ಮುಂದಿನ ಸಲ ಕಪ್ ನಮ್ದೇ-ಆರ್ ಸಿಬಿ ಪರ ಟ್ರಾಲ್ ಪುಟಗಳ ಬ್ಯಾಟಿಂಗ್ !

ಬೆಂಗಳೂರು, ಮೇ 06: ಆರ್ ಸಿಬಿ ಸೋಲಲಿ, ಗೆಲ್ಲಲಿ ಅಭಿಮಾನಿಗಳು ತಂಡವನ್ನು ಕೈ ಬಿಟ್ಟಿಲ್ಲ, ಸೋತ ತಂಡದ ನಾಯಕ ಕೊಹ್ಲಿಯನ್ನು ಹೀಯಾಳಿಸುವವರ ವಿರುದ್ಧ ದನಿಯೆತ್ತಿದ್ದಾರೆ. ಈ ಸಲ ಕಪ್ ಗೆಲ್ಲದಿದ್ದರೆ, ಮುಂದಿನ ಸಲ ಗೆಲ್ಲುತ್ತಾರೆ, ಮುಂದಿನ ಸಲ ಕಪ್ ನಮ್ದೇ ಎಂದು ಟ್ರಾಲ್ ಪೇಜ್ ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಬೆಂಬಲಿಸಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಪ್ರಮುಖ ತಂಡ ಆರ್ ಸಿಬಿ ಸೋಲಿನ ಸುಳಿಯಿಂದ ಹೊರಬರಲು ಆಗದೆ ಮತ್ತೊಮ್ಮೆ ಟ್ರಾಲ್ ಪುಟಗಳಿಗೆ ಆಹಾರ ಒದಗಿಸುತ್ತಿದೆ. ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಫ್ಯಾನ್ಸ್ ಗಳು ಹತಾಶೆಯಿಂದ ಮುಂದಿನ ಸಲ ಅಥವಾ ನೆಕ್ಸ್ಟ್ ಸಲ ಕಪ್ ನಮ್ದೇ ಎನ್ನುವಂತಾಗಿದೆ.
ಐಪಿಎಲ್ 2018ರ ವಿಶೇಷ ಪುಟ | ಅಂಕಪಟ್ಟಿ | ಆರ್ ಸಿಬಿ ವೇಳಾಪಟ್ಟಿ
ಆರ್ ಸಿಬಿ ತಂಡದ ಬೌಲಿಂಗ್ ಯಾವತ್ತಿಗೂ ದುರ್ಬಲ ಎಂಬ ಮಾತು ಸುಳ್ಳು ಎಂದು ಸಾಬೀತು ಪಡಿಸಲು ನಾಯಕ ವಿರಾಟ್ ಕೊಹ್ಲಿಗೆ ಇನ್ನೂ ಆಗಿಲ್ಲ. ಅಲ್ಲದೆ, ಕೋಚ್ ವೆಟ್ಟೋರಿ ಹಾಗೂ ಕೊಹ್ಲಿ, ಆಡುವ ಹನ್ನೊಂದು ಆಯ್ಕೆ ಬಗ್ಗೆ ಕೂಡಾ ಟೀಕೆಗಳು ಬಂದಿವೆ.
ಜೊತೆಗೆ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಕೂಡಾ ಟೀಕೆಗಳು ಕೇಳಿ ಬಂದಿವೆ. ಒಟ್ಟಾರೆ, ಟ್ವಿಟ್ಟರ್ ನಲ್ಲಿ ಈ ಬಾರಿ ಆರ್ ಸಿಬಿ, ಕೊಹ್ಲಿ ಪರ ಟ್ವೀಟ್ಸ್ ಹೆಚ್ಚಾಗಿದ್ದರೆ, ಟ್ರಾಲ್ ಪುಟಗಳಲ್ಲಿ ಮಾತ್ರ ಆರ್ ಸಿಬಿ ಕಾಲೆಳೆತ ಮುಂದುವರೆದಿದೆ.

ನೆಕ್ಸ್ಟ್ ಸಲ ಕಪ್ ನಮ್ದೇ ಎನ್ನುವಂತಾಗಿದೆ
ಆರ್ ಸಿಬಿ ಸೋಲಲಿ, ಗೆಲ್ಲಲಿ ಅಭಿಮಾನಿಗಳು ತಂಡವನ್ನು ಕೈ ಬಿಟ್ಟಿಲ್ಲ, ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಫ್ಯಾನ್ಸ್ ಗಳು ಹತಾಶೆಯಿಂದ ಮುಂದಿನ ಸಲ ಅಥವಾ ನೆಕ್ಸ್ಟ್ ಸಲ ಕಪ್ ನಮ್ದೇ ಎನ್ನುವಂತಾಗಿದೆ.

