#ESCN ನಮ್ಗೆ ಸಪೋರ್ಟ್ ಮಾಡಿ ಎಂದ ಉತ್ತಪ್ಪ, ಕೃಷ್ಣ

ಬೆಂಗಳೂರು, ಮೇ 20: ಈ ಸಲ ಕಪ್ ನಮ್ದೆ (#ESCN) ಬಹುಶಃ ಐಪಿಎಲ್ 2018ರಲ್ಲಿ ಅತಿ ಹೆಚ್ಚು ಟ್ರೆಂಡ್ ಆದ ಘೋಷವಾಕ್ಯ ಎನ್ನಬಹುದು. ಕಪ್ ನಮ್ದೇ ಎಂದ ಆರ್ ಸಿಬಿಗೆ ಕಪ್ ಸಿಗಲಿಲ್ಲ.
ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಟ್ಯಾಗ್ ಇನ್ನೂ ಗಿರಕಿ ಹೊಡೆಯುತ್ತಲೇ ಇದೆ. ಈಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುತ್ತಿರುವ ಕನ್ನಡಿಗರಾದ ರಾಬಿನ್ ಉತ್ತಪ್ಪ ಹಾಗೂ ಪ್ರಸಿಧ್ ಕೃಷ್ಣ ಅವರು #ESCN ಎಂದಿದ್ದಾರೆ.
ಈ ಮುಂಚೆ ಕಿಂಗ್ಸ್ ಎಲೆವನ್ ಪಂಜಾಬ್ ನಲ್ಲಿ ಆಡುತ್ತಿರುವ ಕರ್ನಾಟಕದ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರು ವಿಡಿಯೋ ಸಂದೇಶದ ಮೂಲಕ ಕಪ್ ನಮ್ದೇ ಎಂದಿದ್ದರು. ಆದರೆ, ನಂತರ ಸಾಲು ಸಾಲು ಪಂದ್ಯ ಸೋತಿರುವ ಪಂಜಾಬ್ ಪ್ಲೇ ಆಫ್ ಹಂತಕ್ಕೇರುವುದು ಕಷ್ಟಕರವಾಗಿದೆ.
ಈ ಬಾರಿಯ ಹರಾಜಿನಲ್ಲಿ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರನ್ನು ಕಿಂಗ್ಸ್ ಇಲೆವೆನ್ ಫ್ರಾಂಚೈಸಿ ಖರೀದಿಸಿತ್ತು. ಇವರಿಬ್ಬರಲ್ಲದೆ, ಕರ್ನಾಟಕದ ಮಯಾಂಕ್ ಅಗರವಾಲ್ ಅವರು ಕೂಡಾ ಪಂಜಾಬ್ ಪರ ಆಡುತ್ತಿದ್ದಾರೆ.
ಅದೇ ರೀತಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಹಾಗೂ ವೇಗಿ ಪ್ರಸಿಧ್ ಕೃಷ್ಣ ಅವರು ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೆಕೆಆರ್ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿದೆ.
"ಈ ಸಲ ಕಪ್ ನಮ್ದೆ/Ee Sala Cup Namde" v3, KKR edition feat. @robbieuthappa & @prasidh43. #IPL2018 pic.twitter.com/Seu2sK0mIV
— Karnataka Ranji Team/ ಕರ್ನಾಟಕ ರಣಜಿ ತಂಡ (@RanjiKarnataka) May 20, 2018
ವಿಡಿಯೋದಲ್ಲಿ ಏನಿದೆ?
ರಾಬಿನ್ ಉತ್ತಪ್ಪ ಮೈಕ್ ಹಿಡಿದಿರುತ್ತಾರೆ: ಪ್ರಸಿಧ್ ಕೃಷ್ಣ ಮಾತನಾಡುತ್ತಾ, ಆರ್ ಸಿಬಿ ಇವಾಗ ಇಲ್ಲ, ನಮ್ ಟೀಮ್ ನಲ್ಲಿ ಕರ್ನಾಟಕದವರು ತುಂಬಾ ಇದ್ದಾರೆ, ನಿಮ್ಮ ಸಪೋರ್ಟ್ ಮುಖ್ಯ ಎನ್ನುತ್ತಾರೆ. ನಂತರ ರಾಬಿನ್ ಮಾತನಾಡಿ, ಕರ್ನಾಟಕದವರೇ ಕೇಳಿಸಿಕೊಂಡ್ರಾ, ಈ ಸಲ ಕಪ್ ನಮ್ದೇ ಎನ್ನುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications