Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೆಹಲಿ ರೋಡಿನಲ್ಲಿ ವಿರಾಟ್ ಕೊಹ್ಲಿ ಜಾಲಿ ರೈಡ್

ನವದೆಹಲಿ, ಏ.27: ಐಪಿಎಲ್ ನಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಾದಿ ಹಿಡಿದಿದೆ. ಸತತ ಎರಡು ಜಯದೊಂದಿಗೆ ದೆಹಲಿ ಹುಡುಗ ಕೊಹ್ಲಿ ನೇತೃತ್ವದ ತಂಡ ಸಂಭ್ರಮಿಸಿದೆ. ಈ ನಡುವೆ ದೆಹಲಿಗೆ ಬಂದ ಖುಷಿಯಲ್ಲಿ ಕೊಹ್ಲಿ ಜಾಲಿ ರೈಡ್ ಹೋಗಿ ಬಂದಿದ್ದಾರೆ.

ಏ.26ರಂದು ಮಧ್ಯಾಹ್ನ ಪಂದ್ಯಕ್ಕೂ ಮುನ್ನ ದೆಹಲಿ ರಸ್ತೆಗಳಲ್ಲಿ ಕೊಹ್ಲಿ ತನ್ನ ಸಹ ಆಟಗಾರರೊಡನೆ ಸುತ್ತಾಡಿದ್ದಾರೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವೀಟ್ ಮಾಡಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

Spotted: Virat Kohli on Delhi roads in his 'new toy' Lamborghini Gallardo

ಆಸ್ಟ್ರೇಲಿಯಾದ ವೇಗಿ ಸೀನ್ ಅಬಾಟ್ ಜತೆಗೂಡಿ ಐಷಾರಾಮಿ ಹಾಗೂ ವೇಗದ ಕಾರು ಎನಿಸಿರುವ ಲ್ಯಾಂಬ್ರೋಗಿನಿ ಗಲಾಟ್ ಏರಿದ ಕೊಹ್ಲಿ ಶರವೇಗದಲ್ಲಿ ಸಂಚರಿಸಿದ್ದಾರೆ. []

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಡಿ ಬೆಳೆದ ವಿರಾಟ್ ಕೊಹ್ಲಿ ಅವರು ಐಪಿಎಲ್ 8ರಲ್ಲಿ ಪ್ರಬಲ ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಭಾನುವಾರ(ಏ.26) ರಾತ್ರಿ ಗೆಲುವಿನ ರನ್ ಹೊಡೆದು ವಿಜಯೋತ್ಸವ ಅಚರಿಸಿದರು.

ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ 10.3 ಓವರ್ ಗಳಲ್ಲಿ 96ರನ್ ಚೆಚ್ಚಿ ಸುಲಭವಾಗಿ ಗೆಲುವು ದಾಖಲಿಸಿತು. []

ಇದಕ್ಕೂ ಮುನ್ನ ಭಾನುವಾರ ಮಧ್ಯಾಹ್ನ ವೇಗಿ ಸೀನ್ ಅಬಾಟ್ ಕೂರಿಸಿಕೊಂಡು ದೆಹಲಿ ರಸ್ತೆಗಳಲ್ಲಿ ಸುತ್ತಾಡಿದ ಕೊಹ್ಲಿ ತಮ್ಮ ಕಾರು ಚಾಲನೆ ನೈಪುಣ್ಯ ಪ್ರದರ್ಶಿಸಿದರು.

ನಂತರ ಈ ಬಗ್ಗೆ ಟ್ವೀಟ್ ಮಾಡಿ ಕೊಹ್ಲಿ ಜೊತೆಗಿನ ಫೋಟೊ ಶೇರ್ ಮಾಡಿದರು. ವಿಕ್ಟರ್ ಸಿಂಬಲ್ ತೋರಿಸಿದ ಕೊಹ್ಲಿ ಅದರಂತೆ ಗೆಲುವು ಪಡೆದುಕೊಂಡರು. ಡೆಲ್ಲಿ ವಿರುದ್ಧ ಗೆಲುವಿನ ನಂತರ ಆರ್ ಸಿಬಿ ತನ್ನ ಮುಂದಿನ ಪಂದ್ಯವನ್ನು ಬುಧವಾರ(ಏ.29) ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+