ಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ?

ಈ ಬಾರಿಯ ಐಪಿಎಲ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಅಭಿಮಾನಿಗಳಲ್ಲಿ ಐಪಿಎಲ್ ಜ್ವರ ಈಗಾಗಲೆ ಆವರಿಸಿಕೊಂಡಿದೆ. ತಂಡಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳತ್ತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಐಪಿಎಲ್‌ನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಮಾರ್ಚ್ 29ಕ್ಕೆ ಮೊದಲ ಪಂದ್ಯ ಎನ್ನುವುದನ್ನು ಈಗಾಗಲೇ ನಿರ್ಧರಿಸಲಾಗಿತ್ತು. ಆದರೆ ವೇಳಾಪಟ್ಟಿಯಿನ್ನೂ ಬಿಡುಗಡೆಗೊಂಡಿರಲಿಲ್ಲ. ಇದೀಗ ವೇಳಾಪಟ್ಟಿಯೂ ಬಿಡುಗಡೆಯಾಗಿದೆ. ಯಾವೆಲ್ಲಾ ತಂಡಗಳು ಯಾವಾಗ ಕಾದಾಟವನ್ನು ನಡೆಸಲಿದೆ ಎನ್ನುವ ಕುತೂಹಲಕ್ಕೆ ಸ್ಪಷ್ಟತೆ ಸಿಕ್ಕಿದೆ
ಹಾಗಾದರೆ ವೇಳಾಪಟ್ಟಿಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಬನ್ನಿ ನೋಡೋಣ:

ಆರಂಭಿಕ ಪಂದ್ಯದಲ್ಲಿ ಯಾರು
ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯದ ಆತಿಥ್ಯವನ್ನು ಮುಂಬೈನಲ್ಲಿ ಆಯೋಜನೆಗೊಳಿಸಲಾಗುತ್ತಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ. ಕಳೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಮುಂಬೈ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಆರ್‌ಸಿಬಿ ಪಂದ್ಯ ಆರಂಭ ಯಾವಾಗ
ಅಭಿಮಾನಿಗಳ ಪ್ರೀತಿಯ ತಂಡ ಆರ್‌ಸಿಬಿ ಯಾವಾಗ ಯಾರನ್ನು ಎದುರಿಸಲಿದೆ ಎಂಬುದಕ್ಕೂ ಉತ್ತರ ಸಿಕ್ಕಿದೆ. ಮಾರ್ಚ್ 31ಕ್ಕೆ ಆರ್‌ಸಿಬಿ ತಂಡ ಚಿನ್ನಸ್ವಾಮಿಯಲ್ಲಿ ಕಳಕ್ಕಿಳಿಯಲಿದೆ. ಆರ್‌ಸಿಬಿಗೆ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಎದುರಾಳಿಯಾಗಿರಲಿದೆ.
ಲೋಗೋ ಬಳಿಕ ಆರ್‌ಸಿಬಿ ಹೊಸ ಜರ್ಸಿ ಬಿಡುಗಡೆ; ಇಷ್ಟಕ್ಕೇ ಅಂತ್ಯವಾಗಿಲ್ಲ ಆರ್‌ಸಿಬಿ ಕ್ವಾಟ್ಲೆ

ಶನಿವಾರವೂ ಒಂದೇ ಪಂದ್ಯ
ಪ್ರತೀ ಆವೃತ್ತಿಯಲ್ಲೂ ವಾರಾಂತ್ಯಕ್ಕೆ ಎರಡು ಪಂದ್ಯಗಳನ್ನು ಇಡಲಾಗುತ್ತಿತ್ತು. ಶನಿವಾರ ಮತ್ತು ಭಾನುವಾರಗಳಂದು ಒಂದು ಪಂದ್ಯ ಮಧ್ಯಾಹ್ನ 4 ಗಂಟೆಗೆ ಆರಂಭವಾದರೆ ಎರಡನೇ ಪಂದ್ಯ 8 ಗಂಟೆಗೆ ಆರಂಭವಾಗುತ್ತಿತ್ತು. ಆದರೆ ಈ ಆವೃತ್ತಿಯಲ್ಲಿ ಶನಿವಾರ ಒಂದೇ ಪಂದ್ಯವನ್ನು ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಭಾನುವಾರ ಮಾತ್ರವೇ ಎರಡು ಪಂದ್ಯಗಳು ಇರಲಿದೆ.

ಮೇ 17 ಕೊನೆಯ ಲೀಗ್
ಐಪಿಎಲ್ 13ನೇ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯ ಮೇ 13ರಂದು ನಡೆಯಲಿದೆ. ಕೊನೆಯ ಲೀಗ್ ಪಂದ್ಯದ ಆತಿಥ್ಯವನ್ನು ಬೆಂಗಳೂರು ವಹಿಸಿಕೊಳ್ಳಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಐಪಿಎಲ್ ಹರಾಜು; ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು?

ಮೇ 24ಕ್ಕೆ ಫೈನಲ್
ಫೈನಲ್ ಪಂದ್ಯ ಮೇ 24 ರಂದು ನಡೆಯಲಿದೆ. ಈ ಫೈನಲ್ ಪಂದ್ಯದ ಆತಿಥ್ಯವನ್ನು ವಾಂಖೆಡೆ ಕ್ರೀಡಾಂಗಣ ವಹಿಸಿಕೊಳ್ಳಲಿದೆ. ಈ ಮೂಲಕ ಐಪಿಎಲ್ 13ನೇ ಆವೃತ್ತಿಗೆ ತೆರೆಬೀಳಲಿದೆ. ಈ ಬಾರಿಯ ಆರಂಭಿಕ ಮತ್ತು ಕೊನೆಯ ಎರಡೂ ಪಂದ್ಯಗಳಿಗೂ ಮುಂಬೈನ ವಾಂಖೆಡೆ ಸಾಕ್ಷಿಯಾಗುತ್ತಿರುವುದು ಮತ್ತೊಂದು ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications