Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಗೆಲ್ಲುವ ತಂಡ, ಆದರೆ ಡೆಲ್ಲಿಯನ್ನೂ ಅಲ್ಲಗೆಳೆಯುವಂತಿಲ್ಲ..!

IPL 2018: Chennai Super Kings firm favourites against Delhi Daredevils

ಪುಣೆ, ಏಪ್ರಿಲ್ 30: ಐಪಿಎಲ್ 11ನೇ ಆವೃತ್ತಿಯ ಅಂಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊನೇಯ ಸ್ಥಾನದಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ಗೂ ಇಂದು ಪೂಣೆಯಲ್ಲಿ ಕಾದಾಟಕ್ಕೆ ರಂಗ ಸಜ್ಜಾಗಿದೆ.

ಲೈವ್ ಸ್ಕೋರ್ ಕಾರ್ಡ್

ಕಳೆದ ಪಂದ್ಯಾವಳಿಗಳನ್ನು ಅವಲೋಕಿಸಿದಾಗ ಇಂದಿನ ಪಂದ್ಯದಲ್ಲಿ ಚೆನ್ನೈ ತಂಡವೇ ಕೊಂಚ ಬಲಾಡ್ಯ ತಂಡವಾಗಿ ಕಾಣಿಸಿದರೂ ಡೆಲ್ಲಿಯನ್ನೂ ಸಂಪೂರ್ಣ ಕಡೆಗಣಿಸುವಂತಿಲ್ಲ. ನೂತನ ನಾಯಕ ಶ್ರೇಯಸ್ ಐಯರ್ ಮುಂದಾಳತ್ವದ ಡೆಲ್ಲಿ ಸದ್ಯ ಆಟದಲ್ಲಿ ಸುಧಾರಾಣೆ ಕಾಣುತ್ತಿರುವುದರಿಂದ ಅಂಕಪಟ್ಟಿಯ ಮೇಲಿರುವ ಚೆನ್ನೈ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯೂ ಇಲ್ಲದ್ದಿಲ್ಲ.

ಟಾಸ್ ವರದಿ: ಟಾಸ್ ಗೆದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ನೂತನ ನಾಯಕ ಶ್ರೇಯಸ್ ಐಯರ್ ಮುಂದಾಳತ್ವದ ಡೆಲ್ಲಿ ಸದ್ಯ ಆಟದಲ್ಲಿ ಸುಧಾರಾಣೆ ಕಾಣುತ್ತಿರುವುದರಿಂದ ಅಂಕಪಟ್ಟಿಯ ಮೇಲಿರುವ ಚೆನ್ನೈ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯೂ ಇಲ್ಲದ್ದಿಲ್ಲ.

ಗಂಭೀರ್ ನಾಯಕತ್ವದಿಂದ ಕಳೆಗಿಳದ ಮರು ಪಂದ್ಯದಲ್ಲೇ ಡೆಲ್ಲಿ ಕಾಕತಾಳೀಯವಾಗಿ ಗೆದ್ದಿತ್ತು. ಶುಕ್ರವಾರ ಕೆಕೆಆರ್ ವಿರುದ್ಧ ಡೆಲ್ಲಿಯ 55ರನ್ ಗಳ ಭರ್ಜರಿ ಗೆಲುವು ತಂಡ ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತಿದೆ. ಇನ್ನು ಡೆಲ್ಲಿ ತಂಡದಲ್ಲಿನ ಪೃಥ್ವಿ ಶಾ ಮತ್ತು ನಾಯಕ ಶ್ರೇಯಸ್ ಐಯರ್ ತಂಡಕ್ಕೆ ಬಲ ತುಂಬುವ ಆಟಗಾರರಾಗಿದ್ದಾರೆ.

ಚೆನ್ನೈಯೂ ಘಟಾನುಘಟಿಗಳಿರುವ ತಂಡವೆ. ಚೆನ್ನೈಯಲ್ಲಿ ಅನುಭವಿ ಆಟಗಾರರಿದ್ದರೆ, ಡೆಲ್ಲಿ ಯುವ ಆಟಗಾರರ ತಂಡ. ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ನಾಯಕ ಧೋನಿ, ಆಲ್ ರೌಂಟರ್ ಬ್ರಾವೋ, ಬೆಸ್ಟ್ ಫೀಲ್ಡರ್ ರೈನಾ ಡೆಲ್ಲಿಗೆ ಸವಾಲಾಗುವ ಸಾಧ್ಯತೆ ಹೆಚ್ಚಿದೆ.

ಒಟ್ಟಿನಲ್ಲಿ ಸದ್ಯ ಅಂಕ ಪಟ್ಟಿಯಲ್ಲಿ 10 ಅಂಕ ಗಳಿಸಿರುವ ಚೆನ್ನೈ ಇಂದು ಗೆಲ್ಲುವ ಸಾಧ್ಯತೆ ಹೆಚ್ಚಿದೆಯಾದರೂ 4 ಅಂಕಗಳೊಂದಿಗೆ ಕೊನೇ ಸ್ಥಾನದಲ್ಲಿರುವ ಡೆಲ್ಲಿಗೆ ಗೆಲುವು ಅನಿವಾರ್ಯವಾಗಿರುವುದರಿಂದ ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ. ಕಳೆದ ಪಂದ್ಯಾವಳಿಗಳನ್ನು ಅವಲೋಕಿಸಿದಾಗ ಇಂದಿನ ಪಂದ್ಯದಲ್ಲಿ ಚೆನ್ನೈ ತಂಡವೇ ಕೊಂಚ ಬಲಾಡ್ಯ ತಂಡವಾಗಿ ಕಾಣಿಸಿದರೂ ಡೆಲ್ಲಿಯನ್ನೂ ಸಂಪೂರ್ಣ ಕಡೆಗಣಿಸುವಂತಿಲ್ಲ.

Story first published: Tuesday, May 1, 2018, 18:10 [IST]
Other articles published on May 1, 2018
Read in English:
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+