Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

#ESCN ! ಮೆಕಲಮ್ ಜತೆ ಸೆಲ್ಫಿ ತೆಗೆದುಕೊಂಡ ಕನ್ನಡತಿ ವೇದಾ

IPL 2018 : Veda Krishnamurthy selfie with Brendon McCullum

ಬೆಂಗಳೂರು, ಏಪ್ರಿಲ್ 15: ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್, ಸ್ಫೋಟಕ ಆಟಗಾರ್ತಿ, ಕಡೂರಿನ ವೇದಾ ಕೃಷ್ಣಮೂರ್ತಿ ಅವರು ಸಕತ್ ಖುಷಿಯಲ್ಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಅವರನ್ನು ಭೇಟಿ ಮಾಡಿದ್ದಾರೆ.

ಮೆಕಲಮ್ ಅವರನ್ನು ಭೇಟಿ ಮಾಡಿ, ಇನ್ಸ್ಟಾ ಗ್ರಾಮ್ ನಲ್ಲಿ ಸೆಲ್ಫಿ ಫೋಟೊ ಹಾಕಿದ್ದಾರೆ. ಬ್ರೆಂಡನ್ ಮೆಕಲಮ್ ಜತೆ ಹಾಸ್ಯಮಯ ಸಮಯವನ್ನು ಕಳೆದೆ. ನಿಮ್ಮೊಂದಿಗೆ ಭೇಟಿ ಚೆನ್ನಾಗಿತ್ತು. ಟೂರ್ನಮೆಂಟ್ ನ ಮಂದಿನ ಪಂದ್ಯಗಳಿಗೆ ನಿಮಗೆ ಶುಭಹಾರೈಕೆ. ಈ ಸಲ ಕಪ್ ನಮ್ದೆ! (#escn = Ee sala cup namde) ಎಂದು ಸಂದೇಶ ಹಾಕಿದ್ದಾರೆ. ಇದಕ್ಕೆ ಬ್ರೆಂಡನ್ ಮೆಕಲಮ್ ಕೂಡಾ ಪ್ರತಿಕ್ರಿಯಿಸಿದ್ದು, ನಿಮ್ಮ ಜತೆಗಿನ ಭೇಟಿ ಹಿತವಾಗಿತ್ತು, ಇನ್ನೊಮ್ಮೆ ಸಿಗೋಣ ಎಂದಿದ್ದಾರೆ.

IPL 2018 : Veda Krishnamurthy selfie with Brendon McCullum

ಯುವ ಆಟಗಾರ್ತಿಯಾಗಿ ಭಾರತ ತಂಡದಲ್ಲಿ ಆಡುವ ವೇದಾ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಮೂರು ಪಂದ್ಯಗಳಿಂದ ಕೇವಲ 24ರನ್ ಮಾತ್ರ ಗಳಿಸಿದ್ದರು. ಆರ್ ಸಿಬಿ ತನ್ನ ತವರು ನೆಲದಲ್ಲಿ ಪಂದ್ಯಗಳನ್ನಾಡುತ್ತಿರುವುದರಿಂದ ತಂಡವನ್ನು ಹುರಿದುಂಬಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.

IPL 2018 : Veda Krishnamurthy selfie with Brendon McCullum

ಐಪಿಎಲ್ 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಭಾನುವಾರದಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೆಣೆಸಲಿದೆ. ಮೆಕಲಮ್ ಅವರು ಕೆಕೆಆರ್ ವಿರುದ್ಧ 43ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ನಿರಾಶೆ ಮೂಡಿಸಿದ್ದರು.

Story first published: Sunday, April 15, 2018, 15:03 [IST]
Other articles published on Apr 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+