ಆರ್ ಸಿಬಿ ಫ್ಯಾನ್ಸ್ ಕಥೆ
ಎಲ್ಲರ ಹತ್ತಿರ ಈ ಸಲ ಕಪ್ ನಮ್ದೇ ಎಂದು ಹೇಳಿಕೊಂಡು ಬಂದಿದ್ದೆ. ಈಗ ಹೆಂಗ್ ಗುರು ಮುಖ ತೋರಿಸೋದು ಎಂದು ದೇವೇಗೌಡರ ಚಿತ್ರ ಬಳಸಿ ಮಾರ್ಮಿಕವಾಗಿ ಮಾಡಿರುವ ಟ್ರಾಲ್.

ಈ ಸಲ ಕಪ್ ಎನ್ನೋದು ಮತ್ತೆ ಟ್ರಾಲ್
ರಿತಿಕಾ ಕಾಫಿ ಕೊಡು ಎಂದು ರೋಹಿತ್ ಶರ್ಮ ಕೇಳಿದಾಗ, ರಿತಿಕಾ ಕೊಡುವ ಉತ್ತರ-2013,2015 ಅಥವಾ 2017 ಯಾವ ಕಪ್ ನಲ್ಲಿ ನೀಡಲಿ.
ಇದೇ ಪ್ರಶ್ನೆ ಧೋನಿ ತಮ್ಮ ಪತ್ನಿಗೆ ಕೇಳಿದಾಗ-2010 ಅಥವಾ 2011 ಯಾವ ಕಪ್ ನಲ್ಲಿ ನೀಡಲಿ ಎನ್ನುತ್ತಾರೆ
ಅದೇ ಅನುಷ್ಕಾ ಕಾಫಿ ಕೊಡು- ಎಂದರೆ-ಫಸ್ಟ್ ಹೋಗಿ ಕಪ್ ತಗೊಂಡು ಬಾ

ಮನೆ ಕಡೆ ಹೋಗಿ
ಮನೆ ಕಡೆ ಹೋಗಿ-ಒಂದು ಕೆಲ್ಸ ಮಾಡಿ ಮುಂದೆ ಹೋಗಿ ರೈಟ್ ತಗೊಂಡು ಸ್ಟ್ರೈಟ್ ಹೋಗಿ ಎಂದು ಪಾರ್ಥೀವ್ ಪಟೇಲ್ ಗೆ ದಾರಿ ತೋರಿಸುತ್ತಿರುವ ಧೋನಿ

ಆರ್ ಸಿಬಿ ಮೇಲೆ ಫ್ಯಾನ್ಸ್ ಭರವಸೆ
ಆರ್ ಸಿಬಿ ಮೇಲೆ ಫ್ಯಾನ್ಸ್ ಭರವಸೆ ಎಷ್ಟಿರುತ್ತದೆ. ಅವರು ಅದಕ್ಕೆ ಎಷ್ಟು ಪ್ರತಿಫಲ ನೀಡುತ್ತಿದ್ದಾರೆ ನೋಡಿ

ಮುಂದಿನ ಸಲ ಕಪ್ ನಮ್ದೇ ಎಂದು ಹೇಳಿಬಿಡಿ
ಮುಂದಿನ ಸಲ ಕಪ್ ನಮ್ದೇ ಎಂದು ಹೇಳಿಬಿಡು ಮಚ್ಚಾ ಎಂದು ಕೊಹ್ಲಿಗೆ ಎಬಿಡಿ ಡೈಲಾಗ್

ಇದು ವಿರುಷ್ಕಾಗೆ ಅಭಿಮಾನಿಯ ಪ್ರಶ್ನೆ
ವಿರಾಟ್ ಜ್ಯೂನಿಯರ್ ಬಗ್ಗೆ ಏನಾದರೂ ಪ್ಲ್ಯಾನ್ ಮಾಡಿದ್ದಾರಾ ವಿರುಷ್ಕಾ ಎಂದು ಕೇಳಿದ ಫ್ಯಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications