊಹ್ಲಿ ಪಡೆ ರೋಹಿತ್ ಪಡೆ ಮೇಲೆ 39 ರನ್ ಗಳ್ ಜಯ ದಾಖಲಿಸಿದೆ.
| ಐಪಿಎಲ್ ವಿಶೇಷ ಪುಟ | ಅಂಕ ಪಟ್ಟಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ಆರ್‌ಸಿಬಿ ಒಂದೇ ವಿಕೆಟಿಗೆ 235 ರನ್ ಪೇರಿಸಿತು. ಮುಂಬೈ ತಂಡ ಕೂಡಾ ಉತ್ತಮವಾಗಿ ರನ್ ಚೇಸ್ ಮಾಡಿ 20 ಓವರ್ ಗಳಲ್ಲಿ 196/7 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಈ ಗೆಲುವಿನಿಂದ ಆರ್ ಸಿಬಿ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಗೇಲ್ ವೈಫಲ್ಯ, ನಾಯಕ ಕೊಹ್ಲಿ ಭರ್ಜರಿ ಆಟ, ಎಬಿ ಡಿ ಹೊಡಿ ಬಡಿ, ಮುಂಬೈ ರನ್ ಚೇಸ್ ಚಿತ್ರ ಸಂಪುಟ ಮುಂದಿದೆ ನೋಡಿ...

ವಿಶ್ವಕಪ್ ಸಿಟ್ಟು ಐಪಿಎಲ್ ನಲ್ಲಿ ತೀರಿಸಿಕೊಂಡ ಎಬಿಡಿ
ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಸೋತಾಗ ಆಗಿದ್ದ ಸಿಟ್ಟನ್ನು ಐಪಿಎಲ್ ನಲ್ಲಿ ಎಬಿಡಿ ಈ ರೀತಿ ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತು. 47 ಎಸೆತಗಳಲ್ಲಿ 100ರನ್ ದಾಖಲಿಸಿದ ಎಬಿಡಿ ಐಪಿಎಲ್ ವೃತ್ತಿಯ ಎರಡನೇ ಹಾಗೂ ಈ ಐಪಿಎಲ್ ನ ಮೊದಲ ಶತಕ ದಾಖಲಿಸಿದರು.

ಎಬಿಡಿ ಹೊಡೆತಕ್ಕೆ ಮುಂಬೈ ನಜ್ಜುಗುಜ್ಜು
ಮುಂಬೈ ಬೌಲರ್ ಗಳನ್ನು ವಿಭಿನ್ನ ವಿಶಿಷ್ಟ ಹೊಡೆತಗಳ ಮೂಲಕ ಕಾಡಿದ ಎಬಿ ಡಿವಿಲೆಯರ್ಸ್ 133ರನ್ ಗಳಿಸಿದರೆ ನಾಯಕ ಕೊಹ್ಲಿ ಅಜೇಯರಾಗಿ ಉಳಿದು 82ರನ್ (50 ಎ, 6x4,6x4) ಗಳಿಸಿದರು. ಎಬಿ ಡಿ ಈ ಮೂಲಕ ಐಪಿಎಲ್ ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಕೆ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು.

ಟ್ವೆಂಟಿ 20 ವಿಶ್ವದಾಖಲೆ ಜೊತೆಯಾಟ
ಟ್ವೆಂಟಿ 20 ವಿಶ್ವದಾಖಲೆ ಜೊತೆಯಾಟ ಪ್ರದರ್ಶಿಸಿದ ವಿರಾಟ್ ಕೊಹ್ಲಿ 82ರನ್ ಹಾಗೂ ಎಬಿ ಡಿ 133ರನ್ 16.5 ಓವರ್‌ಗಳಲ್ಲಿ 215 ರನ್ ಪೇರಿಸಿದರು. ತಂಡದ ಸ್ಕೋರ್ 20ರನ್ ಆಗಿದ್ದಾಗ 13 ರನ್ ಗಳಿಸಿದ್ದ ಗೇಲ್ ಪೆವಿಲಿಯನ್ ಗೆ ಮರಳಿದ್ದರು. ಐಪಿಎಲ್ ನಲ್ಲಿ ಮೂರನೇ ಬಾರಿ 200ಕ್ಕೂ ಅಧಿಕ ರನ್ ಜೊತೆಯಾಟ ಕಂಡು ಬಂದಿದೆ. ಆರ್ ಸಿಬಿ ಪರ ಗೇಲ್-ಕೊಹ್ಲಿ 2012ರಲ್ಲಿ 204ರನ್ ಜೊತೆಯಾಟ ಸಾಧಿಸಿದರು.

ವ್ಯರ್ಥವಾದ ಸಿಮನ್ಸ್ ಅಜೇಯ ಹೋರಾಟ
ಮುಂಬೈ ಪರ ಆರಂಭಕಾರ ಲೆಂಡ್ಲ್ ಸಿಮನ್ಸ್ ಏಕಾಂಗಿಯಾಗಿ ಹೋರಾಟ ನಡೆಸಿ ಅಜೇಯರಾಗಿ ಉಳಿದರು. 53ಎಸೆತಗಳಲಿ 68 ರನ್ ಗಳಿಸಿ 5 ಬೌಂಡರಿ 3 ಸಿಕ್ಸರ್ ಸಿಡಿಸಿದರು.

ಉತ್ತಮ ಸಾಥ್ ನೀಡಿದ ಪೊಲಾರ್ಡ್
ಉತ್ತಮ ಸಾಥ್ ನೀಡಿದ ಪೊಲಾರ್ಡ್ 24 ಎಸೆತಗಳಲ್ಲಿ 49ರನ್ ಗಳಿಸಿದರು. ಅದರೆ, ಪೊಲ್ಲಾರ್ಡ್ ವಿಕೆಟ್ ಎಸ್ ಅರವಿಂದ್ ಪಾಲಾಗುತ್ತಿದ್ದಂತೆ ರನ್ ಚೇಸ್ ಕುಂಠಿತವಾಯಿತು.

ಮಿಂಚಿದ ಹರ್ಷಲ್ ಪಟೇಲ್ ಹಾಗೂ ಚಾಹಲ್
ಮಿಂಚಿದ ಹರ್ಷಲ್ ಪಟೇಲ್ ಹಾಗೂ ಚಾಹಲ್ ತಲಾ 2 ವಿಕೆಟ್ ಪಡೆದು ಮುಂಬೈಗೆ ಮಾರಕವಾದರು. ಉತ್ತಮ ಜೊತೆಯಾಟ ಸಿಗದ ಕಾರಣ ಮುಂಬೈಯಿಂದ ಪಂದ್ಯ ಕೈ ತಪ್ಪಿತು. ಇಲ್ಲದಿದ್ದರೆ ಬೃಹತ್ ಮೊತ್ತವನ್ನು ಚೇಸ್ ಮಾಡುವ ಎಲ್ಲಾ ಸಾಧ್ಯತೆಯಿತ್ತು.
ಎಬಿ ಡಿ ವಿಲೆಯರ್ಸ್ ಶತಕದ ಬಗ್ಗೆ ಹೇಳಿದ್ದೇನು?
ಎಬಿ ಡಿ ವಿಲೆಯರ್ಸ್ ಶತಕದ ಬಗ್ಗೆ ಹೇಳಿದ್ದೇನು? ಆರ್ ಸಿಬಿ ಟ್ವೀಟ್ ಹಾಗೂ ವಿಡಿಯೋ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications