ಪೊಲಾರ್ಡ್ ನೀಡಿದ 'ಬ್ರೇಕ್ ದಿ ಬಿಯರ್ಡ್ ಚಾಲೆಂಜ್' ಪೂರ್ಣಗೊಳಿಸಿದ ದಿನೇಶ್ ಕಾರ್ತಿಕ್
ಮುಂಬೈ ಇಂಡಿಯನ್ಸ್ ಸ್ಫೋಟಕ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ನೀಡಿದ್ದ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ್ದ ದಿನೇಶ್ ಕಾರ್ತಿಕ್ ಪಡೆದ ಸವಾಲನ್ನು ಪೂರ್ಣಗೊಳಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಬುಧವಾರ ತಮ್ಮ ಹೊಸ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ kieron.pollard55ರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಟ್ರೆಂಡ್ ಆಗಿರುವ ಬಿಯರ್ಡ್ ಚಾಲೆಂಜ್
ದಿನೇಶ್ ಕಾರ್ತಿಕ್‌ಗೆ ಸವಾಲನ್ನು ಹಾಕುವ ಮೊದಲು ಕಿರಾನ್ ಪೊಲಾರ್ಡ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಈಗಾಗಲೇ ಐಪಿಎಲ್‌ನಲ್ಲಿ ಫೇಮಸ್ ಆಗಿರುವ ಈ ಟ್ರೆಂಡ್‌ನಲ್ಲಿ ಶಿಖರ್ ಧವನ್ ಸೇರಿದಂತೆ ಹಲವಾರು ಕ್ರಿಕೆಟಿಗರು ಚಾಲೆಂಜ್ನಲ್ಲಿ ಭಾಗವಹಿಸಿದ್ದರು.
ಅಜಿಂಕ್ಯಾ ರಹಾನೆ ಇನ್ನೆಷ್ಟು ದಿನ ಬೆಂಚ್ ಕಾಯಬೇಕು?
ಕಿರಾನ್ ಪೊಲಾರ್ಡ್ ಫ್ರೆಂಚ್ ಸ್ಟೈಲ್
ಪ್ರಸಕ್ತ ಆವೃತ್ತಿ ಐಪಿಎಲ್‌ನಲ್ಲಿ 'ಬ್ರೇಕ್ ದಿ ಬಿಯರ್ಡ್ ಚಾಲೆಂಜ್' ಅನ್ನು ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕೈರನ್ ಪೊಲಾರ್ಡ್ ಮೊದಲಾಗಿ ಆರಂಭಿಸಿದ್ದಾರೆ. ಅಕ್ಟೋಬರ್ 6ರಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯಕ್ಕೂ ಮುಂಚಿತವಾಗಿ ಪೊಲಾರ್ಡ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕುವ ನಿರ್ಧಾರಕ್ಕೆ ಬಂದಿದ್ದರು. ಸದ್ಯ ಅವರು ಗಡ್ಡಕ್ಕೆ ಕತ್ತರಿ ಹಾಕಿ ಅದನ್ನು ಫ್ರೆಂಚ್ ಸ್ಟೈಲ್ಗೆ ಬದಲಾಯಿಸಿದ್ದಾರೆ.
ಹಾರ್ದಿಕ್ ಪಾಂಡ್ಯರಿಂದ ಸ್ಫೂರ್ತಿ ಪಡೆದ ಪೊಲಾರ್ಡ್
ತನ್ನ ಸ್ನೇಹಿತ ಹಾರ್ದಿಕ್ ಪಾಂಡ್ಯ ಅವರನ್ನು ಸ್ಫೂರ್ತಿಯಾಗಿ ಪಡೆದು ಈ ಸ್ಟೈಲ್ ಮಾಡಿರುವುದಾಗಿ ಪೊಲಾರ್ಡ್ ಹೇಳಿದ್ದಾರೆ. ತನ್ನ ಸವಾಲನ್ನು ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್‌ಗೆ ಪೊಲಾರ್ಡ್ ಪಾಸ್ ಮಾಡಿದ್ದರು. ಮುಂದಿನ ಪಂದ್ಯಕ್ಕೂ ಮೊದಲು ಕಾರ್ತಿಕ್ ಗಡ್ಡಕ್ಕೆ ಕತ್ತರಿ ಹಾಕುವಂತೆ ಪೊಲಾರ್ಡ್ ಚಾಲೆಂಜ್ ಮಾಡಿದ್ದರು. ಅಂತೆಯೇ ಕಾರ್ತಿಕ್ ಸವಾಲನ್ನು ಪೂರ್ಣಗೊಳಿಸಿದ್ದಾರೆ.

ಐಪಿಎಲ್‌ನಲ್ಲಿ ಹೊಸ ಟ್ರೆಂಡ್ ಮಾಡುವ ಹಾರ್ದಿಕ್
ಐಪಿಎಲ್ ಇತಿಹಾಸದಲ್ಲಿ ಒಮ್ಮೆ ಮೆಲುಕು ಹಾಕಿದರೆ ಹಾರ್ದಿಕ್ ಪಾಂಡ್ಯ ಐಪಿಎಲ್ ಟ್ರೆಂಡ್ ಸೆಟ್ ಮಾಡುವ ಪ್ಲೇಯರ್‌ಗಳಲ್ಲಿ ಒಬ್ಬ. ಅನೇಕ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿಭಿನ್ನ ಹೇರ್‌ಸ್ಟೈಲ್ ಮತ್ತು ಕಾಸ್ಟೂಮ್ ಫಾಲೋ ಮಾಡುತ್ತಾರೆ. ತಮ್ಮ ವಿಭಿನ್ನ ಅಭಿರುಚಿಯಿಂದ ಕೆರಿಬಿಯನ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುವ ಭಾರತೀಯ ಕ್ರಿಕೆಟರ್ ಎಂದೇ ಹಾರ್ದಿಕ್ ಫೇಮಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications