Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇವದತ್ ಪಡಿಕ್ಕಲ್‌, ನವದೀಪ್ ಸೈನಿಗೆ ಅನುಭವವನ್ನು ಧಾರೆಯೆರೆಯುವ ದಿಗ್ಗಜರು

ಸದ್ಯ ಆರ್‌ಸಿಬಿಯಲ್ಲಿ ಫುಲ್ ಹವಾ ಮಾಡ್ತಿರೋದು ಎಂದಿನಂತೆ ಒಂದು ಕಡೆ ಮಿಸ್ಟರ್ 360 ಖ್ಯಾತಿಯ ಎಬಿಡಿ ಆದ್ರೆ, ಮತ್ತೊಂದೆಡೆ ಯುವ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್ .

ಹೌದು ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್‌ಸಿಬಿ ಪಾಲಿಗೆ ದೇವದತ್‌ ದೇವದೂತನಂತೆ ಬಿಂಬಿತವಾಗಿದ್ದಾನೆ. ಏಕೆಂದರೆ ಆತನ ಬ್ಯಾಟಿಂಗ್‌ ಅಂತದ್ದು. ಅದ್ಭುತ ಬ್ಯಾಟಿಂಗ್‌ ಜೊತೆಗೆ ತಂಡದ ಎರಡು ಗೆಲುವಿಗೆ ಕಾರಣವಾಗಿರುವ ಭವಿಷ್ಯದ ಸ್ಟಾರ್‌ ಕ್ರಿಕೆಟಿಗ ಈತ. ಎರಡು ಅರ್ಧಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಪಡಿಕ್ಕಲ್ ಕ್ಯಾಪ್ಟನ್ ಕೊಹ್ಲಿಯ ಮನಗೆದ್ದಿದ್ದಾನೆ

ದೇವದತ್ ಪಡಿಕ್ಕಲ್‌ಗೆ ಕಿಂಗ್ ಕೊಹ್ಲಿಯಿಂದಲೇ ಪಾಠ

ದೇವದತ್ ಪಡಿಕ್ಕಲ್‌ಗೆ ಕಿಂಗ್ ಕೊಹ್ಲಿಯಿಂದಲೇ ಪಾಠ

ಆರ್‌ಸಿಬಿಯ ಗೆಲುವಿನ ರೂವಾರಿಗಳಲ್ಲಿ ಒಬ್ಬನಾಗಿ ಮಿಂಚುತ್ತಿರುವ ದೇವದತ್‌ ತಂಡದ ಪರ ಮುಂದಿನ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆ ನೀಡುತ್ತಾರೆಂಬ ವಿಶ್ವಾಸ ದುಪ್ಪಟ್ಟಾಗಿದೆ. ಇದಕ್ಕೆ ಕಾರಣ ಕ್ಯಾಪ್ಟನ್ ಕೊಹ್ಲಿಯೇ ಪಡಿಕ್ಕಲ್‌ಗೆ ಕೋಚ್ ರೂಪದಲ್ಲಿ ಕ್ರಿಕೆಟ್ ಪಾಠ ಹೇಳಿಕೊಡುತ್ತಿದ್ದಾರೆ.

ಅವಕಾಶ ಕೊಟ್ಟು ಸಾಕಾಯ್ತು, ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ತಂಡದಿಂದ ಕೈ ಬಿಡುವ ಸಮಯ ಬಂದಾಯ್ತು!

ವೈಟ್‌ ಬಾಲ್ ಕ್ರಿಕೆಟ್‌ನ ಗ್ರೇಟೆಸ್ಟ್‌ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನಾದ ಕೊಹ್ಲಿ ದೇವದತ್‌ ಪಡಿಕ್ಕಲ್‌ಗೆ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಿದ್ದಾರೆ.

ತನ್ನ ಅನುಭವ ಧಾರೆಯೆರೆಯುತ್ತಿರುವ ಮೆಂಟರ್

ತನ್ನ ಅನುಭವ ಧಾರೆಯೆರೆಯುತ್ತಿರುವ ಮೆಂಟರ್

ಹೌದು ಇತ್ತೀಚೆಗಷ್ಟೇ ಆರ್‌ಸಿಬಿ ನಿರ್ದೇಶಕ ಮೈಕ್ ಹಸನ್ ಹೇಳಿರುವ ಪ್ರಕಾರ ತಂಡದಲ್ಲಿ ಹೊಸದೊಂದು ನಿಯಮ ತಂದಿದ್ದಾರೆ. ಅದೇ ಮೆಂಟರ್ ಶಿಪ್ ಪ್ರೊಗ್ರಾಮ್. ಅಂದ್ರೆ ತಂಡದಲ್ಲಿರೋ ಹಿರಿಯ ಕ್ರಿಕೆಟಿಗರು, ತಮ್ಮ ಅನುಭವವನ್ನ ಯುವ ಕ್ರಿಕೆಟಿಗರಿಗೆ ಧಾರೆಯೆರೆದು ಅವರನ್ನ ಬೆಳೆಸೋದು. ಈ ಮೆಂಟರ್ ಶಿಪ್ ಪ್ರೋಗ್ರಾಮ್ ನಲ್ಲಿ ಕ್ಯಾಪ್ಟನ್ ಕೊಹ್ಲಿಗೆ ಜೊತೆಯಾಗಿದ್ದು ನಮ್ಮ ಹೆಮ್ಮೆಯ ಕನ್ನಡಿಗ ದೇವದತ್ ಪಡಿಕ್ಕಲ್.

