For Quick Alerts
ALLOW NOTIFICATIONS  
For Daily Alerts
 

ಗೆಲುವಿನ ಓಟ ಮುಂದುವರೆಸಿದ ಪಂಜಾಬ್‌, ಡೆಲ್ಲಿಗೆ ಮತ್ತೆ ಸೋಲು

ipl 2018 match 22 delhi daredevils punjab kings XI

ನವದೆಹಲಿ, ಏಪ್ರಿಲ್, 23: ಕಡೆಯ ಚಂಡಿನ ವರೆಗೂ ಕುತೂಹಲ ಉಳಿಸಿಕೊಂಡಿದ್ದ ಪಂದ್ಯದಲ್ಲಿ ಡೆಲ್ಲಿಯನ್ನು ಮಣಿಸಿದ ಪಂಜಾಬ್‌ ತಂಡ ಗೆಲುವಿನ ನಡೆ ಬೀರಿತು.

ಕಡೆಯ ಚಂಡಿನ ವರೆಗೂ ಕುತೂಹಲ ಉಳಿಸಿಕೊಂಡಿದ್ದ ಪಂದ್ಯದಲ್ಲಿ ಡೆಲ್ಲಿಯನ್ನು ಮಣಿಸಿದ ಪಂಜಾಬ್‌ ತಂಡ ಗೆಲುವಿನ ನಡೆ ಬೀರಿತು.

ಪಂದ್ಯ ಗೆಲ್ಲಲು ಡೆಲ್ಲಿಗೆ ಕೊನೆಯ ಓವರ್‌ನಲ್ಲಿ 13 ರನ್‌ಗಳ ಅವಶ್ಯಕತೆ ಇತ್ತು, ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಐಯರ್‌ ಸ್ಕ್ರೀಜಿನಲ್ಲಿದ್ದರು, ಪಂಜಾಬ್‌ ಪರ ಮುಜೀಬ್ ಬೌಲ್ ಮಾಡಿದರು. ಎರಡನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಶ್ರೇಯಸ್ ಗೆಲುವಿನ ಆಸೆ ಚಿಗುರಿಸಿದರು. ಆ ನಂತರ ನಾಲ್ಕನೇ ಎಸೆತ ಬೌಂಡರಿ ಬಾರಿಸಿದರು ಆದರೆ ಕೊನೆಯ ಎಸೆತವನ್ನು ಫಿಂಚ್‌ಗೆ ಕ್ಯಾಚಿತ್ತು ಪೆಚ್ಚು ಮೋರೆ ಹಾಕಿಕೊಂಡು ಪೆವಿಲಿಯನ್‌ಗೆ ನಡೆದರು.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಡೇರ್‌ ಡೆವಿಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು, ಡೆಲ್ಲಿ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್‌ಗಳು ಪಂಜಾಬ್‌ ಅನ್ನು 143 ರನ್‌ಗಳಿಗೆ ಕಟ್ಟಿ ಹಾಕಿದರು.

ಪಂಜಾಬ್‌ ಪರ ಕರುನ್ ನಾಯರ್ 34 , ಕೆ.ಎಲ್. ರಾಹುಲ್ 23, ಮಯಾಂಕ್ ಅಗರ್ವಾಲ್ 26 ಹಾಗೂ ಮಿಲ್ಲರ್ ವೇಗದ 26 ರನ್ ಗಳಿಸಿದರು. ಡೆಲ್ಲಿ ಪರ ಪ್ಲಂಕೆಟ್ 3 ವಿಕೆಟ್, ಬೋಲ್ಟ್ ಹಾಗೂ ಅವೆಶ್ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನು ಹತ್ತಿದ ಡೆಲ್ಲಿ ತಂಡ ತನ್ನ ಕಳಪೆ ಬ್ಯಾಟಿಂಗ್‌ನಿಂದ ಇಂದೂ ಹೊರ ಬರಲಿಲ್ಲ, ಗಂಭೀರ್ ಮತ್ತೆ ನಿರಾಸೆ ಮೂಡಿಸಿದರು ಅವರು ಕೇವಲ 4 ರನ್‌ಗೆ ಪೆವಿಲಿಯನ್ ಸೇರಿದರು. ಮ್ಯಾಕ್ಸ್‌ವೆಲ್ ಸಹ 12 ರನ್ ಗಳಿಸಿ ಔಟಾದರು. ಕೊನೆಯ ವರೆಗೆ ಹೋರಾಟ ನಡೆಸಿದ ಶ್ರೇಯಸ್ ಐಯರ್ 45 ಎಸೆತದಲ್ಲಿ 57 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ರಾಹುಲ್ ತಿವಾಟಿಯಾ 24 ರನ್ ಗಳಿಸಿದರು.

ಪಂಜಾಬ್ ಪರ ಅತ್ಯುತ್ತಮ ಬೌಲಿಂಗ್ ನಡೆಸಿದ ನಾಯಕ ಅಶ್ವಿನ್ ನಾಲ್ಕು ಓವರ್‌ನಲ್ಲಿ ನೀಡಿದ್ದು ಕೇವಲ 19 ರನ್ ಆದರೆ ಯಾವುದೇ ವಿಕೆಟ್ ಪಡೆಯಲಿಲ್ಲ, ಮುಜೀಬ್ ರೆಹಮಾನ್ ನಾಲ್ಕು ಓವರ್‌ನಲ್ಲಿ 25 ರನ್ ನೀಡಿ ಎರಡು ಗಳಿಸಿದರು. ರಜಪೂತ್ ಮತ್ತು ಆಂಡ್ರೂ ಟೈ ತಲಾ 2 ವಿಕೆಟ್ ಗಳಿಸಿದರು.

ತಂಡಗಳು ಹೀಗಿವೆ
ಕಿಂಗ್ಸ್ ಇಲೆವೆನ್ ಪಂಜಾಬ್:
ಕೆ.ಎಲ್. ರಾಹುಲ್, ಆರೋನ್ ಫಿಂಚ್, ಮಯಂಕ್ ಅಗರ್‌ವಾಲ್, ಕರುಣ್ ನಾಯರ್, ಡೇವಿಡ್ ಮಿಲ್ಲರ್, ಯುವರಾಜ್ ಸಿಂಗ್, ರವಿಚಂದ್ರನ್ ಅಶ್ವಿನ್, ಆಂಡ್ರೂ ಟೈ, ಬರೀಂದರ್ ಸ್ರಾನ್, ಅಂಕಿತ್ ರಜಪೂತ್, ಮುಜೀಬ್ ಉರ್ ರೆಹಮಾನ್

ಡೆಲ್ಲಿ ಡೇರ್‌ ಡೆವಿಲ್ಸ್: ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್, ರಿಶಬ್ ಪಂತ್, ಗ್ಲೆನ್ ಮ್ಯಾಕ್ಸ್‌ವೆಲ್‌, ರಾಹುಲ್ ತೆವಾಟಿಯಾ, ಡೇನಿಯಲ್ ಕ್ರಿಶ್ಚಿಯನ್, ವಿಜಯ್ ಶಂಕರ್, ಶಹಬಾಜ್ ನದೀಮ್, ಲಿಯಾಮ್ ಪ್ಲಂಕೆಟ್, ಹರ್ಷಲ್ ಪಟೇಲ್, ಟ್ರೆಂಟ್ ಬೌಲ್ಟ್.

Story first published: Monday, April 23, 2018, 23:48 [IST]
Other articles published on Apr 23, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+