ಎಬಿಡಿ ಅಬ್ಬರಕ್ಕೆ ಬೆಚ್ಚಿದ ಡೆಲ್ಲಿ, ಆರ್ ಸಿಬಿಗೆ ಸುಲಭ ಜಯ

ಬೆಂಗಳೂರು, ಏಪ್ರಿಲ್ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ 19ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ಭರ್ಜರಿ ಜಯ ದಾಖಲಿಸಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಅಬ್ಬರಕ್ಕೆ ಡೆಲ್ಲಿ ತತ್ತರಿಸಿತು. ಡೆಲ್ಲಿ ವಿರುದ್ಧ ಬೆಂಗಳೂರು 6 ವಿಕೆಟ್ ಗಳ ಸುಲಭ ಜಯ ದಾಖಲಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಗ್ರಾಫಿಕ್ಸ್
ಡೆಲ್ಲಿ ನೀಡಿದ್ದ 175 ರನ್ ಗಳ ಗುರಿಯನ್ನು 18 ಓವರ್ ಗಳಲ್ಲಿ 176/4 ಸ್ಕೋರ್ ಮಾಡಿ ಆರ್ ಸಿಬಿ ಗೆದ್ದುಕೊಂಡಿತು. ಎಬಿಡಿ 90ರನ್ (39 ಎಸೆತಗಳು, 10 ಬೌಂಡರಿ, 5 ಸಿಕ್ಸರ್), ಕೊಹ್ಲಿ 30 ರನ್ (26ಎಸೆತಗಳು), ಡೆಲ್ಲಿ ಪರ ಕ್ರಿಸ್ ಮೊರಿಸ್ 4 ಓವರ್ ಗಳಲ್ಲಿ 43ರನ್ ಚೆಚ್ಚಿಸಿಕೊಂಡರು.
ಐಪಿಎಲ್ ವಿಶೇಷ ಪುಟ | ಅಂಕಪಟ್ಟಿ | ಫ್ಯಾಂಟಸಿ ಲೀಗ್
175ರನ್ ಗುರಿ ಬೆನ್ನು ಹತ್ತಿದ ಆರ್ ಸಿಬಿಗೆ ಡಿಕಾಕ್ 1 ಬೌಂಡರಿ, 1ಸಿಕ್ಸರ್ ಬಾರಿಸಿ 18ರನ್ ಗಳಿಸಿ ಉತ್ತಮ ಆರಂಭ ತಂದರು. ಮೊದಲ ಬಾರಿಗೆ ಕಣಕ್ಕಿಳಿದ ಮನನ್ ವೋರಾ 2ರನ್ ಗಳಿಸಿ ಔಟಾದರು.
ನಂತರ ವಿರಾಟ್ ಕೊಹ್ಲಿ 30ರನ್ ಹಾಗೂ ಎಬಿ ಡಿ ವಿಲಿಯರ್ಸ್ 90ರನ್ ಗಳಿಸಿ ಗೆಲುವಿನ ಹತ್ತಿರಕ್ಕೆ ತಂದರು. ಬೌಲ್ಟ್ ಹಿಡಿದ ಅದ್ಭುತ ಕ್ಯಾಚಿಗೆ ಕೊಹ್ಲಿ ಔಟಾದರು. ಕೋರೆ ಆಂಡರ್ಸನ್ 15 ಹಾಗೂ ಮನ್ದಿಪ್ 9 ಎಸೆತಗಳಲ್ಲಿ 17ರನ್ ಗಳಿಸಿ ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಡೆಲ್ಲಿ ಪರ ಶ್ರೇಯಸ್ ಅಯ್ಯರ್ 52ರನ್ (31 ಎಸೆತ, 4 ಬೌಂಡರಿ 3ಸಿಕ್ಸರ್) ಹಾಗೂ ರಿಷಬ್ ಪಂತ್ 85 ರನ್(48 ಎಸೆತ, 6 ಬೌಂಡರಿ, 7 ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು 174/5ಕ್ಕೇರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications