Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದ, ಸಂಭಾವ್ಯ ಪ್ಲೇಯಿಂಗ್ 11 ತಿಳಿಸಿದ ಆಕಾಶ್ ಚೋಪ್ರಾ

CSK

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಮಾರ್ಚ್‌ 26ರಂದು ಮುಂಬೈನ ವಾಂಖೆಡೆ ಮೈದಾನವು ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ತಂಡದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಾಂಪಿಯನ್ ಸಿಎಸ್‌ಕೆ ಕೀ ಪ್ಲೇಯರ್‌ಗಳ ಅನುಪಸ್ಥಿತಿಯಲ್ಲಿ ಟೂರ್ನಿ ಆರಂಭಿಸಲಿದೆ.

ದೀಪಕ್ ಚಹಾರ್, ಮೋಯಿನ್ ಅಲಿ ಆರಂಭಿಕ ಪಂದ್ಯಗಳಿಗೆ ಅಲಭ್ಯ ಸಾಧ್ಯತೆ

ದೀಪಕ್ ಚಹಾರ್, ಮೋಯಿನ್ ಅಲಿ ಆರಂಭಿಕ ಪಂದ್ಯಗಳಿಗೆ ಅಲಭ್ಯ ಸಾಧ್ಯತೆ

ಸಿಎಸ್‌ಕೆ ತಂಡದ ಕೀ ಬೌಲರ್ ದೀಪಕ್ ಚಹಾರ್ ಮತ್ತು ಇಂಗ್ಲೆಂಡ್ ಮೂಲದ ಆಲ್‌ರೌಂಡರ್ ಮೊಯಿನ್ ಅಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಾರ್ಚ್ 26ರಂದು ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ದೀಪಕ್ ಚಹಾರ್ ಇಂಜ್ಯುರಿಯಿಂದ ಚೇತರಿಸಿಕೊಳ್ಳುತ್ತಿದ್ದು, ಮೋಯಿನ್ ಅಲಿ ವೀಸಾಗಾಗಿ ಕಾಯುತ್ತಿದ್ದಾರೆ.

CSK Jersey for IPL 2022: ನೂತನ ಜರ್ಸಿ ಬಿಡುಗಡೆಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್

ರುತುರಾಜ್ ಮತ್ತು ಡೆವೊನ್ ಕಾನ್ವೆ ಓಪನಿಂಗ್ ಜೋಡಿ

ರುತುರಾಜ್ ಮತ್ತು ಡೆವೊನ್ ಕಾನ್ವೆ ಓಪನಿಂಗ್ ಜೋಡಿ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನಿಂಗ್ ಜೋಡಿಯಾಗಿ ಕಳೆದ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಓಪನಿಂಗ್ ಆಡಲಿದ್ದಾರೆ ಎಂದು ಆಕಾಶ್ ಚೋಪ್ರಾ ಅಂದಾಜಿಸಿದ್ದಾರೆ. ಬಲಗೈ ಮತ್ತು ಎಡಗೈ ಬ್ಯಾಟಿಂಗ್ ಜೋಡಿಯನ್ನು ಸಿಎಸ್‌ಕೆ ಆರಂಭಿಕ ಕಣಕ್ಕಿಳಿಸಲಿದೆ.

ಮೊಯಿನ್ ಅಲಿ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಒಮ್ಮೆ ಮೊಯಿನ್ ಅಲಿ ಕಂಬ್ಯಾಕ್ ಆದ ಬಳಿಕ ಮೂರನೇ ಕ್ರಮಾಂಕದ ಬ್ಯಾಟಿಂಗ್ ಕುರಿತು ಮರು ಚಿಂತನೆ ನಡೆಸಲಾಗುವುದು. ಇದಾದ ಬಳಿಕ ಅಂಬಟಿ ರಾಯುಡು, ರವೀಂದ್ರ ಜಡೇಜಾ , ಶಿವಂ ದುಬೆ ಬಳಿಕ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯಬಹುದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

IPL 2022: ಅತಿ ಹೆಚ್ಚು ಶತಕ ಸಿಡಿಸಿದ ತಂಡಗಳಲ್ಲಿ ಆರ್‌ಸಿಬಿಗೆ ಮೊದಲ ಸ್ಥಾನ!

CSK ಸಂಭಾವ್ಯ ಪ್ಲೇಯಿಂಗ್ 11

CSK ಸಂಭಾವ್ಯ ಪ್ಲೇಯಿಂಗ್ 11

ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ನಾಯಕ), ಡ್ವೇನ್ ಬ್ರಾವೋ, ರಾಜವರ್ಧನ್ ಹಂಗರ್ಗೇಕರ್, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ

Story first published: Wednesday, March 23, 2022, 17:23 [IST]
Other articles published on Mar 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+