ಕೊಹ್ಲಿಗೆ ವೈಯಕ್ತಿಕ ಮಾರ್ಗದರ್ಶಕನಾಗಿರುವ ವಿರಾಟ್

ಕೊಹ್ಲಿಗೆ ವೈಯಕ್ತಿಕ ಮಾರ್ಗದರ್ಶಕನಾಗಿರುವ ವಿರಾಟ್

ಮೈಕ್ ಹಸನ್ ತಿಳಿಸಿರುವಂತೆ ದೇವದತ್ ಪಡಿಕ್ಕಲ್ ಗೆ ಕೊಹ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ. ಪಡಿಕ್ಕಲ್ ಗೂ ವೈಯಕ್ತಿಕ ಮಾರ್ಗದರ್ಶಕರಿಲ್ಲ. ಇಬ್ಬರು ಆರಂಭಿಕರಾಗಿ ಯಶಸ್ಸು ಕಂಡವರೆ ಆಗಿದ್ದಾರೆ. ಇದು ಪಡಿಕ್ಕಲ್ ಗೆ ನೆರವಾಗಲಿದೆ

ಈ ಹೊಸ ಐಡಿಯಾ ತಂದಿದ್ದು ಸೈಮನ್ ಕಾಟಿಚ್

ಈ ಹೊಸ ಐಡಿಯಾ ತಂದಿದ್ದು ಸೈಮನ್ ಕಾಟಿಚ್

ಹೌದು, ಈ ಹೊಸ ಮೆಂಟರ್ ಶಿಪ್ ಪ್ರೊಗ್ರಾಮ್ ಆರ್‌ಸಿಬಿ ತಂಡದಲ್ಲಿ ತಂದಿದ್ದು ತಂಡದ ಹೆಡ್‌ ಕೋಚ್ ಸೈಮನ್ ಕಾಟಿಚ್. ಈಗಾಗಲೇ ಫುಟ್ಬಾಲ್ ಪಂದ್ಯಗಳಲ್ಲಿ ಈ ಐಡಿಯಾ ಯಶಸ್ಸು ಕಂಡಿದೆ. ಹೀಗಾಗಿ ಆರ್ ಸಿಬಿ ತಂಡದ ಹೆಡ್ ಕೋಚ್ ಸೈಮನ್ ಕಾಟಿಚ್, ಈ ಪ್ರೋಗ್ರಾಮ್ ಅನ್ನು ಆರ್ ಸಿಬಿ ತಂಡದಲ್ಲೂ ತಂದಿದ್ದಾರೆ.

ಈ ಮೆಂಟರ್ ಶಿಪ್ ಪ್ರೊಗ್ರಾಮ್ ಈಗಾಗಲೇ ಆರ್ ಸಿಬಿ ಆಟಗಾರರು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ, ನಿನ್ನೆ ದಿನವಿಡೀ ದೇವದತ್ ಪಡಿಕ್ಕಲ್ ಜೊತೆಯೆ ಪ್ರಾಕ್ಟೀಸ್ ಮಾಡಿದ್ದಾರೆ. ಪಡಿಕ್ಕಲ್ ಗೆ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ.

ನವದೀಪ್ ಸೈನಿಗೆ ಮೆಂಟರ್ ಡೇಲ್ ಸ್ಟೇನ್

ನವದೀಪ್ ಸೈನಿಗೆ ಮೆಂಟರ್ ಡೇಲ್ ಸ್ಟೇನ್

ಇನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಆರ್ ಸಿಬಿಗೆ ಗೆಲುವು ತಂದು ಕೊಟ್ಟ ನವದೀಪ್ ಸೈನಿಗೆ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಮೆಂಟರ್ ಆಗಿದ್ದಾರೆ. ಹೀಗಾಗಿ ಸೈನಿಗೆ ಸ್ಟೇನ್, ತಮ್ಮ ಅನುಭವವನ್ನ ಧಾರೆಯೆರೆಯುತ್ತಿದ್ದಾರೆ.

ಮುಂಬೈ ವಿರುದ್ಧ ಸೂಪರ್ ಓವರ್ ನಲ್ಲಿ ಗೆದ್ದು ಬೀಗಿರೋ ಆರ್ ಸಿಬಿ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಬಂದಿದೆ. ಹೀಗಾಗಿ ಕೋಚಿಂಗ್ ಸ್ಟಾಫ್ ತಂಡದಲ್ಲಿ ಮೆಂಟರ್ ಶಿಪ್ ಕಾರ್ಯಕ್ರಮ ಜಾರಿಗೆ ತಂದಿದೆ. ಆ ಮೂಲಕ ಇನ್ನೂ ಉತ್ತಮ ಪ್ರದರ್ಶನ ಹೊರ ತಗೆಯೋದಕ್ಕೆ ಯೋಜಿಸಿದೆ.

Story first published: Saturday, October 3, 2020, 9:26 [IST]
Other articles published on Oct 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+