ಕ್ಯಾಚ್ ಆಫ್ ದಿ ಸೀಸನ್ : ಕೊಹ್ಲಿ ಕ್ಯಾಚ್ ಹಿಡಿದ ಬೌಲ್ಟ್

ಬೆಂಗಳೂರು, ಏಪ್ರಿಲ್ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ 19ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಅಬ್ಬರಕ್ಕೆ ಡೆಲ್ಲಿ ತತ್ತರಿಸಿತು.
ಡೆಲ್ಲಿ ವಿರುದ್ಧ ಬೆಂಗಳೂರು 6 ವಿಕೆಟ್ ಗಳ ಸುಲಭ ಜಯ ದಾಖಲಿಸಿತು. ಎಬಿಡಿ ಅಬ್ಬರದ ಜತೆಗೆ ಟ್ರೆಂಟ್ ಬೌಲ್ಟ್ ಹಿಡಿದ ಕ್ಯಾಚ್ ಎಲ್ಲರನ್ನು ಅಚ್ಚರಿಗೆ ದೂಡಿತು.
ಡೆಲ್ಲಿ ನೀಡಿದ್ದ 175 ರನ್ ಗಳ ಗುರಿಯನ್ನು 18 ಓವರ್ ಗಳಲ್ಲಿ 176/4 ಸ್ಕೋರ್ ಮಾಡಿ ಆರ್ ಸಿಬಿ ಗೆದ್ದುಕೊಂಡಿತು. ಎಬಿಡಿ 90ರನ್ (39 ಎಸೆತಗಳು, 10 ಬೌಂಡರಿ, 5 ಸಿಕ್ಸರ್), ಕೊಹ್ಲಿ 30 ರನ್ (26ಎಸೆತಗಳು) ಗಳಿಸಿ ಟ್ರೆಂಟ್ ಬೌಲ್ಟ್ ಹಿಡಿದ ಕ್ಯಾಚಿಗೆ ಬಲಿಯಾದರು.
ಒಂದು ಕ್ಷಣ, ಕ್ಯಾಚ್ ಹಿಡಿದ ಬೌಲ್ಟ್ ಗೆ ಕ್ಯಾಚ್ ಹಿಡಿದಿದ್ದರ ಬಗ್ಗೆ ಅನುಮಾನ ಮೂಡಬೇಕು ಎಂಬಂಥ ಪರಿಸ್ಥಿತಿ ಇತ್ತು. ಬೌಂಡರಿ ಗೆರೆಯ ಅಂಚಿನಲ್ಲಿ ಡೈವ್ ಹೊಡೆದ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಬೌಲ್ಟ್, ಸ್ವಲ್ಪ ಮುಂದಕ್ಕೆ ಅಲುಗಾಡಿದ್ದರೂ ಬೌಂಡರಿ ಗೆರೆ ತಗುಲುತ್ತಿತ್ತು. ಆದರೆ, ಸಮತೋಲನ ಕಾಯ್ದುಕೊಂಡು ಅದ್ಭುತ ರೀತಿಯಲ್ಲಿ ಕ್ಯಾಚ್ ತಮ್ಮದಾಗಿಸಿಕೊಂಡರು. ಅಚ್ಚರಿಯಿಂದಲೇ ಕೊಹ್ಲಿ ಪೆವಿಲಿಯನ್ ಕಡೆ ಸಾಗಿದರು. ಕ್ಯಾಚ್ ವಿಡಿಯೋ ಇಲ್ಲಿ ನೋಡಿ
Story first published: Sunday, April 22, 2018, 10:50 [IST]
Other articles published on Apr 22, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications