ಇದಾಗಿ(ಲ್ಲ)ದ್ದಿದ್ದರೆ ಐಯರ್ ಯುವಪಡೆ ಡೆಲ್ಲಿಯೇ ಗೆಲ್ಲುತ್ತಿತ್ತು

ಪುಣೆ, ಮೇ 1: ಸೋಮವಾರದ ಪಂದ್ಯವನ್ನು ಡೆಲ್ಲಿ ಸೋತಿತಾದರೂ ಅನುಭವಿಗಳಿದ್ದ ಚೆನ್ನೈ ತಂಡಕ್ಕೆ ಉತ್ತಮ ಪೈಪೋಟಿಯನ್ನೇ ನೀಡಿ ಗಮನ ಸೆಳೆಯಿತು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 211 ರನ್ ಗುರಿಯನ್ನು ತಲುಪಲಾಗದೆ ಡೆಲ್ಲಿ 13 ರನ್ ಗಳಿಂದ ಸೋಲುವಲ್ಲಿ ಒಂದಿಷ್ಟು ಕಾರಣಗಳಿವೆ.
ವಿಕೆಟ್ ಕಾಯ್ದುಕೊಳ್ಳುವಲ್ಲಿ ವಿಫಲ
ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಿಕೆಟ್ ಕಾಯ್ದುಕೊಳ್ಳುವಲ್ಲಿ ಹೆಣಗಾಡಿತು. ಆರಂಭದಿಂದಲೂ ಶ್ರೇಯಸ್ ಐಯರ್ ಮುಂದಾಳತ್ವದ ಡೆಲ್ಲಿ ತಂಡಲ್ಲಿ ಹೆಚ್ಚು ಹೊತ್ತು ವಿಕೆಟ್ ಕಾಯ್ದುಕೊಳ್ಳುವಲ್ಲಿ ಸಫಲವಾಗಲಿಲ್ಲ. ಬೇಗನೆ ವಿಕೆಟ್ ಉರುಳುತ್ತಾ ಸಾಗಿದ್ದು ಒಂದು ರೀತಿಯಲ್ಲಿ ಯುವಕರು ಹೆಚ್ಚಿದ ಡೆಲ್ಲಿ ತಂಡವನ್ನು ಕಟ್ಟಿ ಹಾಕಿತು.
ಜಾಣತನದ ಆಟ ಆಡಲಿಲ್ಲ
ಡೆಲ್ಲಿ ತಂಡ ಆರಂಭದಿಂದಲೂ ಜಾಣತನದ ಮತ್ತು ಕರಾರುವಕ್ಕಾದ ಆಟ ಆಡುವಲ್ಲಿ ಎಡವಿತು. ಕಾಲಿನ್ ಮುನ್ರೋ (26) ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೂ ಹೆಚ್ಚು ಹೊತ್ತು ನಿಲ್ಲದೆ ಆಸಿಫ್ ಬೌಲಿಂಗ್ ವೇಳೆ ಕ್ಯಾಚಿತ್ತು ಹೊರ ನಡೆದರು. ಪೃಥ್ವಿ ಶಾ, ಗ್ಲೆನ್ ಮ್ಯಾಕ್ಸ್ ವೆಲ್, ಶ್ರೇಯಸ್ ಐಯರ್ ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಶ್ರೇಯಸ್ ರನೌಟ್
ನಾಯಕ ಶ್ರೇಯಸ್ ನಿಂತಿದ್ದರೆ ಪಂದ್ಯ ತಿರುವು ಪಡೆಯುವ ಸಾಧ್ಯತೆಯೂ ಇತ್ತು. ಆದರೆ ಐಯರ್ ವಾಟ್ಸನ್ ಓವರ್ ವೇಳೆ ಚೆನ್ನೈ ನಾಯಕ, ವಿಕೆಟ್ ಕೀಪರ್ ದೋನಿಯಿಂದ ರನೌಟ್ ಗೆ ಒಳಗಾದರು. ಆಗ 14 ಎಸೆತ ಎದುರಿಸಿದ್ದ ಐಯರ್ ಪೇರಿಸಿದ್ದು ಕೇವಲ 13 ರನ್ ಮಾತ್ರ.
ವಾಟ್ಸನ್, ಧೋನಿ ಆರ್ಭಟ
ಅನುಭವಿ ಆಟಗಾರರಾದ ವಾಟ್ಸನ್ (78/40), ಧೋನಿ (51/22) ಅಬ್ಬರಿಸುವ ಮೂಲಕ ಚೆನ್ನೈಗೆ ರನ್ ಕೊಡುಗೆ ನೀಡಿ ತಂಡ ಗೆಲ್ಲುವಲ್ಲಿ ಹೆಚ್ಚು ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications