For Quick Alerts
ALLOW NOTIFICATIONS  
For Daily Alerts
 

ಚೆನ್ನೈನಿಂದ ಪಂಜಾಬ್‌ಗೆ ಹಾರಿದ ರವಿಚಂದ್ರನ್ ಅಶ್ವಿನ್‌

By Manjunatha
ipl 2018 auction full list of players sold

ಬೆಂಗಳೂರು, ಜನವರಿ 27: ಐಪಿಎಲ್ 2018 ಆಟಗಾರರ ಹರಾಜು ಪ್ರಕ್ರಿಯೆಯ ಮೊದಲ ದಿನ ಐಪಿಎಲ್‌ನ ಸ್ಟಾರ್ ಆಟಗಾರ ಕ್ರಿಸ್‌ಗೇಲ್ ಅವರಿಗೆ ಯಾವ ತಂಡಗಳೂ ಹರಾಜು ಕೂಗಲೇ ಇಲ್ಲ!

ಕ್ರಿಸ್‌ಗೇಲ್ ಅವರಿಗೆ ನಾಳೆ ಹರಾಜು ಕೂಗುವ ಸಾಧ್ಯತೆ ಇದ್ದು ಅವರು ಯಾರ ತಂಡದ ಪಾಲಾಗುತ್ತಾರೆ ಎಂಬುದು ಇನ್ನೂ ಕುತೂಹಲ ಉಳಿಸಿಕೊಂಡಿದೆ.

ಚೆನ್ನೈ ನ ಮೆಚ್ಚಿನ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಪಂಜಾಬ್ ತಂಡದ ಪಾಲಾಗಿದ್ದಾರೆ. ಈ ಬಾರಿ ಅವರು ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಆಟಗಾರ ಎನ್ನಲಾಗಿತ್ತು.

ಚೆನ್ನೈ ಪರವಾಗಿ ಬಹಳಷ್ಟು ಐಪಿಎಲ್ ಸೀಸನ್ ಆಡಿದ್ದ ರವಿಚಂದ್ರನ್ ಅಶ್ವಿನ್ ಅವರು ಸ್ವತಃ ಈ ಬಾರಿ ಕೂಡ ಚೆನ್ನೈ ಪರವಾಗಿ ಆಡಲು ಉತ್ಸುಕರಾಗಿದ್ದರು. ಆದರೆ ಅವರು ಪ್ರೀತಿ ಜಿಂಟಾ ಒಡೆತನದ ಪಂಜಾಬ್ ತಂಡದ ಪಾಲಾಗಿದ್ದಾರೆ.

ಎರಡು ಕೋಟಿ ಮೂಲ ದರದದೊಂದಿಗೆ ಹರಾಜಿನಲ್ಲಿದ್ದ ಅಶ್ವಿನ್ ಅವರಿಗೆ ಚೆನ್ನೈ , ಮುಂಬೈ ಮತ್ತು ಪಂಜಾಬ್‌ ಫ್ರಾಂಚೈಸಿಗಳು ಬಿರಿಸಿನಿಂದ ಹರಾಜು ಕೂಗಿ ಕೊನೆಗೆ ಪ್ರೀತಿ ಜಿಂಟಾ ಅವರು 7.60 ಕೋಟಿ ಮೊತ್ತಕ್ಕೆ ಹರಾಜು ಕೂಗಿ ಆಲ್‌ರೌಂಡರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು.

ಹರಾಜು ಪ್ರಕ್ರಿಯೆ ಪ್ರಾರಂಭದಿಂದಲೇ ಬಿರುಸಿನಿಂದ ಹರಾಜು ಕೂಗುತ್ತಿರುವ ಪ್ರಿತಿ ಜಿಂಟಾ ಸ್ಟಾರ್ ಆಟಗಾರ ಶಿಖರ್ ಧವನ್ ಅವರನ್ನೂ ಕೂಡ ತಮ್ಮ ತಂಡದ ಬುಟ್ಟಿಗೆ ಹಾಕಿಕೊಂಡರು, ಶಿಖರ್ ಅವರು 5.20 ಕೋಟಿಗೆ ಹರಾಜಾದರು.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಮೊದಲ ಬಾರಿಗೆ ಐಪಿಎಲ್ ಅಂಗಳಕ್ಕೆ ಬಂದಿರುವ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರು ಈ ವರೆಗೆ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿರುವ ಆಟಗಾರ ಎನಿಸಿಕೊಂಡಿದ್ದಾರೆ. ಅವರು 12.5 ಕೋಟಿಗೆ ರಾಜಸ್ಥಾನ ತಂಡದ ಪಾಲಾಗಿದ್ದಾರೆ.

ಆಸ್ಟ್ರೇಲಿಯಾ ವೇಗಿ ಮಿಷೆಲ್ ಸ್ಟಾಕ್ ಅವರು 9.20 ಕೋಟಿ ಮೊತ್ತಕ್ಕೆ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡದ ಪಾಲಾದರೆ, ಅಜಿಂಕ್ಯಾ ರಹಾನೆ ಅವರು ಆರ್‌ಟಿಎಂ ನಿಯಮದಡಿ ರಾಜಸ್ಥಾನ ತಂಡಕ್ಕೆ ಮತ್ತೆ ಆಡುವಂತಾದರು ಅವರು ಹರಾಜಾದ ಮೊತ್ತ 4 ಕೋಟಿ. ದಕ್ಷಿಣ ಆಪ್ರಿಕಾದ ಫಾಲ್‌ ಡು ಪ್ಲಿಸಿಸ್‌ ಕೂಡ ಆರ್‌ಟಿಎಂ ನಿಯಮದಡಿ ಚೆನ್ನೈ ತಂಡದ ಪರ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ ಅವರ ಮೊತ್ತ 1.6 ಕೋಟಿ.

ಈ ಮುಂಚೆ ಮುಂಬೈ ತಂಡದಲ್ಲಿದ್ದ ವೆಸ್ಟ್‌ ಇಂಡೀಸ್‌ನ ಕೀರನ್ ಪೊಲಾರ್ಡ್ ಅವರು ಕೂಡ ಆರ್‌ಟಿಎಂ ನಿಯಮದನ್ವಯ ಮುಂಬೈ ತಂಡದ ಪಾಲಾದರು ಅವರ ಹರಾಜು ಮೊತ್ತ 5.2.

Story first published: Saturday, January 27, 2018, 16:57 [IST]
Other articles published on Jan 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+