ಪಂದ್ಯ ಆರಂಭಕ್ಕೂ ಮುನ್ನ, ಮುಂಬೈ- ಚೆನ್ನೈ ನಡುವಿನ ಹೆಡ್ To ಹೆಡ್ ರೆಕಾರ್ಡ್ ನೋಡಿ
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್- ಚೆನ್ನೈ ಸೂಪರ್ ಕಿಂಗ್ಸ್ ಕಾದಾಟಕ್ಕೆ ರೆಡಿಯಾಗಿವೆ. ನಾಲ್ಕು ಬಾರಿಯ ಚಾಂಪಿಯನ್ ಹಾಗೂ ಮೂರು ಬಾರಿಯ ಚಾಂಪಿಯನ್‌ಗಳ ನಡುವಿನ ಕಾದಾಟವು ಈ ಬಾರಿ ಅಷ್ಟೇನು ಹೈವೋಲ್ಟೇಜ್ ಸೃಷ್ಟಿಸದಿದ್ರೂ, ಉಭಯ ತಂಡಗಳು ಗೆಲ್ಲುವ ಸಾಮರ್ಥ್ಯವನ್ನು ಹೊಂದಿವೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಆದರೆ ನಂತರದಲ್ಲಿ ಧೋನಿ ಪಡೆಯ ಮಕಾಡೆಯಾಗಿದೆ. ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಕನಸನ್ನು ಕೈ ಬಿಟ್ಟಿದ್ದು ಮುಂಬೈ ವಿರುದ್ಧವಾದ್ರೂ ಮತ್ತೊಂದು ಪಂದ್ಯ ಗೆಲ್ಲುತ್ತಾ ಕಾದು ನೋಡ್ಬೇಕು.

ಧೋನಿ ವಿರುದ್ಧ ರೋಹಿತ್ ಪ್ರಾಬಲ್ಯ
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಇದುವರೆಗೆ 29 ಬಾರಿ ಮುಖಾಮುಖಿಯಾಗಿವೆ. ಸಿಎಸ್‌ಕೆ ವಿರುದ್ಧ ಮುಂಬೈ ಪ್ರಾಬಲ್ಯ ಮೆರೆದಿದ್ದು 17 ಪಂದ್ಯಗಳನ್ನು ಗೆದ್ದುಕೊಂಡಿದೆ. ಸಿಎಸ್‌ಕೆ 12 ಪಂದ್ಯಗಳಲ್ಲಿ ಜಯಿಸಿದೆ.
ಇಂದು ಚೆನ್ನೈ-ಮುಂಬೈ ಮುಖಾಮುಖಿ: ಪಿಚ್ ರಿಪೋರ್ಟ್, ಸಂಭಾವ್ಯ ತಂಡ ತಿಳಿದುಕೊಳ್ಳಿ

ಕಳೆದ ಮುಂಬೈ-ಚೆನ್ನೈ ಮುಖಾಮುಖಿ
ಚೆನ್ನೈ ಹಾಗೂ ಮುಂಬೈ ನಡುವಿನ ಕಳೆದ ಪಂದ್ಯದಲ್ಲಿ ಧೋನಿ ಪಡೆ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಸಿಎಸ್‌ಕೆ (19.2 ಓವರ್‌ಗಳಲ್ಲಿ 166/5) ಎಂಐ (20 ಓವರ್‌ಗಳಲ್ಲಿ 162/9) ಅವರನ್ನು ಐದು ವಿಕೆಟ್‌ಗಳಿಂದ ಸೋಲಿಸಿತು.
ಆ ಪಂದ್ಯದಲ್ಲಿ ಅಂಬಾಟಿ ರಾಯುಡು ಅವರ 48 ಎಸೆತದಲ್ಲಿ 71 ರನ್‌ಗಳಿಸಿದ್ರು ಮತ್ತು ಫಾಫ್ ಡು ಪ್ಲೆಸಿಸ್ ಅವರ ಅಜೇಯ 58 ರನ್‌ಗಳಿಂದಾಗಿ ಚೆನ್ನೈ ಮುಂಬೈಯನ್ನು ಐದು ವಿಕೆಟ್‌ಗಳಿಂದ ಮಣಿಸಿತು.

ಉಭಯ ತಂಡಗಳ ಕಳೆದ ಐದು ಪಂದ್ಯಗಳ ಫಲಿತಾಂಶ
ಸಿಎಸ್‌ಕೆ - ತನ್ನ ಕೊನೆಯ ಐದು ಪಂದ್ಯಗಳಲ್ಲಿ ಕೇವಲ 1 ಜಯವನ್ನು ಹೊಂದಿದೆ (1: 4)
ಎಂಐ- ತನ್ನ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕು ಜಯಗಳನ್ನು ಹೊಂದಿದೆ (4: 1)
ಒಟ್ಟಾರೆಯಾಗಿ, ಮುಂಬೈ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದರೆ, ಚೆನ್ನೈ ತನ್ನ ಹೆಸರಿಗೆ ಮೂರು ಸ್ಥಾನಗಳನ್ನು ಹೊಂದಿದೆ. ಅವರು ನಾಲ್ಕು ಟೂರ್ನಮೆಂಟ್ ಫೈನಲ್‌ಗಳಲ್ಲಿ ಸ್ಪರ್ಧಿಸಿದ್ದಾರೆ, ಇದರಲ್ಲಿ ಮುಂಬೈ ಮೂರು ಬಾರಿ ಚೆನ್ನೈ ಸೋಲಿಸಿ ಫೈನಲ್ ಗೆದ್ದುಕೊಂಡಿದೆ.
ಮಹೇಂದ್ರ ಸಿಂಗ್ ಧೋನಿಯ ಈ 5 ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಕಷ್ಟ!

ಪ್ರಸಕ್ತ ಟೂರ್ನಿಯಲ್ಲಿ ಹೆಚ್ಚಿನ ರನ್‌ಗಳಿಸಿರುವ ಆಟಗಾರರು
1) ಫಾಫ್ ಡು ಪ್ಲೆಸಿಸ್ (ಸಿಎಸ್‌ಕೆ) - 375
2) ಕ್ವಿಂಟನ್ ಡಿ ಕಾಕ್ (ಮುಂಬೈ) - 322
3) ಶೇನ್ ವ್ಯಾಟ್ಸನ್ (ಸಿಎಸ್‌ಕೆ) - 285
4) ರೋಹಿತ್ ಶರ್ಮಾ (ಮುಂಬೈ) - 260
5) ಅಂಬಾಟಿ ರಾಯುಡು (ಸಿಎಸ್‌ಕೆ) - 250

ಹೆಚ್ಚಿನ ವಿಕೆಟ್ ಪಡೆದ ಬೌಲರ್ಸ್
1) ಜಸ್ಪ್ರೀತ್ ಬುಮ್ರಾ (ಮುಂಬೈ) - 15
2) ಟ್ರೆಂಟ್ ಬೌಲ್ಟ್ (ಮುಂಬೈ) - 12
3) ರಾಹುಲ್ ಚಹರ್ (ಮುಂಬೈ) - 11
4) ದೀಪಕ್ ಚಹರ್ (ಸಿಎಸ್‌ಕೆ) - 10
5) ಸ್ಯಾಮ್ ಕರ್ರನ್(ಸಿಎಸ್‌ಕೆ) - 10
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications