ಬೇಡದ ದಾಖಲೆ ಬರೆಯುತ್ತಿರುವ ಯುವರಾಜ್ ಸಿಂಗ್!

ಬೆಂಗಳೂರು, ಮೇ 08: ಭಾರತದ ಹಿರಿಯ ಕ್ರಿಕೆಟರ್, ಆಲ್ ರೌಂಡರ್, ಟಿ20 ಸ್ಪೆಷಲಿಸ್ಟ್ ಯುವರಾಜ್ ಸಿಂಗ್ ಅವರು ಈ ಬಾರಿ ಐಪಿಎಲ್ ನಲ್ಲಿ ಆಡುವುದೇ ಅನುಮಾನ ಎಂದುಕೊಳ್ಳುವ ಹೊತ್ತಿಗೆ 2 ಕೋಟಿ ರು ನೀಡಿ ಪಂಜಾಬ್ ತಂಡ ತನ್ನ ಹೆಮ್ಮೆಯ ಪುತ್ರನನ್ನು ತಂಡಕ್ಕೆ ಸೇರಿಸಿಕೊಂಡಿತು.
ಆದರೆ, ಐಪಿಎಲ್ 2018ರಲ್ಲಿ ಯುವರಾಜ್ ತಮ್ಮ ಎಂದಿನ ಲಯ ಕಂಡುಕೊಳ್ಳಲು ಆಗದೆ ಹೆಣಗಾಡುತ್ತಿದ್ದು, ಸದ್ಯ ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.
ಐಪಿಎಲ್ 2018 ಅಂಕಪಟ್ಟಿ | ಐಪಿಎಲ್ ವಿಶೇಷ ಪುಟ
2019ರ ವಿಶ್ವಕಪ್ ತಂಡಕ್ಕೆ ಮರಳುವ ಆಸೆ ಇನ್ನೂ ಜೀವಂತ ಇರಿಸಿಕೊಂಡಿದ್ದ ಯುವರಾಜ್ ಅವರಿಗೆ ಫಿಟ್ನೆಸ್ ಸಮಸ್ಯೆ ಜೊತೆಗೆ ಐಪಿಎಲ್ ನ ಕಳಪೆ ಪ್ರದರ್ಶನ ಮುಳುವಾಗಲಿದೆ.
ಕಿಂಗ್ಸ್ XI ಪಂಜಾಬ್ ಪರ ಬ್ಯಾಟ್ ಬೀಸುತ್ತಿರುವ 36 ವರ್ಷ ವಯಸ್ಸಿನ ಯುವರಾಜ್ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಳೆದ ಎರಡು ಪಂದ್ಯದಲ್ಲೂ ಮೈದಾನಕ್ಕಿಳಿದಿಲ್ಲ.
ಕಳಪೆ ಸ್ಟ್ರೈಕ್ ರೇಟ್ : ಸದ್ಯ 7 ಪಂದ್ಯಗಳಲ್ಲಿ 5 ಬಾರಿ ಬ್ಯಾಟಿಂಗ್ ಅವಕಾಶ ಪಡೆದ ಯುವರಾಜ್ ಸಿಂಗ್ ಅವರು 64ರನ್ ಗಳಿಸಿದ್ದು, ಕೇವಲ 6 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 91.43 ನಷ್ಟಿದ್ದು, ಇದು ಈ ಸೀಸನ್ ನಲ್ಲಿ ಬ್ಯಾಟ್ಸ್ ಮನ್ ರೊಬ್ಬರು(ಕನಿಷ್ಠ 50 ಎಸೆತಗಳನ್ನು ಎದುರಿಸುವವರ ಪೈಕಿ) ಗಳಿಸಿದ ಅತ್ಯಂತ ಕಳಪೆ ಸ್ಟ್ರೈಕ್ ರೇಟ್ ಎನಿಸಿಕೊಂಡಿದೆ.
ಸ್ಫೋಟಕ ಬ್ಯಾಟ್ಸ್ ಮನ್ ಅರೋನ್ ಫಿಂಚ್ ಅವರು ಸತತ ಸೊನ್ನೆ ಸುತ್ತಿದರೂ 5 ಇನ್ನಿಂಗ್ಸ್ ಗಳಿಂದ 150 ಸ್ಟ್ರೈಕ್ ರೇಟ್ ನಂತೆ 24ರನ್ ಗಳಿಸಿದ್ದಾರೆ. ಕನ್ನಡಿಗ ಲೋಕೇಶ್ ರಾಹುಲ್ ಅವರು 9 ಪಂದ್ಯಗಳ ನಂತರ 162.77ಸ್ಟ್ರೈಕ್ ರೇಟ್(ತಂಡದಲ್ಲಿ ಅತಿ ಹೆಚ್ಚು) ನಂತೆ 376ರನ್ ಗಳಿಸಿದ್ದು, ಅತಿಹೆಚ್ಚು ಬೌಂಡರಿ 42 ಗಳಿಸಿದ್ದಾರೆ, 17 ಸಿಕ್ಸ್ ಸಿಡಿಸಿದ್ದು, ಗೇಲ್ 25 ಸಿಕ್ಸ್ ಬಾರಿಸಿದ್ದಾರೆ.
2017ರಲ್ಲಿ 12 ಪಂದ್ಯಗಳನ್ನಾಡಿದ್ದ ಯುವರಾಜ್, 11 ಇನ್ನಿಂಗ್ಸ್ ನಿಂದ 142.37ಸ್ಟ್ರೈಕ್ ರೇಟ್ ನಂತೆ 252ರನ್ ಗಳಿಸಿದ್ದರು. ಗರಿಷ್ಠ ಅಜೇಯ 70ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications