ವೃದ್ಧಿಮಾನ್ ಟೀಂ ಇಂಡಿಯಾ ವಿಕೆಟ್ ಕೀಪರ್: ಕೊಹ್ಲಿ
ನವದೆಹಲಿ, ಏ.26: ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಅವರ ನಿರ್ಗಮನದ ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ಸ್ಥಾನ ತುಂಬಿರುವ ವಿರಾಟ್ ಕೊಹ್ಲಿ ಅವರು ಭವಿಷ್ಯದ ವಿಕೆಟ್ ಕೀಪರ್ ಬಗ್ಗೆ ಮಾತನಾಡಿದ್ದಾರೆ. ವೃದ್ಧಿಮಾನ್ ಸಹಾ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಧೋನಿ ಸ್ಥಾನ ತುಂಬಲಿದ್ದಾರೆ ಎಂದಿದ್ದಾರೆ.
ಐಪಿಎಲ್ ಪಂದ್ಯದಲ್ಲಿ ಡೆಲ್ಲಿಡೇರ್‌ಡೆವಿಲ್ಸ್ ತಂಡವನ್ನು ಎದುರಿಸುವ ಮುನ್ನ ಮಾತನಾಡಿದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆ ಈ ರೀತಿ ಉತ್ತರಿಸಿದರು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಕಿಂಗ್ಸ್ ಇಲೆವೆನ್ಸ್ ತಂಡದ ಪರ ಉತ್ತಮ ವಿಕೆಟ್ ಕೀಪಿಂಗ್ ಮಾಡುತ್ತಿರುವ ಬಂಗಾಳದ ವೃದ್ಧಿಮಾನ್ ಸಹಾ ಅವರೇ ಅವರೇ ಮುಂದಿನ ಐದು ವರ್ಷಗಳಲ್ಲಿ ನಾವಾಡುವ ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಪಾತ್ರ ನಿರ್ವಹಿಸುತ್ತಾರೆ ಎಂದು ಹೇಳಿದರು.

ಎಂಎಸ್ ಧೋನಿ ಅವರಂಥ ಸಮರ್ಥ ವಿಕೆಟ್ ಕೀಪರ್ ಅವರ ಸ್ಥಾನ ತುಂಬುವುದು ಕಷ್ಟಕರ ಕೆಲಸ. ಅದರೆ, ವೃದ್ಧಿಮಾನ್ ಸಹಾ ಅವರು ಸಮರ್ಥರಾಗಿದ್ದಾರೆ. ಸಹಾ ಅಲ್ಲದೆ ದಿನೇಶ್ ಕಾರ್ತಿಕ್, ಪಾರ್ಥೀವ್ ಪಟೇಲ್ ಹಾಗೂ ಸಂಜು ಸಾಮ್ಸನ್ ಸಮರ್ಥರಾಗಿದ್ದಾರೆ. 30 ವರ್ಷ ವಯಸ್ಸಿನ ಸಹಾ ಅವರು ಇನ್ನೂ 5-6 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಪ್ರತಿಭೆ ಹೊಂದಿದ್ದಾರೆ ಎಂದಿದ್ದಾರೆ.
ಅಹಮದಾಬಾದಿನಲ್ಲಿ ವಿಶೇಷ ಫ್ಯಾನ್ ಜೊತೆ ಕೆಲ ಕಾಲ ಕಳೆದ ವಿರಾಟ್ ಕೊಹ್ಲಿ ಅವರು ನಂತರ ಡೆಲ್ಲಿಗೆ ತೆರಳಿದ್ದಾರೆ. ಡೆಲ್ಲಿ ವಿರುದ್ಧ ಪಂದ್ಯಕ್ಕೆ ಸಜ್ಜಾಗುವ ಮುನ್ನ ತಂಡದ ಸಹ ಆಟಗಾರರ ಜೊತೆ ಲ್ಯಾಂಬ್ರೋಗಿನಿ ಕಾರಿನಲ್ಲಿ ಡೆಲ್ಲಿ ರಸ್ತೆಯಲ್ಲಿ ಸುತ್ತಾಡಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications